ಜಾಗವಿಲ್ಲದೆ ಅಂತ್ಯ ಸಂಸ್ಕಾರ ಮಾಡಲು ಪರದಾಟ

293

Get real time updates directly on you device, subscribe now.

ಕುಣಿಗಲ್: ತಾಲೂಕಿನ ಎಡೆಯೂರು ಹೋಬಳಿಯ ನಾಗೇಗೌಡನಪಾಳ್ಯ ಗ್ರಾಮದಲ್ಲಿ ದಲಿತರಿಗೆ ಸೂಕ್ತ ಸ್ಮಶಾನ ಜಾಗ ಇಲ್ಲದೆ ಸತ್ತ ವ್ಯಕ್ತಿಯ ಅಂತ್ಯ ಸಂಸ್ಕಾರ ಮಾಡಲು ರಸ್ತೆಯಲ್ಲೆ ಮೃತದೇಹ ಇಟ್ಟುಕೊಂಡು ಕಾದು ಕುಳಿತ ಘಟನೆ ನಡೆದಿದೆ.

ಗ್ರಾಮದಲ್ಲಿನ ಹನುಮಂತ ಎಂಬಾತ ಮೃತಪಟ್ಟಿದ್ದು, ಅಂತ್ಯಕ್ರಿಯೆಗೆ ಜಾಗವಿಲ್ಲದ ಕಾರಣ ಮನೆಯವರು ಮೃತದೇಹವನ್ನು ರಸ್ತೆಯಲ್ಲೆ ಇಟ್ಟು ಸೂಕ್ತ ಸ್ಥಳಾವಕಾಶ ಕಲ್ಪಿಸದೆ ಇದ್ದಲ್ಲಿ ರಸ್ತೆಯಲ್ಲೆ ಅನಿವಾರ್ಯವಾಗಿ ಅಂತ್ಯಕ್ರಿಯೆ ನಡೆಸಬೇಕಾಗುತ್ತದೆ, ತಾಲೂಕು ಆಡಳಿತ ಸೂಕ್ತ ಸ್ಥಳವಕಾಶ ಕಲ್ಪಿಸುವಂತೆ ಆಗ್ರಹಿಸಿದರು. ಮುಖಂಡ ವೆಂಕಟೆಶ್ ಮಾತನಾಡಿ, ಈ ಹಿಂದೆ ಮೃತಪಟ್ಟರೆ ಖಾಸಗಿ ಜಮೀನಿನಲ್ಲಿ ಅಥವಾ ಕೆರೆ ಅಂಗಳದಲ್ಲಿ ಅಂತ್ಯಕ್ರಿಯೆ ಮಾಡಲಾಗುತ್ತಿತ್ತು, ಈಗ ಕೆರೆಯಲ್ಲಿ ನೀರು ತುಂಬಿದೆ, ಖಾಸಗಿ ಜಮೀನಿನವರು ಬೆಳೆ ಇಟ್ಟಿದ್ದೇವೆ ಎನ್ನುತ್ತಾರೆ, ತಾಲೂಕು ಆಡಳಿತ, ಗ್ರಾಮ ಪಂಚಾಯಿತಿಗೆ ಮನವಿ ನೀಡಿದರೂ ಯಾವುದೇ ಕ್ರಮವಾಗಿಲ್ಲ, ಹೀಗಾಗಿ ಅಂತ್ಯಕ್ರಿಯೆ ಮಾಡಲು ಜಾಗವಿಲ್ಲದೆ ರಸ್ತೆಯಲ್ಲೆ ಮೃತದೇಹ ಇಟ್ಟುಕೊಂಡು ಕಾಯುವಂತಾಗಿದೆ. ಇನ್ನಾದರೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕಂದಾಯ ಇಲಾಖೆಯ ರಾಜಸ್ವನಿರೀಕ್ಷಕರು ಈ ಹಿಂದೆ ಗುರುತಿಸಿದ್ದ ಜಾಗದಲ್ಲೇ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಿಕೊಡುವುದಾಗಿ ಹೇಳಿ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಕುಟುಂಬದವರು ಮುಂದಿನ ಕಾರ್ಯಕ್ಕೆ ಮುಂದಾದರು.

Get real time updates directly on you device, subscribe now.

Comments are closed.

error: Content is protected !!