ಡಿಪ್ಲೋಮೋ ಇನ್ ಟೂಲ್ ಅಂಡ್ ಡೈ ಮೇಕಿಂಗ್ ಕೋರ್ಸ್ ಆರಂಭ

197

Get real time updates directly on you device, subscribe now.

ತುಮಕೂರು: ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಿಂದ ಮೂರು ವರ್ಷದ ಡಿಪ್ಲೋಮೋ ಇನ್ ಟೂಲ್ ಅಂಡ್ ಡೈ ಮೇಕಿಂಗ್ ಕೋರ್ಸ್ ಆರಂಭಿಸಿದ್ದು, ಇದು ಶೇ.100 ರಷ್ಟು ಉದ್ಯೋಗ ಪಡೆಯುವ ಕೋರ್ಸ್ ಆಗಿದೆ ಎಂದು ಡಿಪ್ಲೋಮೋ ಕಾಲೇಜಿನ ಪ್ರಾಂಶುಪಾಲ ಗುರುಪ್ರಸನ್ನ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರಿ ಡಿಪ್ಲೋಮೋ ಕಾಲೇಜುಗಳಲ್ಲಿ ನಮ್ಮಲ್ಲಿ ಮಾತ್ರ ಶೇ. 100 ರ ಜಾಬ್ ಕನ್ಪರ್ಮ್ ಇರುವ ಕೋರ್ಸ್ ಇದಾಗಿದೆ, ಎಸ್ಎಸ್ಎಲ್ಸಿಯಲ್ಲಿ ಪಾಸಾದ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದಾಗಿದೆ, ಈ ಬಾರಿ ಮೊದಲು ಬಂದವರಿಗೆ ಆದ್ಯತೆ ಎಂಬ ನಿಯಮದ ಅಡಿಯಲ್ಲಿ ಪ್ರವೇಶಾತಿ ನೀಡಲಾಗುತ್ತಿದೆ, ಈ ಕೋರ್ಸ್ ಗೆ ಸೇರುವ ಒಬಿಸಿ ವಿದ್ಯಾರ್ಥಿಗೆ ವಾರ್ಷಿಕ 30 ಸಾವಿರ ಮತ್ತು ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ 35 ಸಾವಿರ ರೂ. ವಿದ್ಯಾರ್ಥಿ ವೇತನವನ್ನು ವಿದ್ಯಾಸಿರಿ ಯೋಜನೆಯಲ್ಲಿ ನೀಡಲಾಗುವುದು ಎಂದರು.
ಕಳೆದ 2009 ರಿಂದ ನಮ್ಮ ಕಾಲೇಜಿನಲ್ಲಿ ಈ ಕೋರ್ಸ್ ಆರಂಭಿಸಲಾಗಿದ್ದು, ಇಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳು ವಿವಿಧ ಕಂಪನಿಗಳಲ್ಲಿ ನೌಕರರಾಗಿ ಸೇರಿ ತಮ್ಮ ಜೀವನ ರೂಪಿಸಿಕೊಂಡಿದ್ದಾರೆ, ಇನ್ನೂ ಕೆಲವರು ಇಂಜಿನಿಯರಿಂಗ್ ನಲ್ಲಿ ಮೆಕಾನಿಕಲ್ ವಿಭಾಗಕ್ಕೆ ಸೇರಿ ಉನ್ನತ ಶಿಕ್ಷಣ ಪಡೆದು, ಉದ್ಯಮಿಗಳಾಗಿ ಸರಕಾರಿ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದು, ಶೇ.65ರ ಪ್ರಾಯೋಗಿಕ ಮತ್ತು ಶೇ.35ರ ಭೋದಕ ರೀತಿಯಲ್ಲಿ ಕಲಿಸಲಾಗುತ್ತಿದ್ದು, ಕೊನೆಯ ಒಂದು ವರ್ಷ ಹತ್ತಿರದ ಕೈಗಾರಿಕೆಗಳಲ್ಲಿ ಕಲಿಕೆ ಮತ್ತು ಗಳಿಕೆ ರೀತಿಯಲ್ಲಿ ಕೆಲಸ ಮಾಡುತ್ತಲೇ ಸದರಿ ಕಂಪನಿಗೆ ಅಗತ್ಯವಿರುವ ಕೌಶಲ್ಯ ಕಲ್ಪಿಸುವ ಕೆಲಸ ಇದಾಗಿದೆ, ಈ ವೇಳೆಯಲ್ಲಿ ತಿಂಗಳಿಗೆ 10- 12 ಸಾವಿರ ಶಿಷ್ಯವೇತನ ಪಡೆಯಬಹುದಾಗಿದೆ ಎಂದು ಗುರುಪ್ರಸನ್ನ ವಿವರಿಸಿದರು.
ಸರಕಾರದ ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆ ಅಡಿಯಲ್ಲಿ ಆಸಕ್ತರಿಗೆ ನಮ್ಮ ಕಾಲೇಜಿನಿಂದ 2 ರಿಂದ 4 ತಿಂಗಳ ಉಚಿತ ತಾಂತ್ರಿಕ ತರಬೇತಿ ನೀಡಲಾಗುತ್ತಿದೆ, ಈ ವೇಳೆ ಬಸ್ ಪಾಸ್ ಗೂ ವ್ಯವಸ್ಥೆ ಕಲ್ಪಿಸಲಿದೆ, ಪರಿಶಿಷ್ಟ ಜಾತಿ, ಅಲ್ಪಸಂಖ್ಯಾತರು, ಮಹಿಳಾ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು, ಇದರ ಜೊತೆಗೆ ಖಾಸಗಿಯಾಗಿ ಪಿಟಿಸಿ ಅಡಿಯಲ್ಲಿ ಕ್ಯಾಡ್ ಪಿಎಲ್ಎಂ, ಆಟೋಮೇಷನ್, ಕ್ಯಾಮ್ ಎನ್ಸಿ, ಕ್ಯಾಡ್, ಸಿಎಇ ಪಿಎಲ್ಎಂ, ಆರ್ಪಿಟಿ, ಕ್ಯಾಡ್, ಎಆರ್, ಐಓಟಿ ಸೇರಿದಂತೆ ಎಂಟು ಲ್ಯಾಬ್ಗಳನ್ನು ಆರಂಭಿಸಿದ್ದು, 50 ಗಂಟೆಗಳ ಕೋರ್ಸ್ಗೆ 2000 ರೂ. ಹಾಗೂ 100 ಗಂಟೆಗಳ ಕಲಿಕೆಗೆ 4000 ರೂ. ಗಳು, ಅದಕ್ಕಿಂತ ಹೆಚ್ಚಿನ ಕಲಿಕೆಗೆ ರಿಯಾಯಿತಿ ಮೂಲಕ ಲ್ಯಾಬ್ ಬಳಕೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಪ್ರಾಂಶುಪಾಲ ಗುರುಪ್ರಸನ್ನ ತಿಳಿಸಿದರು.

ವಿಶೇಷ ಟೂಲ್ ಡಿಸೈಸ್, ಮೌಲ್ಡ್ ಡಿಸೈನ್, ಜಿಕ್ಸ್ ಅಂಡ್ ಫಿಕ್ಚರ್ಸ್ ವಿಷಯ ಹೇಳಿ ಕೊಡುವ ಕೋರ್ಸ್ ಇದಾಗಿದೆ, ಎಐಸಿಟಿಇ, ಟಿಟಿಇ ಇಂದ ಮಾನ್ಯತೆ ಪಡೆದ ಕೋರ್ಸ್, ತುಮಕೂರಿನಲ್ಲೇ ಮೊದಲು ಆರಂಭಿಸಿರುವುದು ನಮ್ಮಲ್ಲೇ, 60 ಸೀಟ್ಗಳಿಂದು ಮೊದಲು ಬರುವ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುವುದು, ಎಸ್ಎಸ್ಎಲ್ಸಿ ಪಾಸಾದ ವಿದ್ಯಾರ್ಥಿಗಳಿಗೆ ಇದು ಸುವರ್ಣಾವಕಾಶ, ಸಾಧನೆ ಮಾಡಲು ಮತ್ತು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಈ ಕೋರ್ಸ್ ಸಹಕಾರಿಯಾಗಲಿದೆ.
-ಗುರುಪ್ರಸನ್ನ, ಪ್ರಾಂಶುಪಾಲರು, ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ.

Get real time updates directly on you device, subscribe now.

Comments are closed.

error: Content is protected !!