ಸರ್ಕಾರಗಳ ದಬ್ಬಾಳಿಕೆ ವಿರುದ್ಧ ಹೋರಾಟ ಅಗತ್ಯ

192

Get real time updates directly on you device, subscribe now.

ತುಮಕೂರು: ರೈತ ಕಾರ್ಮಿಕರ ಚಳವಳಿಯಿಂದ ಜನರನ್ನು ಸಂಕಷ್ಟದಿಂದ ದೂರ ಮಾಡಬಹುದಾಗಿದೆ, ಜನವಿರೋಧಿ ಬಂಡವಾಳಶಾಹಿ ಸರ್ಕಾರಗಳ ವಿರುದ್ಧ ಕಾರ್ಮಿಕರ ಹೋರಾಟ ಗೆಲುವು ಸಾಧಿಸದಿದ್ದರು ರೈತ, ಕಾರ್ಮಿಕ, ಜನವಿರೋಧಿ ಕಾಯ್ದೆ ತಡೆಯಲು ಸಾಧ್ಯವಾಗಿದೆ ಎಂದು ಸಿಐಟಿಯು ರಾಷ್ಟ್ರೀಯ ಅಧ್ಯಕ್ಷೆ ಹೇಮಲತಾ ಅಭಿಪ್ರಾಯಪಟ್ಟಿದ್ದಾರೆ.

ನಗರದ ಕನ್ನಡಭವನದಲ್ಲಿ ನಡೆದ ಸಿಐಟಿಯು ರಾಜ್ಯ ಸಂಘಟನಾ ಕಾರ್ಯಕಾರಣಿಯಲ್ಲಿ ಮಾತನಾಡಿ, ದೇಶದಲ್ಲಿ ಪಕ್ಷಗಳು ಬದಲಾದರೂ ಉದಾರೀಕರಣದಲ್ಲಿ ಯಾವ ಬದಲಾವಣೆಯೂ ಆಗಿಲ್ಲ, ಬಿಜೆಪಿ, ಕಾಂಗ್ರೆಸ್ ಒಂದೇ ನಾಣ್ಯದ ಒಂದೇ ಮುಖವಾಗಿದ್ದು, ಇಂತಹ ರಾಜಕಾರಣವನ್ನು ಬದಲಿಸಬೇಕಾದ ಅನಿವಾರ್ಯತೆ ಇದ್ದು, ರೈತ, ಕಾರ್ಮಿಕರು ಒಂದಾಗಿ ಹೋರಾಟ ರೂಪಿಸಬೇಕಿದೆ ಎಂದರು.
ಕಾರ್ಮಿಕ ವರ್ಗದ ಜಾಗೃತಿಯಿಂದಾಗಿ ನವ ಉದಾರೀಕರಣದ ವೇಗ ಕಡಿಮೆ ಮಾಡಿದೆ, ವೇತನ, ಸಾಮಾಜಿಕ ಭದ್ರತೆ, ಉದ್ಯೋಗ ಭದ್ರತೆಯ ಕಾರ್ಮಿಕ ಹಕ್ಕಿನ ಮೇಲೆ ಸರ್ಕಾರಗಳು ದಾಳಿ ನಡೆಸುತ್ತಿದ್ದು, ಸರ್ಕಾರಗಳ ದಬ್ಬಾಳಿಕೆಯ ವಿರುದ್ಧ ರೈತರು ಹಾಗೂ ಕಾರ್ಮಿಕರು ಸಂಯುಕ್ತವಾಗಿ ಐಕ್ಯತೆಯ ಹೋರಾಟ ನಡೆಸಬೇಕಾಗಿದೆ, ದುಡಿಯುವ ವರ್ಗ ಐಕ್ಯತೆ ಮುರಿಯಲು ಸರ್ಕಾರ ಪ್ರಯತ್ನ ಮಾಡುತ್ತಿದೆ ಎಂದರು.
ಹಿಂದೂತ್ವದ ಹೆಸರಿನಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಬಳಸುತ್ತಿರುವ ತಂತ್ರವಾಗಿದ್ದು, ಹಿಂದೂ ರಾಷ್ಟ್ರ ಎಂಬುದು ಜನರಿಗೆ ಸಂಬಂಧಿಸಿದ ವಿಷಯವೇ ಅಲ್ಲ, ಅಧಿಕಾರಕ್ಕಾಗಿ ಬಳಸುವ ಅಸ್ತ್ರವಾಗಿದ್ದು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿರುವ ಜನರ ಸಂಕಷ್ಟ ಹೆಚ್ಚಾಗಿದ್ದು, ಸರ್ಕಾರದ ವಿರುದ್ಧ ಚಳವಳಿ ರೂಪಿಸಲು ಆಗದಂತೆ ತಡೆಯಲಾಗುತ್ತಿದೆ ಎಂದು ಹೇಳಿದರು.
ರಾಜ್ಯ ಮುಖಂಡ ಮೀನಾಕ್ಷಿ ಸುಂದರಂ ಮಾತನಾಡಿ, ಕಳೆದ 52 ವರ್ಷಗಳಿಂದ ಅಸಮಾನತೆಯ ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತಿದ್ದು, ಅಸಮಾನತೆ, ಅನ್ಯಾಯ, ಐಕ್ಯತೆಯನ್ನು ಮುರಿಯುವ ಶಕ್ತಿಯ ವಿರುದ್ಧ ಈಗ ನಡೆಯುತ್ತಿರುವ ಸಂಘಟನಾ ಮಧ್ಯತರ ವಿಮರ್ಶ ಕಾರ್ಯಾಗಾರ ಸಿಐಟಿಯುಗೆ ಹೆಚ್ಚಿನ ಶಕ್ತಿ ದೊರೆಯಲಿದೆ ಎಂದು ಹೇಳಿದರು.
ಸಿಐಟಿಯು ಮುಖಂಡೆ ಎಸ್.ವರಲಕ್ಷ್ಮೀ ಮಾತನಾಡಿ, ರಾಜ್ಯ ಸರ್ಕಾರ ಹೋರಾಟಕ್ಕೆ ಆಸ್ಪದ ನೀಡದೆ ಪ್ರಜಾಸತ್ತಾತ್ಮಕ ಹಕ್ಕುಗಳ ಮೇಲೆ ದಾಳಿ ಮಾಡುತ್ತಿದ್ದು, ಕಾರ್ಮಿಕರು ಹಾಗೂ ದಮನಿತರ ಹಕ್ಕುಗಳನ್ನು ರಕ್ಷಿಸಲು ಮುಂದಾಗುತ್ತಿಲ್ಲ, ಭವಿಷ್ಯನಿಧಿಯನ್ನು ನೀಡದೇ ಅಂಗನವಾಡಿ ನೌಕರರನ್ನು ಬೀದಿಗೆ ತಳ್ಳುವ, ಅತಿಥಿ ಉಪನ್ಯಾಸಕರ ಸಮಸ್ಯೆ ಅರಿಯದ ಸಚಿವರ ಧಿಮಾಕು ಪ್ರಜಾಪ್ರಭುತ್ವದಲ್ಲಿ ಅತಿರೇಕದ ವರ್ತನೆ ಎಂದರು.
ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್, ಹೆಚ್.ಎನ್.ಗೋಪಾಲಗೌಡ, ಸುನಂದ, ಮಾಲಿನಿ ಮೇಸ್ತ, ಸಿಐಟಿಯು ಕಾರ್ಯದರ್ಶಿ ಕಮಲಮ್ಮ, ಎನ್.ಕೆ.ಸುಬ್ರಮಣ್ಯ ಇತರರಿದ್ದರು.

Get real time updates directly on you device, subscribe now.

Comments are closed.

error: Content is protected !!