ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆಗೆ ಜೂ.10 ಕೊನೆ

187

Get real time updates directly on you device, subscribe now.

ಶಿರಾ: ಮಾರ್ಚ್-ಏಪ್ರಿಲ್ 2022ರ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಹಾಗೂ ಹಿಂದಿನ ಸಾಲುಗಳಲ್ಲಿ ಅನುತ್ತೀರ್ಣರಾದ ಎಲ್ಲಾ ಅರ್ಹ ಪುನರಾವರ್ತಿತ ಅಭ್ಯರ್ಥಿಗಳಿಗೆ ಜೂನ್ 2022 ರಲ್ಲಿ ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆಗೆ ಅಭ್ಯರ್ಥಿಗಳು ಆನ್ ಲೈನ್ ಮೂಲಕ ನೋಂದಾಯಿಸಲು, ಶಾಲಾ ಶುಲ್ಕ ಪಾವತಿಸಲು ಹಾಗೂ ಪ್ರಸ್ತಾವನೆ ಸಲ್ಲಿಕೆಗೆ ದಿನಾಂಕಗಳನ್ನು ಈಗಾಗಲೇ ವಿಸ್ತರಿಸಲಾಗುತ್ತದೆ.

ಆದಾಗ್ಯೂ ಮತ್ತೊಮ್ಮೆ ದಿನಾಂಕವನ್ನು ವಿಸ್ತರಿಸಲು ಹಲವು ಶಾಲೆಗಳ ವಿದ್ಯಾರ್ಥಿಗಳಿಂದ ಹಾಗೂ ಪೋಷಕರಿಂದ ದೂರವಾಣಿ ಮುಖಾಂತರ ಹಾಗೂ ಖುದ್ದಾಗಿ ಕೋರಿರುತ್ತಾರೆ. ಈ ಸಂಬಂಧ ಈಗಾಗಲೇ ದಿನಾಂಕವನ್ನು ವಿಸ್ತರಿಸಿದ್ದು ಇದೇ ಅಂತಿಮ ದಿನಾಂಕವಾಗಿದ್ದು ನಿಗದಿಪಡಿಸಿದ ಅಂತಿಮ ದಿನಾಂಕದಂದು ವಿದ್ಯಾರ್ಥಿಗಳು ನೋಂದಣಿ ಬಗ್ಗೆ ಸಂಬಂಧಿಸಿದ ಮುಖ್ಯ ಶಿಕ್ಷಕರನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.
ಮಂಡಳಿಯ ಜಾಲತಾಣದ ಮುಖಾಂತರ ವಿದ್ಯಾರ್ಥಿಗಳ ಮಾಹಿತಿಯನ್ನು ಅಪ್ಲೋಡ್ ಮಾಡಲು ಜೂ.9 ಕಡೆ ದಿನ, ಶುಲ್ಕ ಪಾವತಿಸುವ ಕೊನೆಯ ದಿನ ಜೂ.10, ಪ್ರಸ್ತಾವನೆ ಸಲ್ಲಿಸಲು ಜೂ.14 ಕಡೆ ದಿನ ಆಗಿರುತ್ತದೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕ ಹೆಚ್.ಎನ್.ಗೋಪಾಲಕೃಷ್ಣ ಸುತ್ತೋಲೆಯಲ್ಲಿ ತಿಳಿಸಿರುವುದರಿಂದ ಈ ಕೂಡಲೇ ಶಾಲೆಯ ಮುಖ್ಯ ಶಿಕ್ಷಕರನ್ನು ಸಂಪರ್ಕಿಸಿ ಜೂನ್ ಹತ್ತರೊಳಗೆ ಶುಲ್ಕ ಪಾವತಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರಯ್ಯ ತಿಳಿಸಿರುತ್ತಾರೆ.

Get real time updates directly on you device, subscribe now.

Comments are closed.

error: Content is protected !!