ಎಸಿಬಿ ಬಲೆಗೆ ಬಿದ್ದ ಪಿಡಿಒ

334

Get real time updates directly on you device, subscribe now.

ಕುಣಿಗಲ್: ಖಾತೆ ಮಾಡಿ ಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪಿಡಿಒ, ಸಹಕರಿಸಿದ ತಾಲೂಕು ಪಂಚಾಯಿತಿ ಗುಮಾಸ್ತೆಯನ್ನು ಎಸಿಬಿ ಅಧಿಕಾರಿಗಳು ಬಲೆಗೆ ಕೆಡವಿದ್ದಾರೆ.

ತಾಲೂಕಿನ ಬೇಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾಸಿ ವಿನೋದ್ ಗೌಡ ತಮ್ಮ ತಂದೆಗೆ ಸೇರಿದ ಆಸ್ತಿಗೆ ಸಂಬಂಧಿಸಿದಂತೆ ಖಾತೆ ಮಾಡಿಸಿಕೊಳ್ಳುವ ನಿಟ್ಟಿನಲ್ಲಿ ತಾಪಂ ಕಾರ್ಯ ನಿರ್ವಹಣಾಧಿಕಾರಿಗಳ ಆದೇಶದಂತೆ ಗ್ರಾಮ ಪಂಚಾಯಿತಿಗೆ ಅರ್ಜಿ ನೀಡಿದ್ದರು. ಗ್ರಾಪಂ ಪಿಡಿಒ ಲಂಚಕ್ಕ ಬೇಡಿಕೆ ಇಟ್ಟಿದ್ದರಿಂದ ಎರಡು ಸಾವಿರ ರೂ. ಗಳನ್ನು ಗ್ರಾಪಂ ಸಹಾಯಕಿ ಗುಣಶೀಲ ಅವರಿಗೆ ಪಿಡಿಒ ಸೂಚನೆ ಮೇರೆಗೆ ನೀಡಿದ್ದು ಖಾತೆ ದಾಖಲೆ ನೀಡಲು ಹತ್ತು ಸಾವಿರ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ವಿನೋದ್ ಗೌಡ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡ ತುಮಕೂರು ಎಸಿಬಿ ಅಧಿಕಾರಿಗಳು, ಡಿವೈಎಸ್ಪಿ ಮಲ್ಲಿಕಾರ್ಜುನ ಚುಕ್ಕಿ ನೇತೃತ್ವದಲ್ಲಿ ನಿರೀಕ್ಷಕರಾದ ವಿಜಯಲಕ್ಷ್ಮಿ, ವೀರೇಂದ್ರ, ಸಿಬ್ಬಂದಿ ನರಸಿಂಹರಾಜು, ಶಿವಣ್ಣ, ಮೋಹನ್ಕುಮಾರ್, ಚಂದ್ರಶೇಖರ್, ಗಿರೀಶ್ ಕುಮಾರ್, ಯಶೋಧ, ಮಹೇಶ ಕಾರ್ಯಾಚರಣೆ ನಡೆಸಿ ಶುಕ್ರವಾರ ಸಂಜೆ ತಾಪಂ ಕಾರ್ಯಾಲಯದಲ್ಲಿ ಪಿಡಿಒ ಸೂಚನೆ ಮೇರೆಗೆ ಗುಮಾಸ್ತೆ ಅನಸೂಯ ಲಂಚ ಪಡೆಯುತ್ತಿದ್ದ ವೇಳೆಯಲ್ಲಿ ದಾಳಿ ನಡೆಸಿ ವಶಕ್ಕೆ ಪಡೆದು, ಪಿಡಿಒ ಸೌಮ್ಯಶ್ರೀ ಅವರನ್ನು ವಿಚಾರಣೆ ನಡೆಸಿ ವಶಕ್ಕೆ ಪಡೆದು ಮುಂದಿನ ಕ್ರಮ ಜರುಗಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!