ತುಮಕೂರು: ಜಿಲ್ಲೆಯಾದ್ಯಂತ ಬುಧವಾರ ರೋಹಿಣಿ ಮಳೆ ಅನೇಕ ಕಡೆಗಳಲ್ಲಿ ಸುರಿದು ಬಿಸಿಲಿನಿಂದ ಬಸವಳಿಗೆ ಜನತೆಗೆ ತಂಪೆರದರೆ, ರೈತರಲ್ಲಿ ಮುಂಗಾರು ಬಿತ್ತನೆ ಕೈಗೊಳ್ಳುವ ಖುಷಿ ತಂದಿದೆ.
ಬುಧವಾರ ಮಧ್ಯಾಹ್ನದ ನಂತರ ಬಿಸಿಲು ಪ್ರಮಾಣ ಕಡಿಮೆಯಾಗಿ ಮೋಡ ಕವಿದ ವಾತಾವರಣ ಇತ್ತು. ಸಂಜೆ 6ರ ವೇಳೆ ತುಮಕೂರು ಹಾಗೂ ಸುತ್ತಲಿನ ಪ್ರದೇಶದಲ್ಲಿ ಒಂದು ತಾಸು ಬಿರುಸಿನ ಮಳೆ ಸುರಿಯಿತು.
ಬಿತ್ತನೆ ಆರಂಭಕ್ಕೆ ಕ್ಷಣಗಣನೆ: ಮೇ ತಿಂಗಳ 3ನೇ ವಾರದಲ್ಲಿ ಜಿಲ್ಲೆಯಾದ್ಯಂತ 2-3 ಬಾರಿ ಕೃತಿಕಾ ಮಳೆಯಾಗಿದ್ದರಿಂದ ರೈತರು ಮುಂಗಾರು ಬಿತ್ತೆನೆಗೆ ಜಮೀನು ಹದಗೊಳಿಸಿ, ಮಳೆಗಾಗಿ ಕಾಯುತ್ತಿದ್ದರು. ಆದರೀಗ ರೋಹಿಣಿ ಮಳೆ ರೈತರಲ್ಲಿ ಭರವಸೆ ಮೂಡಿಸಿದೆ.
ರೋಹಿಣಿ ಮಳೆ ತಂದ ಹರ್ಷ
Get real time updates directly on you device, subscribe now.
Comments are closed.