ಗ್ರಾಹಕನ ಸೋಗಿನಲ್ಲಿ ತೆರಳಿ ವಂಚನೆ ಬಯಲು ಮಾಡಿದ ತಹಶೀಲ್ದಾರ್

211

Get real time updates directly on you device, subscribe now.

ತುರುವೇಕೆರೆ: ಗ್ರಾಹಕರಿಂದ ದಿನಸಿ ಪದಾರ್ಥಗಳಿಗೆ ನಿಗದಿಪಡಿಸಿದ ದರಕ್ಕಿಂತ ದುಪ್ಪಟ್ಟು ಹಣ ಪಡೆಯುತ್ತಿದ್ದಾರೆಂಬ ಸಾರ್ವಜನಿಕ ದೂರಿನ ಮೇರೆಗೆ ತಹಶೀಲ್ದಾರ್ ನಯೀಮುನ್ನಿಸ್ಸಾ ಗ್ರಾಹಕನ ಸೋಗಿನಲ್ಲಿ ತೆರಳಿ ದಿನಸಿ ಖರೀದಿಸಿ ಅಂಗಡಿ ಮಾಲೀಕನ ವಂಚನೆ ಬಯಲಿಗೆಳೆದು ಅಂಗಡಿಗೆ ಬೀಗ ಮುದ್ರೆ ಹಾಕಿಸಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ತುರುವೇಕೆರೆ ತಹಶೀಲ್ದಾರ್

ತಾಲ್ಲೂಕಿನ ಮಾಯಸಂದ್ರ ಮುಖ್ಯ ರಸ್ತೆಯಲ್ಲಿರುವ ಕಲಾ ಪ್ರಾವಿಷನ್ ಸ್ಟೋರ್ ನಲ್ಲಿ ದಿನಸಿ ಪದಾರ್ಥಗಳಿಗೆ ಹೆಚ್ಚಿಗೆ ಹಣ ಪಡೆಯುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬಂದಿತ್ತು.
ಖುದ್ದು ತಹಶೀಲ್ದಾರ್ ನಯೀಮುನ್ನಿಸ್ಸಾ ರವರು ತಮ್ಮ ಸಿಬ್ಬಂದಿ ಜೊತೆಗೆ ಅಂಗಡಿಗೆ ತೆರಳಿ ಗ್ರಾಹಕರಂತೆ ದಿನಸಿ ವಸ್ತು ಖರೀದಿಗೆ ಮುಂದಾದ ತಹಶೀಲ್ದಾರ್ ಅಂಗಡಿಯ ಮಾಲೀಕ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿಗೆ ಪಡೆಯುತ್ತಿರುವುದು ಖಚಿತವಾಗಿದೆ. ಈ ಹಿನ್ನಲೆಯಲ್ಲಿ ಕೂಡಲೇ ಅಂಗಡಿಗೆ ಬೀಗ ಜಡಿಯುವಂತೆ ಆದೇಶಿಸಿ ಅಂಗಡಿ ಮಾಲೀಕನ ವಿರುದ್ದ ಕ್ರಮ ಕೈಗೊಂಡಿರುವುದಾಗಿ ತುಮಕೂರು ವಾರ್ತೆಗೆ ತಿಳಿಸಿದ್ದಾರೆ.
ಅಂಗಡಿ ಮಾಲೀಕನ ವ್ಯಾಪಾರ ವಹಿವಾಟು ಕುರಿತು ತನಿಖೆ ನೆಡೆಸುವಂತೆ ತಿಪಟೂರು ವಾಣಿಜ್ಯ ತೆರಿಗೆ ಅಧಿಕಾರಿಗಳಿಗೆ ತಹಶೀಲ್ದಾರ್ ಪತ್ರ ಬರೆದಿರುವುದಾಗಿ ಹೇಳಿದರು. ಅಗತ್ಯ ವಸ್ತುಗಳಿಗೆ ಅಂಗಡಿ ಮಾಲೀಕರು ಹೆಚ್ಚು ಹಣ ಪಡೆಯುವುದು ಕಂಡು ಬಂದರೇ ಸಹಾಯವಾಣಿ 08139-287325 ಗೆ ಕರೆ ಮಾಡಿ ಎಂದಿದ್ದಾರೆ.

Get real time updates directly on you device, subscribe now.

Comments are closed.

error: Content is protected !!