ರೈತರ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಧರಣಿ

190

Get real time updates directly on you device, subscribe now.

ಕುಣಿಗಲ್: ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡುವುದು ಸೇರಿದಂತೆ ರೈತರ ವಿವಿಧ ಸಮಸ್ಯೆಗಳ ಬಗೆಹರಿಸುವಂತೆ ಆಗ್ರಹಿಸಿ ಜೂನ್ 14 ರಿಂದ ಜಿಲ್ಲಾಧಿಕಾರಿಗಳ ಕಚೆೇರಿ ಮುಂದೆ ಅನಿರ್ಧಿಷ್ಠಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರೈತರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಕರಿಗೌಡ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕುಣಿಗಲ್ ತಾಲೂಕು ಸೇರಿದಂತೆ ಜಿಲ್ಲೆಯಾದ್ಯಂತ ಬಗರ್ ಹುಕುಂ ಸಾಗುವಳಿ ಹಕ್ಕುಪತ್ರ ನೀಡುವ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದೆ, ಯಾವುದೇ ಜನಪ್ರತಿನಿಧಿಗಳು ಸಮಸ್ಯೆ ಬಗೆ ಹರಿಸಲು ಮುಂದಾಗುತ್ತಿಲ್ಲ, ಕುಣಿಗಲ್ ತಾಲೂಕು ಒಂದರಲ್ಲೆ ಎಸ್.ಪಿ.ಮುದ್ದಹನುಮೇಗೌಡರು ಶಾಸಕರಾಗಿದ್ದ ಅವಧಿಯಲ್ಲಿ ಮೂರು ಸಾವಿರ ಹಾಗೂ ನಮೂನೆ 57ರಲ್ಲಿ 18 ಸಾವಿರ ಪ್ರಕರಣ ಇತ್ಯರ್ಥವಾಗದೆ ಉಳಿದಿದೆ. ರೈತರು ಅತಂತ್ರ ಸ್ಥಿತಿಯಲ್ಲಿದ್ದಾರೆ, ಸರ್ಕಾರಕ್ಕೆ ಹೋರಾಟ ಮಾಡಿ ಮನವಿ ಮಾಡಿದರೂ ಯಾವುದೇ ಸಮಸ್ಯೆ ಬಗೆಹರಿಯುತ್ತಿಲ್ಲ, ಆದ್ದರಿಂದ ಸಾಗುವಳಿ ಹಕ್ಕುಪತ್ರ ನೀಡುವಂತೆ, ದೌರ್ಜನ್ಯದ ಮೂಲಕ ಅರಣ್ಯ ಇಲಾಖೆ ವಶಪಡಿಸಿಕೊಂಡಿರುವ ಬಗರ್ ಹುಕುಂ ಭೂಮಿ ಮರುಕಳಿಸಲು, ಸಾಗುವಳಿ ಚೀಟಿ ಪಡೆದಿರುವ ಎಲ್ಲಾ ರೈತರಿಗೆ ಭೂಮಿದಾಖಲೆ ದುರಸ್ತಿ ಮಾಡಿ ಪಹಣಿ ನೀಡುವಂತೆ, ವಸತಿ ರಹಿತರಿಗೆ ಭೂಮಿ ಸ್ವಾಧೀನ ಪಡಿಸಿಕೊಂಡು ನಿವೇಶನ, ಮನೆ ನೀಡುವಂತೆ, ರಸ್ತೆ, ನಾಲೆ ಇತರೆ ಸರ್ಕಾರಿ ಉದ್ದೇಶಕ್ಕೆ ರೈತರ ಭೂ ಸ್ವಾಧೀನಪಡಿಸಿಕೊಂಡು ಪರಿಹಾರ ನೀಡದೆ ಇರುವ ಪ್ರಕರಣ ಶೀಘ್ರ ಪೂರ್ಣಗೊಳಿಸಿ, ತೆಂಗು ಬೆಳೆ ಪ್ರಾಧಿಕಾರ ರಚಿಸುವ ಜೊತೆಯಲ್ಲಿ ಅಮೃತ್ ಕಾವಲ್ ಯೋಜನೆ ಜಾರಿಗೆ ಆಗ್ರಹಿಸಿ ಧರಣಿ ನಡೆಸುತ್ತಿದ್ದು, ಧರಣಿಯಲ್ಲಿ ಪ್ರಾಂತ ರೈತ ಸಂಘ, ಬಗರ್ ಹುಕುಂ ಸಾಗುವಳಿದಾರರ ಹೋರಾಟ ಸಮಿತಿಯು ಪಾಲ್ಗೊಳ್ಳಲಿದ್ದು, ತಾಲೂಕು ಸೇರಿದಂತೆ ಜಿಲ್ಲೆಯಿಂದ ಹೆಚ್ಚಿನ ಜನರು, ರೈತರು ಧರಣಿ ಬೆಂಬಲಿಸಿ ಪಾಲ್ಗೊಳ್ಳುವಂತೆ ಮನವಿ ಮಾಡಿ, ಕುಣಿಗಲ್ ಶಾಸಕರು ಬಗರ್ಹುಕುಂ ಸಭೆಗಳಲ್ಲಿ ಕೇವಲ ತಮ್ಮ ಹಿಂಬಾಲಕರು ಸೇರಿದಂತೆ ಕೆಲವೆ ಮಂದಿ ಅರ್ಜಿ, ಪ್ರಕರಣಗಳ ಬಗ್ಗೆ ಗಮನಹರಿಸಿ ಸಾಮಾನ್ಯ ಅರ್ಹ ರೈತರಿಗೆ ಅನ್ಯಾಯ ಮಾಡುತ್ತಿದ್ದು ಈ ನಿಟ್ಟಿನಲ್ಲಿ ಶಾಸಕರು ಗಮನ ಹರಿಸಿ ರೈತರಿಗೆ ಸಮರ್ಪಕ ನ್ಯಾಯ ಒದಗಿಸುವಂತೆ ಒತ್ತಾಯಿಸಿದರು.
ಜಿಲ್ಲಾ ಉಪಾಧ್ಯಕ್ಷ ಶಿವಲಿಂಗಯ್ಯ, ತಾಲೂಕು ಮಹಿಳಾ ಘಟಕದ ಅದ್ಯಕ್ಷೆ ಛಾಯದೇವಮ್ಮ, ಪ್ರದಾನ ಕಾರ್ಯದರ್ಶಿ ಪುಟ್ಟಸ್ವಾಮಯ್ಯ, ಸಂಘಟನ ಕಾರ್ಯದರ್ಶಿ ಕುಮಾರ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!