ಗುಬ್ಬಿ: ಶಿಕ್ಷಣ ಸಚಿವರು ಮನೆಯಲ್ಲಿ ಇಲ್ಲದಂತಹ ಸಂದರ್ಭದಲ್ಲಿ ಬೆಂಕಿ ಇಡಲು ಮುಂದಾಗುವುದು ನೋಡಿದರೆ ಇದು ಕಾಂಗ್ರೆಸ್ ಪುಂಡರ ಕೃತ್ಯವೇ ಆಗಿದೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಪಂಚಾಕ್ಷರಿ ಆರೋಪಿಸಿದರು.
ಪಟ್ಟಣದ ತಾಲೂಕು ಕಚೇರಿ ಮುಂಭಾಗದಲ್ಲಿ ಬಿಜೆಪಿ ಪಕ್ಷದಿಂದ ಪ್ರತಿಭಟನೆ ಮಾಡಿ ಮಾತನಾಡಿ, ನಿಜವಾದ ಇತಿಹಾಸವನ್ನು ವಿದ್ಯಾರ್ಥಿಗಳಿಗೆ ತಿಳಿಸಲು ಮುಂದಾಗಿರುವ ಸರಕಾರದ ನಿರ್ಧಾರದಿಂದ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಕಮ್ಯುನಿಸ್ಟ್ ಗಳಿಗೆ ಸಹಿಸಲು ಆಗುತ್ತಿಲ್ಲ, ಹಾಗಾಗಿ ಸರಳ ಸಜ್ಜನಿಕೆಯ ಶಿಕ್ಷಣ ಸಚಿವ ನಾಗೇಶ್ ಅವರ ಮನೆಯ ಮೇಲೆ ದಾಳಿ ಮಾಡಲು ಕಾಂಗ್ರೆಸ್ಸಿಗರು ಮುಂದಾಗಿದ್ದಾರೆ, ಈ ಕೃತ್ಯ ಮಾಡಿರುವಂತಹ ಪುಂಡರನ್ನು ಕಾನೂನು ಕ್ರಮ ತೆಗೆದುಕೊಂಡು ಗಡಿಪಾರು ಮಾಡಬೇಕು ಎಂದು ಆಗ್ರಹ ಮಾಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬೈರಪ್ಪ ಮಾತನಾಡಿ ಸಮಾಜ, ದೇಶ ಒಡೆಯುವ ಕೆಲಸವನ್ನು ಕಾಂಗ್ರೆಸ್ ಸ್ವಾತಂತ್ರ್ಯ ಪೂರ್ವದಿಂದಲೂ ಮಾಡುತ್ತಲೇ ಬಂದಿದೆ, ಮತ್ತೆ ಈಗ ಆರ್ಯ, ದ್ರಾವಿಡ, ವೀರಶೈವ ಲಿಂಗಾಯತ ಎಂಬ ಹೆಸರಿನಲ್ಲಿ ದೇಶ ಜಾತಿ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ, ಈಗಾಗಲೇ ಧೂಳಿಪಟವಾಗಿರುವ ಕಾಂಗ್ರೆಸ್ ಇಡೀ ದೇಶದಲ್ಲಿ ಪೊರಕೆ ಹಿಡಿದಿರುವ ಪಕ್ಷದಂತೆ ಎರಡು ರಾಜ್ಯದಲ್ಲಿ ಸರ್ಕಾರ ಮಾಡಿದೆ, ಆ ಸ್ಥಿತಿಗೆ ಜನ ತಲುಪಿಸಿದ್ದರು ಸಹ ಇವರಿಗೆ ಇವರಿಗೆ ಬುದ್ಧಿ ಬಂದಿಲ್ಲ ಎಂದು ತಿಳಿಸಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣಪ್ಪ ಸ್ವಾಮಿ ಮಾತನಾಡಿ ಬೆಂಗಳೂರಿನಲ್ಲಿ ಅಖಂಡ ಶ್ರೀನಿವಾಸ್ ಮನೆಯ ಮೇಲೆ ನುಗ್ಗಿದ ಪುಂಡರ ರೀತಿಯಲ್ಲಿ ಸಜ್ಜನಿಕೆಯ ರಾಜಕಾರಣಿಯಾಗಿರುವ ನಾಗೇಶ್ ಅವರ ಮನೆಯ ಮೇಲೆ ನುಗ್ಗಿ ಬೆಂಕಿ ಇಡಲು ಮುಂದಾಗಿರುವ ದುಷ್ಟರದ್ದು ಅಕ್ಷಮ್ಯ ಅಪರಾಧವಾಗಿದ್ದು ಕೂಡಲೇ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ಯತೀಶ್, ಗಂಗಣ್ಣ, ಮುಖಂಡರಾದ ಎಸ್.ಡಿ.ದಿಲೀಪ್ ಕುಮಾರ್, ಚಂದ್ರಶೇಖರ ಬಾಬು, ಕೆಎಂಎಫ್ ಚಂದ್ರಶೇಖರ್, ಆನ ಲಿಂಗಪ್ಪ, ನಂಜೇಗೌಡ, ಸಿದ್ದರಾಮಣ್ಣ, ಲೋಕೇಶ್, ಉಮೇಶ್ ಇನ್ನಿತರರು ಇದ್ದರು.
ಸಚಿವ ನಾಗೇಶ್ ಮನೆ ಮೇಲೆ ದಾಳಿ ಖಂಡನೀಯ
Get real time updates directly on you device, subscribe now.
Prev Post
Comments are closed.