ಬಿಜೆಪಿ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಿಳಿಸಿ

177

Get real time updates directly on you device, subscribe now.

ಮಧುಗಿರಿ: ಕೇಂದ್ರ ಮತ್ತು ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಸರ್ಕಾರಗಳಿದ್ದು, ಸಾಮಾನ್ಯ ಜನರ ಕಷ್ಟಗಳ ಜೊತೆಗೆ ಕಾರ್ಯಕರ್ತರು ಸ್ಪಂದಿಸುವ ಕಾರ್ಯಗಳಾದ ಸ್ಮಶಾನ ಇಲ್ಲದ ಜಾಗದಲ್ಲಿ ಸ್ಮಶಾನಕ್ಕೆ ಆದ್ಯತೆ, ಬಗರ್ ಹುಕುಂ ಮತ್ತು ಮನೆಗಳ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡಿ ಊರಿಗೆ ಉಪಕಾರ ಮತ್ತು ಜನೋಪಯೋಗಿ ಕೆಲಸ ಮಾಡುವಂತೆ ಮಾಜಿ ಶಾಸಕ ಗಂಗಹನುಮಯ್ಯ ಕರೆ ನೀಡಿದರು.\

ಪಟ್ಟಣದ ಅಯ್ಯಪ್ಪಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿರುವ ಭಾರತೀಯ ಜನತಾ ಪಾರ್ಟಿ ಮಧುಗಿರಿ ಜಿಲ್ಲಾ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಎಸ್ಸಿ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿ, ಮಧುಗಿರಿ ಜಿಲ್ಲಾ ವ್ಯಾಪ್ತಿಯ ಮಧುಗಿರಿ ಕೊರಟಗೆರೆ ಶಿರಾ ಮತ್ತು ಪಾವಗಡ ತಾಲ್ಲೂಕುಗಳಲ್ಲಿ ಹರಿಜನರು ಅತಿ ಹೆಚ್ಚು ಮತದಾರರಿದ್ದು ಮೀಸಲು ವಿಧಾನಸಭಾ ಕ್ಷೇತ್ರಗಳಾದ ಕೊರಟಗೆರೆ ಮತ್ತು ಪಾವಗಡ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಬೇಕಾದರೆ ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಬೇಕಾಗಿದೆ, ಹರಿಜನರು ಇತರ ಜನಾಂಗದವರೊಂದಿಗೆ ಕೂಡಿ ಬಾಳುವಂತಹ ಸಮಾಜದಲ್ಲಿ ಬೆರೆಯುವ ಮೂಲಕ ಬಿಜೆಪಿ ಕಟ್ಟಲು ಸಾಧ್ಯವೆಂದರು.
ಅಂಬೇಡ್ಕರ್ ಜೀವನ ಚರಿತ್ರೆ ಹೇಗೆ ಪ್ರತಿ ಗ್ರಾಮಗಳಲ್ಲೂ ಪ್ರಚಾರದ ಮೂಲಕ ತಿಳಿಯಪಡಿಸಿ ಅದೇ ರೀತಿಯಲ್ಲಿ ಬಿಜೆಪಿ ಪಕ್ಷದ ಸಿದ್ಧಾಂತಗಳು ಮತ್ತು ಕಾರ್ಯಗಳು ಮತ್ತು ಅಭಿವದ್ಧಿ ಕೆಲಸಗಳು ಮತ್ತು ಜನೋಪಯೋಗಿ ಕೆಲಸಗಳನ್ನು ಸಾಮಾನ್ಯ ಜನರಿಗೆ ಮುಟ್ಟುವಂತಾಗಬೇಕು, ಈ ಹಿಂದೆ ಹರಿಜನರನ್ನು ಕೇವಲ ಮತ ಬ್ಯಾಂಕ್ಗಳಾಗಿ ಕಾಂಗ್ರೆಸ್ ಪಕ್ಷ ಬಳಸಿಕೊಳ್ಳುತ್ತಿದ್ದು, ಈಗ ರಾಷ್ಟ್ರೀಯ ಪಕ್ಷವಾಗಿರುವ ಬಿಜೆಪಿ ಕಾರ್ಯಕರ್ತರನ್ನು ನಾಯಕರನ್ನಾಗಿಸಿ ಬೆಳೆಸುವ ಎಲ್ಲಾ ಸಾಮರ್ಥ್ಯ ಹೊಂದಿದೆ ಮತ್ತು ಬೆಳೆಸಿದೆ ಎಂದು ತಿಳಿಸಿದರು.
ಈ ಹಿಂದೆ ಕೇವಲ ಪಕ್ಷ ಮಾತ್ರ ಇತ್ತು, ಈಗ ಪಕ್ಷ ಮತ್ತು ಸರ್ಕಾರ ಎರಡೂ ಇರುವುದರಿಂದ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಕೆಲಸ ಮಾಡಿ ಬಿಜೆಪಿಯನ್ನು ಈ ಭಾಗದಲ್ಲಿ ಗೆಲ್ಲಿಸುವ ಕಾರ್ಯತಂತ್ರ ರೂಪಿಸಬೇಕಾಗಿದೆ, ಜೊತೆಗೆ ಪ್ರತಿ ದಲಿತರ ಕಾಲೋನಿಗೆ ಭೇಟಿ ನೀಡಿ ಅವರ ಕಷ್ಟ ಕಾರ್ಪಣ್ಯ ಅರಿತು ಅವರಿಗೆ ಸರ್ಕಾರದಿಂದ ಬರಬಹುದಾದಂತಹ ಎಲ್ಲಾ ಸವಲತ್ತು ಕಲ್ಪಿಸಿಕೊಡುವುದರ ಮೂಲಕ ನಾಯಕರಾಗಿ ಬೆಳೆಯಲು ಸಾಧ್ಯವೆಂದರು.
ಬಿಜೆಪಿ ಜಿಲ್ಲಾ ಖಜಾಂಚಿ ಸಿ.ಎಸ್.ಹನುಮಂತರಾಜು ಮಾತನಾಡಿ, ಬಿಜೆಪಿ ಪಕ್ಷ ದಲಿತರಿಗೆ ಒಳ್ಳೆಯ ರಾಜಕೀಯ ಶಕ್ತಿ ನೀಡಿದೆ, ನಮ್ಮಲ್ಲಿ ಜ್ಞಾನದ ಕೊರತೆಯಿಂದಾಗಿ ಎಲ್ಲರೂ ಹಿಂದುಳಿಯುವಂತಾಯಿತು, ಅಂಧಕಾರದಿಂದ ಹೊರಬಂದು ನಾಯಕತ್ವ ಗುಣ ಬೆಳೆಸಿಕೊಳ್ಳಿ ಎಂದರು.
ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಒಡೆದು ಆಳುವ ಮೂಲಕ ರಾಜಕೀಯಕ್ಕೆ ಮಾತ್ರ ಬಳಸಿಕೊಳ್ಳುತ್ತಿದ್ದ ದಲಿತರು ಸ್ವಾತಂತ್ರ್ಯ ಬಂದು 73 ವರ್ಷ ಕಳೆದರೂ ನಾಯಕರುಗಳಾಗಿ ಹೊರಹೊಮ್ಮಲು ಸಾಧ್ಯವಾಗದೆ ಕೇವಲ ಅನುಸರಿಸುವಂತೆ ಆಗಿರೋದು ನಮ್ಮಗಳ ದೌರ್ಬಲ್ಯ, ಕಾಲ ಬದಲಾಗಿದೆ, ಇಂಥ ಮನಸ್ಥಿತಿಯಿಂದ ಹೊರಬಂದು ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದ ಮೇಲೆ ಮಿಸಲಾತಿ ರದ್ದಾಗುತ್ತದೆ ಎಂಬ ಅಪಪ್ರಚಾರದ ಮಾತುಗಳಿಗೆ ಕಿವಿಗೊಡಬೇಡಿ, ನಮ್ಮಗಳ ನಡುವೆ ಕಂದಕ ನಿರ್ಮಾಣ ಮಾಡುತ್ತಿರುವವರಿಗೆ ತಕ್ಕ ಉತ್ತರ ನೀಡಬೇಕಾಗಿದೆ ಎಂದರು.
ಕಾರ್ಯಕಾರಣಿ ಸಭೆಯಲ್ಲಿ ಜಿಲ್ಲಾ ಅಧ್ಯಕ್ಷ ಮಾರುತಿ ಗಂಗಹನುಮಯ್ಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಿಮ್ಮಜ್ಜ, ಕಾರ್ಯದರ್ಶಿ ಶಿವಕುಮಾರ್ ಡಿ ಸಾಕೇಲ್, ಜಿಲ್ಲಾ ಕಚೇರಿ ಕಾರ್ಯದರ್ಶಿ ಎಂ.ಸುರೇಶ್, ಮಧುಗಿರಿ ತಾಲ್ಲೂಕು ಮಂಡಲ ಅಧ್ಯಕ್ಷ ಪಿ.ನರಸಿಂಹಮೂರ್ತಿ, ಪ್ರಧಾನ ಕಾರ್ಯದರ್ಶಿ ಕಂಬದ ರಂಗಯ್ಯ, ಮಧುಗಿರಿ ಮಂಡಲ ಖಜಾಂಚಿ ತಿಮ್ಮಣ್ಣ, ಜಿಲ್ಲಾ ಮತ್ತು ತಾಲ್ಲೂಕು ಅಧ್ಯಕ್ಷರು ಉಪಾಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!