ಚೆಡ್ಡಿ ಏನ್ ರಾಷ್ಟ್ರ ಧ್ವಜ ಅಲ್ಲ: ಡಿಕೆಶಿ

ಯಾರ ಮನೆಗೆ ಹೋಗಿ ಚಡ್ಡಿ ಕದ್ದು ತಂದು ಸುಟ್ಟಿಲ್ಲ

132

Get real time updates directly on you device, subscribe now.

ತುಮಕೂರು: ಕರ್ನಾಟಕ ರಾಜ್ಯ, ಭಾರತದ ಇತಿಹಾಸವನ್ನು ತಿರುಗಿಸೋಕೆ ನಾಗೇಶ್ ನೇತೃತ್ವದ ಇಲಾಖೆ ಹೊರಟಿದೆ, ಅದು ಸರಿಯಿಲ್ಲ, ಕುವೆಂಪು, ಬಸವಣ್ಣ ನಾರಾಯಣಗುರು ಅವರಿಗೆ ಅವಮಾನ ಮಾಡ್ತಿರೋದು ಸರಿಯಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.

ಎನ್.ಎಸ್.ಯು.ಐ ಕಾರ್ಯಕರ್ತರನ್ನು ಬಂಧಿಸಿ ಜೈಲಿಗೆ ಕಳುಹಿಸಿರುವ ಹಿನ್ನೆಲೆಯಲ್ಲಿ ನಗರದ ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಮಾತನಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಯುವಕರು, ವಿದ್ಯಾರ್ಥಿಗಳು, ಮಠಾಧೀಶರು ಹೋರಾಟ ಮಾಡ್ತಿದ್ದಾರೆ, ನಾಗೇಶ್ ಮನೆ ಮುಂದೆ ಅವರೆ ಅವರ ಚಡ್ಡಿಯನ್ನ ತೆಗೆದುಕೊಂಡು ಹೋಗಿ ಸುಟ್ಟಿರಬಹುದು, ಧಿಕ್ಕಾರ ಕೂಗಿದ್ದಾರೆ, ಅವರೇನು ಯಾರ ಮನೆ ಒಳಗೂ ಹೊಗಿಲ್ಲ ಎಂದು ಹೇಳಿದರು.
ರಾಷ್ಟ್ರ ಧ್ವಜಕ್ಕೆ ಏನು ಅವಮಾನ ಮಾಡಿಲ್ಲ, ನಾಗೇಶ್ ಮನೆಯ ಚಡ್ಡಿಯನ್ನ ಸುಟ್ಟಿಲ್ಲ, ಯಾರ ಮನೆಗೆ ಹೋಗಿ ಚಡ್ಡಿ ಕದ್ದು ತಂದು ಸುಟ್ಟಿಲ್ಲ, ಇದು ಪ್ರತಿಭಟನೆಯ ಒಂದು ಸ್ವರೂಪ, ಎಲ್ಲರಿಗೂ ಪ್ರತಿಭಟನೆಯ ಹಕ್ಕಿದೆ ಎಂದರು.
ದೆಹಲಿಯಲ್ಲಿ ಮುಖ್ಯಮಂತ್ರಿ ಮನೆಗೆ ನುಗ್ಗಿದ್ದಾರೆ, ಅವ್ರ ಮೇಲೆ ಯಾವ ಕೇಸ್ ಹಾಕಿದ್ದಾರೆ, ರಾಷ್ಟ್ರದ ರೈತ ಮುಖಂಡನ ಮೇಲೆ ಮೋದಿ ಅಂತೇಳಿಕೊಂಡು ಮಸಿ ಬಳೀತಾರೆ, ಅವರ ಮೇಲೆ ಯಾವ ಆಕ್ಷನ್ ತೆಗೆದುಕೊಂಡಿದ್ದಾರೆ, ಬೇಲ್ ಸಿಗಲೇಬಾರದು ಅಂತಾ ಸೆಕ್ಷನ್ ಗಳನ್ನ ಹಾಕಿದ್ದಾರೆ ಎಂದು ಕಿಡಿಕಾರಿದರು.
ಈ ಘಟನೆ ನಡೆದಾಗ ತಕ್ಷಣ ಹೋಂ ಮಿನಿಸ್ಟರ್ ಹೋಗಿದ್ದಾರೆ, ಆದರೆ ಈ ಜಿಲ್ಲೆಯಲ್ಲಿ ಇಬ್ಬರು ದಲಿತರು ಸತ್ತಾಗ ಸಚಿವರು, ಶಾಸಕರು ಎಲ್ಲಿ ಹೋಗಿದ್ರು, ಯಾರಾದ್ರೂ ದಲಿತರ ರಕ್ಷಣೆ ಕೊಡಲು ಹೋಗಿದ್ರಾ, ಈಗ ಮನೆ ಮನೆಗೆ ಹೋಗಿ ಸಿಕ್ಕ ಸಿಕ್ಕ 20 ಜನರನ್ನ ತಂದು ಹಾಕಿದ್ದಾರೆ,
ಪಠ್ಯ ಪುಸ್ತಕ ವಿಚಾರಕ್ಕೆ ನಿರ್ಮಲಾನಂದ ಸ್ವಾಮೀಜಿಗಳು, ಸಿದ್ದಗಂಗಾ ಶ್ರೀಗಳು, ಸೊನ್ನೇನಹಳ್ಳಿ ಶ್ರೀಗಳು ಮಾತನಾಡಿದ್ದಾರೆ, ಸಾಹಿತಿಗಳು ಮಾತನಾಡಿದ್ದಾರೆ, ಅವರೆಲ್ಲರ ಪ್ರೇರೇಪಣೆ ಈ ಹುಡುಗರಿಗೆ ಸಿಕ್ಕಿದೆ, ಈ ರಾಜ್ಯದಲ್ಲಿ ಅನ್ಯಾಯ, ಅಧರ್ಮ ಆಗ್ತಿದೆ, ಶಾಂತಿ ಭಂಗ ಉಂಟಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕರ್ತರ ಮೇಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಲ್ ರಿಜ್ಟೆಕ್ಟ್ ಆಗಿದೆ, ಮೇಲಿನ ಕೋರ್ಟ್ಗೆ ಹೋಗ್ತಾರೆ, ಇದು ಅವರಿಗೇನು ಅವಮಾನ ಅಲ್ಲ, ಇದು ಹೋರಾಟದ ಸ್ವರೂಪ, ಶಿವಮೊಗ್ಗದಲ್ಲಿ ಲೂಟಿ ಮಾಡಿದ್ರು, ಅಲ್ಲಿ ಯಾಕ್ ಕೇಸ್ ಹಾಕಿಲ್ಲ, ಎಷ್ಟೋ ಜನ ಸತ್ತರು, ಅವ್ರ ಮೇಲೆ ಯಾಕೆ ಕೇಸ್ ಹಾಕಿಲ್ಲ, ಯಾರ್ಯಾರು ಅಧಿಕಾರಿಗಳು ರಾಜಕಾರಣಿಗಳ ಮಾತು ಕೇಳಿ ಇಂಥ ಸುಳ್ಳು ಸೆಕ್ಷನ್ ಗಳನ್ನ ಹಾಕಿದ್ದೀರಿ, ನೀವು ಮುಂದೆ ಇದಕ್ಕೆಲ್ಲಾ ಉತ್ತರ ಕೊಡಬೇಕಾಗುತ್ತೆ, ಶಿಕ್ಷೆಯನ್ನ ಅನುಭವಿಸ್ತೀರಾ, ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಕೆ ಕೊಡ್ತೀನಿ, ಯಾವ್ ಮನೆಗೆ ಹಾಕಿದ್ದಾರೆ ತೋರಿಸಲಿ ವಿಡಿಯೋ, ನಮ್ಮ ಹತ್ರಾನೂ ವಿಡಿಯೋ ಇದೆ, ಚಡ್ಡಿಗೆ ಬೆಂಕಿ ಹಾಕಿರೋದು ಅವರು, ಅದು ಆರ್.ಎಸ್.ಎಸ್ ಸಮವಸ್ತ್ರ ಅಂತಾ ಹೆಂಗ್ ಹೇಳ್ತೀರಾ, ಅದರ ಮೇಲೆ ಏನಾದರೂ ಸೀಲ್ ಇದ್ಯಾ, ನಾವು ಕಂಪ್ಲೆಂಟ್ ಕೊಟ್ಟೀದ್ದೀವಿ, ಎಫ್.ಐ.ಆರ್ ಹಾಕಿಲ್ಲಾ ಎಂದು ಆಕ್ರೋಶ ಹೊರ ಹಾಕಿದರು.
ರೌಡಿಶೀಟರ್ಗಳನ್ನ ಕರೆಸಿ ನಮ್ಮ ಹುಡುಗರಿಗೆ ಹೊಡೆದಿದ್ದಾರೆ, ವೀಡಿಯೋ ಇದೆ, ನಾನು ಚಿಂತನ ಮಂಥನದಲ್ಲಿದ್ದೆ, ಇಲ್ಲದಿದ್ರೇ ಅವ್ರೇನ್ ಬರೋದು ನಾವೇ ಬರ್ತಿದ್ವಿ, ಚೆಡ್ಡಿ ಏನ್ ಅವರೊಬ್ರುದಾ, ನಾನು ಚೆಡ್ಡಿ ಹಾಕಿಕೊಳ್ಳುತ್ತೀನಿ, ಚೆಡ್ಡಿ ಏನ್ ರಾಷ್ಟ್ರ ಧ್ವಜ ಅಲ್ವಲ್ಲ ಎಂದರು.
ಇನ್ನು ರಾಜ್ಯಸಭೆ ಚುನಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ ನಾವು ಗೆಲ್ತೀವೋ, ಸೋಲುತ್ತಿವೋ, ನಮ್ಮ ರಾಜಕಾರಣ ನಾವು ಮಾಡ್ತೀವಿ, ಎಲ್ರೂ ಕುಳಿತುಕೊಂಡು ಚರ್ಚೆ ಮಾಡಿ ನಮ್ಮ ಪಕ್ಷದ ಹಿತದೃಷ್ಟಿಯಿಂದ ನಾಮಪತ್ರ ಸಲ್ಲಿಸಿದ್ದೇವೆ, ನಾವು ಯಾರನ್ನೂ ಸಂಪರ್ಕಸಿಲ್ಲ, ಸಂಪರ್ಕಿಸೋದು ಇಲ್ಲ, ಇಡೀ ಪಕ್ಷ ಒಗ್ಗಟ್ಟಿನಿಂದ ಎರಡನೇ ಅಭ್ಯರ್ಥಿಯನ್ನ ತೀರ್ಮಾನ ಮಾಡಿದ್ವಿ, ನಮ್ಮ ಓಟ್ ನಾವು ಕಾಪಾಡಿಕೊಳ್ಳುತ್ತೇವೆ, ಖರ್ಗೆ ಸಾಹೇಬರೂ ಏನೂ ಮಾತಾಡಿಲ್ಲ, ಯಾರ ಬೆಂಬಲಕ್ಕೂ ನಿಂತಿಲ್ಲ, ಆತ್ಮಸಾಕ್ಷಿ ಮತ ಕೇಳುತ್ತಿದ್ದೇವೆ, ಏನಾಗುತ್ತೋ ನೋಡೋಣ ಎಂದರು.

Get real time updates directly on you device, subscribe now.

Comments are closed.

error: Content is protected !!