ಎನ್.ಎಸ್.ಯು.ಐ ಕಾರ್ಯಕರ್ತರಿಗೆ ಬೇಲ್ ದೊರೆತಿದೆ

168

Get real time updates directly on you device, subscribe now.

ತುಮಕೂರು: ತಿಪಟೂರು ನಗರದಲ್ಲಿ ಶಿಕ್ಷಣ ಸಚಿವರ ಮನೆ ಮುಂದೆ ಎನ್.ಎಸ್.ಯು.ಐ ಕಾರ್ಯಕರ್ತರು ನಡೆಸಿರುವ ಪ್ರತಿಭಟನೆಗೆ ಸಂಬಂಧಿಸಿದಂತೆ ಕಾರಾಗೃಹದಲ್ಲಿರುವ 25 ಮಂದಿ ಎನ್ಎಸ್ಯುಐ ಕಾರ್ಯಕರ್ತರಿಗೆ ಗೌರವಾನ್ವಿತ ನ್ಯಾಯಾಲಯ ಬುಧವಾರ ಸಂಜೆ ಜಾಮೀನು ಮಂಜೂರು ಮಾಡಿದ್ದು, ಸತ್ಯಕ್ಕೆ ಸಿಕ್ಕ ಜಯ ಎಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮುರಳೀಧರ ಹಾಲಪ್ಪ ತಿಳಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಿಪಟೂರು ಜಿಲ್ಲಾ ಸತ್ರ ನ್ಯಾಯಾಧೀಶರಾದ ಪುಷ್ಪಾವತಿ ಅವರು ಬೇಲ್ ಮಂಜೂರು ಮಾಡಿ ಆದೇಶಿಸಿದ್ದು, ಆದೇಶ ಪತ್ರದಲ್ಲಿ ಒಬ್ಬರಿಗೆ ಇಬ್ಬರು ಶ್ಯೂರಿಟಿ ನೀಡಬೇಕೆಂದು ಆ ಆದೇಶದಲ್ಲಿ ತಿಳಿಸಲಾಗಿದೆ. ನ್ಯಾಯಾಲಯದ ವಿಧಿ ವಿಧಾನಗಳು ಕಾರಾಗೃಹದ ಮುಖ್ಯಸ್ಥರಿಗೆ ತಲುಪಿದ ನಂತರ ಬಂಧಿಯಾಗಿರುವ ಎಲ್ಲಾ ಎನ್ಎಸ್ ಯುಐ ಕಾರ್ಯಕರ್ತರು ಬಿಡುಗಡೆಯಾಗಲಿದ್ದಾರೆ ಎಂದು ಹೇಳಿದರು.
ವಿದ್ಯಾರ್ಥಿಗಳು ಪಠ್ಯ ಪರಿಷ್ಕರಣೆ ವಿರೋಧಿಸಿ ಹಾಗೂ ಇದುವರೆಗೂ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಸರಬರಾಜು ಮಾಡದೇ ಇರುವುದನ್ನು ಖಂಡಿಸಿ, ಶಿಕ್ಷಣ ಸಚಿವರ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾರೆಯೇ ವಿನಃ ಯಾವುದೇ ದುರುದ್ಧೇಶ ಪೂರ್ವಕವಲ್ಲ ಎಂದರು.
ಪ್ರತಿಭಟನೆ ನಡೆಸಿದ ಎನ್ಎಸ್ಯುಐ ಕಾರ್ಯಕರ್ತರ ವಿರುದ್ಧ ಬಾಂಬ್ ಅಥವಾ ಸ್ಪೋಟಕ ವಸ್ತುಗಳನ್ನು ಉಪಯೋಗಿಸುವಂ ತಹವರಿಗೆ ಹಾಕುವ 462 ಕಾನೂನನ್ನು ಹಾಕಿ ಜಾಮೀನು ರಹಿತ ಪ್ರಕರಣ ದಾಖಲಿಸಿ, ವಿದ್ಯಾರ್ಥಿಗಳನ್ನು ಜೈಲಿಗೆ ಕಳುಹಿಸಿರುವ ಕ್ರಮ ಖಂಡನೀಯ ಎಂದರು.
ವಿದ್ಯಾರ್ಥಿಗಳ ಬಿಡುಗಡೆಗಾಗಿ ಕೆಪಿಸಿಸಿ ವಕೀಲರ ಘಟಕದಿಂದ ಕಳೆದ ಮೂರು ದಿನಗಳಿಂದಲೂ ನ್ಯಾಯಾಲಯದಲ್ಲಿ ಬೇಲ್ ಗೋಸ್ಕರ ಶ್ರಮಪಟ್ಟಿದ್ದಾರೆ. ಬುಧವಾರ ಸಂಜೆ ಬೇಲ್ ಮಂಜೂರು ಆಗಿದ್ದು, ಇದು ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಸತ್ಯಕ್ಕೆ ಸಂದ ಜಯವಾಗಿದೆ ಎಂದು ಹೇಳಿದರು.

Get real time updates directly on you device, subscribe now.

Comments are closed.

error: Content is protected !!