ಮೋದಿ ದೇಶದ ಅಭಿವೃದ್ಧಿಗೆ ಶ್ರಮಿಸಿದ್ದಾರೆ: ಚಿದಾನಂದಗೌಡ

211

Get real time updates directly on you device, subscribe now.

ಮಧುಗಿರಿ: ಮೋದಿ ಅವರ 8 ವರ್ಷದ ಆಡಳಿತಾವಧಿಯಲ್ಲಿ ದೇಶದ ಪ್ರಗತಿಯ ದಿಕ್ಕು ಬದಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಂ. ಚಿದಾನಂದ ಗೌಡ ತಿಳಿಸಿದರು.

ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷ ವಿರೋಧ ಪಕ್ಷಕ್ಕೂ ಲಾಯಕ್ಕಿಲ್ಲ, ಮೋದಿ ನೇತೃತ್ವದ ಕೇಂದ್ರ ಸರಕಾರ ಉತ್ತಮ ಆಡಳಿತ ನೀಡುತ್ತಿದೆ, ಇಡೀ ದೇಶ ಮೋದಿ ಪರವಾಗಿದೆ, ದೇಶದ ರೈತರ, ಮಹಿಳೆಯರ ಹಾಗೂ ವಿದ್ಯಾರ್ಥಿಗಳಿಗಾಗಿ ಅನೇಕ ಯೋಜನೆ ರೂಪಿಸಿ ಜಾರಿಗೊಳಿಸಿದ್ದಾರೆ ಎಂದರು.
ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮನೆಗೆ ಬೆಂಕಿ ಹಚ್ಚಿರುವ ಎನ್.ಎಸ್.ಯು.ಐ ಕಾರ್ಯಕರ್ತರ ಪುಂಡಾಟಿಕೆ ಖಂಡನಾರ್ಹ ಎಂದ ಅವರು, ಕಾಂಗ್ರೇಸ್ ಪಕ್ಷ ಗೊಂದಲ ಸೃಷ್ಠಿಸುವುದನ್ನು ಬಿಟ್ಟು ಮಾನ ಮರ್ಯಾದೆ ಉಳಿಸಿಕೊಳಲ್ಲು ಮುಂದಾಗಲಿ ಎಂದರು.
ರಾಜ್ಯ ಸರಕಾರ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡುತ್ತಿದ್ದು, ಹೊಸ ಪೀಠೋಪಕರಣಗಳನ್ನು ಖರೀದಿಸಲು 500 ಕೋಟಿ ರೂ. ಹಾಗೂ ಶಾಲಾ ಕಟ್ಟಡಗಳ ದುರಸ್ಥಿಗಾಗಿ 500 ಕೋಟಿ ರೂ. ಬಿಡುಗಡೆ ಮಾಡಿದೆ ಎಂದ ಅವರು ಪ್ರತಿ ಜಿಲ್ಲೆಗಳಲ್ಲು ಕೂಡ ಮೆಡಿಕಲ್ ಕಾಲೇಜ್ ಸ್ಥಾಪಿಸಲು ಮುಂದಾಗಿದೆ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಕೆ.ಮಂಜುನಾಥ್ ಮಾತನಾಡಿ, ಮುಂಬರುವ ಚುನಾವಣೆಗಳಲ್ಲಿ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಚುಕ್ಕಾಣಿ ಹಿಡಿಯಲಿದೆ, ಪಕ್ಷದ ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಾಧನೆಗಳನ್ನು ಮನೆ ಮನೆಗೆ ತೆರಳಿ ಪ್ರಚಾರ ಪಡಿಸಬೇಕು ಎಂದರು.
ದೇಶದ ಜನರಲ್ಲಿ ಅರಿವು ಮೂಡಿಸಲು ಆರ್.ಎಸ್.ಎಸ್ ಸಂಘಟನೆ ಸ್ಥಾಪಿಸಲಾಗಿದ್ದು ನಿಸ್ವಾರ್ಥ ಸೇವೆ ನೀಡುವ ಏಕೈಕ ಸಂಘವಾಗಿದೆ ಎಂದ ಅವರು ಇದನ್ನು ಸಹಿಸಲಾಗದ ಕಾಂಗ್ರೆಸ್ ಪಕ್ಷ ಅಪಪ್ರಚಾರ ಮಾಡುತ್ತಿದ್ದು ವಿರೋಧ ಮಾಡಲು ಅವರಿಗೆ ಯಾವುದೇ ವಿಷಯವೇ ಇಲ್ಲ ಎಂದರು.
ಬಿಜೆಪಿ ಪದಾಧಿಕಾರಿಗಳಾದ ಬಿ.ಎನ್.ಲಕ್ಷ್ಮೀಪತಿ, ರವಿ ಪಾವಗಡ, ತಿಮ್ಮಾಚಾರ್, ಜಯಣ್ಣ, ಆದಿಶೇಷಗುಪ್ತ, ನಾಗರಾಜು, ಎಂ.ಸುರೇಶ್, ಟೈಲರ್ ನಾಗರಾಜ್, ಲತಾ ಪ್ರದೀಪ್ ಇದ್ದರು.

Get real time updates directly on you device, subscribe now.

Comments are closed.

error: Content is protected !!