ವಿದ್ಯಾವಂತ ಯುವಕರು ರಾಜಕಾರಣಕ್ಕೆ ಬರಲಿ: ಕೆ.ಎನ್.ಆರ್

214

Get real time updates directly on you device, subscribe now.

ಮಧುಗಿರಿ: ಯುವಕರು ವಿದ್ಯಾವಂತರು ಹೆಚ್ಚಾಗಿ ರಾಜಕಾರಣಕ್ಕೆ ಬಂದಾಗ ಮಾತ್ರ ಸಾಮಾಜಿಕವಾಗಿ ಬದಲಾವಣೆ ತರಲು ಸಾಧ್ಯ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ತಿಳಿಸಿದರು.

ಪಟ್ಟಣದ ತಮ್ಮ ನಿವಾಸದಲ್ಲಿ ಗ್ರಾಮ ಪಂಚಾಯಿತಿಗೆ ಆಯ್ಕೆಯಾದ ಕಲಾ ಪ್ರಪೂರ್ಣ ಕುಮಾರ್ ಅವರನ್ನು ಅಭಿನಂದಿಸಿ ಮಾತನಾಡಿ, ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಮಾತ್ರ ಚುನಾವಣೆಗಳಲ್ಲಿ ಜಯಗಳಿಸಬಹುದು ಎಂಬುದಕ್ಕೆ ಈ ಗ್ರಾಮ ಪಂಚಾಯಿತಿ ಉಪಚುನಾವಣೆ ಸಾಕ್ಷಿಯಾಗಿದೆ, ಈ ಫಲಿತಾಂಶವು ಜಾತಿ- ಮತ ಹಣ ಮೀರಿದ ಫಲಿತಾಂಶವಾಗಿದೆ, ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮ ಪಂಚಾಯಿತಿ ಕೇಂದ್ರಗಳಿಗೆ ಭೇಟಿ ನೀಡಿ ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿಸಲಾಗುವುದು, ಮುಂದಿನ ಚುನಾವಣೆಯಲ್ಲಿ ಪ್ರತಿಯೊಬ್ಬರು ಒಗ್ಗಟ್ಟಾಗಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಬೇಕು, ಆಗ ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯ, ನೂತನವಾಗಿ ಆಯ್ಕೆಯಾದ ಸದಸ್ಯರು ಜನತೆಗೆ ಉತ್ತಮ ಸೇವೆ ನೀಡಿದಾಗ ಮಾತ್ರ ಮತ ಹಾಕಿದ ಮತದಾರರಿಗೆ ಗೌರವ ನೀಡಿದಂತಾಗುತ್ತದೆ ಎಂದು ತಿಳಿಸಿದರು.
ಮರುವೇಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂರಕ್ಕೂ ಹೆಚ್ಚು ಕಾರ್ಯಕರ್ತರು ಈ ಸಂದರ್ಭದಲ್ಲಿ ಹಾಜರಿದ್ದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್ ಬಾಬು, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಬಿ.ಮರಿಯಣ್ಣ, ವಿಎಸ್ಎಸ್ಎನ್ ಅಧ್ಯಕ್ಷ ಫಾಸಿಲ್ ಖಾನ್, ಮರುವೇಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವ್ಯ ಕೇಶವಮೂರ್ತಿ, ಮುಖಂಡರಾದ ಡಿ.ಎಚ್.ನಾಗರಾಜು, ಸುಬ್ರಹ್ಮಣ್ಯ, ಹನುಮಂತ, ಬಸವರಾಜು, ಎಸ್.ಮಂಜು, ನಾಗಭೂಷಣಾಚಾರ್, ಗೋವಿಂದರಾಜು, ಸುಬ್ಬಣ್ಣ, ಅಂಗಡಿ ರಂಗಣ್ಣ, ಪ್ರಸನ್ನಕುಮಾರ್, ನಾಗರಾಜು, ಪೆದ್ದಗಯ್ಯ, ಡೈರಿ ರಂಗನಾಥ, ರವಿಕುಮಾರ್, ಗೂಡ ಸಾಬ್, ನಾಗಾರ್ಜುನ, ಬಿದರಣ್ಣ, ಗ್ರಾಪಂ ಸದಸ್ಯರಾದ ಗೌರಮ್ಮ, ನಾಗಭೂಷಣ ಮತ್ತಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!