ಹೆಜ್ಜೆನು ದಾಳಿ- ಗ್ರಾಪಂ ನಿವೃತ್ತ ಕಾರ್ಯದರ್ಶಿ ಸಾವು

214

Get real time updates directly on you device, subscribe now.

ಕೊರಟಗೆರೆ: ಆಲದ ಮರದಲ್ಲಿದ್ದ ಹೆಜ್ಜೆನು ಹುಳುಗಳು ಎಸ್ಸಾರ್ ಬಂಕಿಗೆ ಪೇಟ್ರೊಲ್ಗೆ ಬರುತ್ತೀದ್ದ 30 ಕ್ಕೂ ಅಧಿಕ ಪ್ರಯಾಣಿಕರ ಮೇಲೆ ದಾಳಿ ನಡೆಸಿದ ಪರಿಣಾಮ ನಿವೃತ್ತ ಗ್ರಾಪಂ ಕಾರ್ಯದರ್ಶಿ ಕೃಷ್ಣಮೂರ್ತಿ ಸ್ಥಳದಲ್ಲಿಯೇ ಮೃತಪಟ್ಟರೆ ಇನ್ನಿಬ್ಬರು ತುಮಕೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ಇರಕಸಂದ್ರ ಕಾಲೋನಿ ಗ್ರಾಮದ ಎಸ್ಸಾರ್ ಪೆಟ್ರೋಲ್ ಬಂಕ್ನ ಸಮೀಪದ ಆಲದ ಮರದಲ್ಲಿದ್ದ ಹೆಜ್ಜೆನು ದಿಡೀರ್ ದಾಳಿ ನಡೆಸಿದ ಪರಿಣಾಮ ಹುಲವಂಗಲ ಗ್ರಾಮದ ನಿವೃತ್ತ ಗ್ರಾಪಂ ಕಾರ್ಯದರ್ಶಿ ಕೃಷ್ಣಮೂರ್ತಿಗೆ 500ಕ್ಕೂ ಅಧಿಕ ಜೇನು ನೋಣ ಕಚ್ಚಿರುವ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಇರಕಸಂದ್ರ ಕಾಲೋನಿ ಸಮೀಪವೇ ಇರುವ ಎಸ್ಸಾರ್ ಪೆಟ್ರೋಲ್ ಬಂಕ್ಗೆ ವಾಹನ ಸವಾರರು ಪೆಟ್ರೋಲ್ಗಾಗಿ ಬರುತ್ತಿದ್ದ ವೇಳೆ ಘಟನೆ ನಡೆದಿದೆ. ಹೆಜ್ಜೆನು ದಾಳಿಯ ವೇಳೆ 30ಕ್ಕೂ ಅಧಿಕ ಜನರಿಗೆ ಜೇನು ನೋಣಗಳು ಕಚ್ಚಿವೆ. ತುಮಕೂರು ಸರಕಾರಿ ಆಸ್ಪತ್ರೆಯಲ್ಲಿ ಪಟ್ಟದೇವರಪಾಳ್ಯದ ಸೋಮಣ್ಣ(85), ಸಂಕೇನಹಳ್ಳಿ ಜಯಪ್ರಕಾಶ್ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೊರಟಗೆರೆ ತಹಶೀಲ್ದಾರ್ ನಾಹೀದಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ ಇರಕಸಂದ್ರ ಕಾಲೋನಿ ಬಳಿ ಸ್ಥಳೀಯರ ಮೇಲೆ ಹೆಜ್ಜೆನು ದಾಳಿ ಮಾಡಿದೆ, ಕಂದಾಯ, ಕೃಷಿ, ಅರಣ್ಯ ಇಲಾಖೆ ಜಂಟಿ ಸಭೆ ನಡೆಸಿ ಸರಕಾರಕ್ಕೆ ಪರಿಹಾರಕ್ಕೆ ಮನವಿ ಮಾಡುತ್ತೇವೆ, ಮತ್ತೆ ಇಂತಹ ಘಟನೆ ಆಗದಂತೆ ಕ್ರಮ ವಹಿಸುತ್ತೇವೆ, ಈ ಸಂಬಂಧ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದರು.
ಕೃಷಿ ಇಲಾಖೆಯ ನಾಗರಾಜು, ಅರಣ್ಯ ಇಲಾಖೆ ಸುರೇಶ್, ಕೋಳಾಲ ಪಿ.ಎಸ್.ಐ ಮಹಾಲಕ್ಷ್ಮೀ, ಗ್ರಾಪಂ ಪಿಡಿಓ ರಾಮಚಂದ್ರ ರಾವ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೋಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Get real time updates directly on you device, subscribe now.

Comments are closed.

error: Content is protected !!