ಎಪಿಎಂಸಿ ಅಧ್ಯಕ್ಷನ ದರ್ಪ- ಕ್ರಮಕ್ಕೆ ಡೀಸಿಗೆ ಮನವಿ

270

Get real time updates directly on you device, subscribe now.

ತುಮಕೂರು: ಅಂತರಸನಹಳ್ಳಿ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿದ್ದ ಎಪಿಎಂಸಿ ಅಧ್ಯಕ್ಷ ಉಮೇಶ್ ಗೌಡ, ಸಹಾಯಕ ನಿರ್ದೇಶಕಿ ಸುಮಾ ಹಾಗೂ ಅಧಿಕಾರಿಗಳ ತಂಡ ಪ್ರತಿ ಅಂಗಡಿಗಳ ವ್ಯಾಪಾರಸ್ಥರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾರುಕಟ್ಟೆ ಖಾಲಿ ಮಾಡುವಂತೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ವ್ಯಾಪಾರಸ್ಥರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ನೇತೃತ್ವದಲ್ಲಿ ವ್ಯಾಪಾರಸ್ಥರ ನಿಯೋಗ ತೆರಳಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಅವರಿಗೆ ದೂರು ಸಲ್ಲಿಸಿದ್ದು, ಅಂಗಡಿಗಳಿಗೆ ವಿನಾ ಕಾರಣ ಮೂರರಿಂದ ಒಂಭತ್ತು ಸಾವಿರ ರೂ. ದಂಡ ವಿಧಿಸಲಾಗಿದೆ, ಈ ಬಗ್ಗೆ ಕೇಳಲು ಹೋದರೆ ಹಿಂಬಾಲಕರ ಮೂಲಕ ನಿಂದಿಸಿದ್ದಾರೆ ಎಂದು ಮನವಿ ತಿಳಿಸಿದ್ದಾರೆ.
ಕಳೆದ ಒಂದು ವರ್ಷದಿಂದ ಅಂತರಸನಹಳ್ಳಿ ಮಾರುಕಟ್ಟೆಯ ಒಳಾಂಗಣದ ರಸ್ತೆ ಮತ್ತು ಒಳಚರಂಡಿ ನಿರ್ಮಾಣ ಕಾಮಗಾರಿಯನ್ನು ಟೆಂಡರ್ ಕರೆದು ಪುಟ್ಟೇಗೌಡ ಎಂಬ ಗುತ್ತಿಗೆದಾರರಿಗೆ ನೀಡಿದ್ದು, ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗಳಿಸದೆ, ಕೊಳೆತ ನೀರು ಸಂಗ್ರಹವಾಗಲಿದೆ, ಕೊಳೆತ ತರಕಾರಿಯಿಂದ ಮಾರುಕಟ್ಟೆ ಸೊಳ್ಳೆಗಳ ಆವಾಸತಾಣವಾಗಿ ಮಾರ್ಪಟಿದೆ ಎಂದು ದೂರಿದ್ದಾರೆ.
ಮಾರುಕಟ್ಟೆಯಲ್ಲಿ ರಸ್ತೆ ಮತ್ತು ಒಳಚರಂಡಿ ನಿರ್ಮಾಣ ಕಾಮಗಾರಿಯಿಂದಾಗಿ ವಿದ್ಯುತ್ ಕೇಬಲ್ ಗಳು ತುಂಡರಿಸಿದ್ದು, ತಿಂಗಳಿಗೆ ಹದಿನೈದು ದಿನ ಅಂಗಡಿ ಮಳಿಗೆಗಳಿಗೆ ಸಂಪರ್ಕವಿಲ್ಲದಂತಾಗಿದೆ, ಮಾರುಕಟ್ಟೆಯಲ್ಲಿ ಎರಡು ಕೊಳವೆ ಬಾವಿಗಳಿದ್ದರು ಸಹ ಕುಡಿಯುವ ನೀರಿನ ಹಾಹಾಕಾರ ಹೆಚ್ಚಾಗಿದೆ ಮೂಲ ಸೌಕರ್ಯ ಕಲ್ಪಿಸದೇ ವ್ಯಾಪಾರಿಗಳ ಮೇಲೆ ದೌರ್ಜನ್ಯ ಮಾಡಲಾಗಿದೆ ಎಂದು ಅಸಮಾಧಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ಏಪ್ರಿಲ್- ಮೇ ತಿಂಗಳಿಂದ ರಾತ್ರಿ 2 ಗಂಟೆಯಿಂದ ವ್ಯಾಪಾರ ವಹಿವಾಟು ಶುರು ಮಾಡಲಾಗಿದ್ದು, ಮಧ್ಯರಾತ್ರಿ ವ್ಯಾಪಾರ ವಹಿವಾಟು ಶುರು ಮಾಡಿರುವುದರಿಂದ ರೈತರಿಗೆ ಅನಾನುಕೂಲ ಉಂಟಾಗಿದೆ, ಮಾರುಕಟ್ಟೆಯಲ್ಲಿ ವಿದ್ಯುತ್, ನೀರು, ಆಹಾರವಿಲ್ಲದೇ ಪರದಾಡುವಂತಾಗಿದೆ, ನಿರಂತರ ಮಳೆ ಸುರಿದರೆ ಮೊಳಕಾಲುದ್ದ ನೀರು ಪ್ರಾಂಗಣದಲ್ಲಿಯೇ ಇರುತ್ತದೆ, ಅವೈಜ್ಞಾನಿಕ ಒಳಚರಂಡಿ ವ್ಯವಸ್ಥೆ ಮತ್ತು ಅಪೂರ್ಣ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ನೀಡಬೇಕೆಂದು ತಿಳಿಸಿದ್ದಾರೆ.
ಎಪಿಎಂಸಿ ಆಡಳಿತ ಮಂಡಳಿ ನಿರ್ಲಕ್ಷ್ಯದಿಂದಾಗಿ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಮಾಧ್ಯಮಗಳಲ್ಲಿಯೂ ವರದಿ ಪ್ರಕಟಗೊಂಡಿದ್ದು, ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡ ನಂತರ ಕೋಪಗೊಂಡ ಎಪಿಎಂಸಿ ಅಧ್ಯಕ್ಷ ಉಮೇಶ್ಗೌಡ ಮಾರುಕಟ್ಟೆಗೆ ಭೇಟಿ ನೀಡಿ, ಫುಟ್ ಪಾತ್ ವ್ಯಾಪಾರಿಗಳಿಂದ ಹಿಡಿದು ಮಂಡಿ ವರ್ತಕರಿಗೂ ದಂಡ ವಿಧಿಸಿದ್ದಾರೆ, ಯಾವುದೇ ಮುನ್ನೆಚ್ಚರಿಕೆ ನೀಡದೆ ಬಡ ವ್ಯಾಪಾರಿಗಳಿಂದ ಬಲವಂತವಾಗಿ ಹಣ ವಸೂಲಿ ಮಾಡಿದ್ದಾರೆ, ಬಲವಂತದಿಂದ ಹಣ ವಸೂಲಿ ಮಾಡಿರುವವರ ಮೇಲೆ ಕ್ರಮ ಕೈಗೊಳ್ಳಬೇಕು, ಸ್ಥಳ ಪರಿಶೀಲನೆ ನಡೆಸಿ ಮಾರುಕಟ್ಟೆ ಸಮಸ್ಯೆ ಬಗೆಹರಿಸುವಂತೆ ಮನವಿ ಸಲ್ಲಿಸಿದ್ದಾರೆ.
ಈ ವೇಳೆ ಅಂತರಸನಹಳ್ಳಿ ಮಾರುಕಟ್ಟೆ ವರ್ತಕರಾದ ಯದುಕುಮಾರ್, ವಿಕ್ಕಿ, ಜಯಮ್ಮ, ಹೊಟೇಲ್ ಟೆಂಡರುದಾರರಾದ ಸುಜಾತ, ಪ್ರಕಾಶ್, ಆನಂದ್, ರವಿ, ಸತೀಶ್, ಹುಸೇನ್, ನೂರು ಇತರರಿದ್ದರು.

Get real time updates directly on you device, subscribe now.

Comments are closed.

error: Content is protected !!