ತುಮಕೂರು: ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಮತ ಹಾಕದೆ ಅಡ್ಡ ಮತದಾನ ಮಾಡಿದ್ದಾರೆ ಎಂದು ಆರೋಪಿಸಿ ಗುಬ್ಬಿ ಶಾಸಕ ಶ್ರೀನಿವಾಸ್ ಮನೆ ಮುಂದೆ ಶನಿವಾರ ಜೆಡಿಎಸ್ ಕಾರ್ಯಕರ್ತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಆಂಜನಪ್ಪ ನೇತೃತ್ವದಲ್ಲಿ ಶಾಸಕ ಶ್ರೀನಿವಾಸ ಮನೆ ಮುಂದೆ ಜಮಾಯಿಸಿದ ಜೆಡಿಎಸ್ ಕಾರ್ಯಕರ್ತರು ಪ್ರತಿ‘ಟನೆ ನಡೆಸಿದರು. ಇದರಿಂದ ಕೆಲಕಾಲ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು, ನಂತರ ಸ್ಥಳದಲ್ಲಿದ್ದ ಪೊಲೀಸರು ಕಾರ್ಯಕರ್ತರನ್ನು ಸಮಾಧಾನ ಪಡಿಸಿದರು. ಇದೇ ವೇಳೆ ಶಾಸಕ ಶ್ರೀನಿವಾಸ್ ಕೂಡ ಆಕ್ರೋಶಭರಿತರಾಗಿ ಜೆಡಿಎಸ್ ಕಾರ್ಯಕರ್ತರೊಂದಿಗೆ ವಾಗ್ವಾದ ನಡೆಸಿದರು. ಅಲ್ಲದೆ ಶ್ರೀನಿವಾಸ್ ಬೆಂಬಲಿಗರು ಇಲ್ಲಿ ಜಮಾಯಿಸಿ ಜೆಡಿಎಸ್ ಕಾರ್ಯಕರ್ತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಶಾಸಕ ಶ್ರೀನಿನಾಸ್ ಮಾತನಾಡಿ, ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಯಾವುದರಲ್ಲಿ ಉತ್ತಮ ಅಂತಾ ಹೇಳಿ, ಬೆಳಗ್ಗೆ ಒಂದು ಹೇಳ್ತಾನೆ, ಸಂಜೆ ಒಂದು ಹೇಳ್ತಾನೆ ಎಂದು ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲೇ ವಾಗ್ಧಾಳಿ ನಡೆಸಿದರು.
ರಾಜ್ಯಸಭೆ ಚುನಾವಣೆ ಮತದಾನದ ವೇಳೆ ನಾನು ಬ್ಯಾಲೆಟ್ ಪೇಪರ್ ತೋರಿಸುವಾಗ ಸರಿಯಾಗಿಯೇ ತೋರಿಸಿದ್ದೇನೆ, ಮೂರ್ನಾಲ್ಕು ನಿಮಿಷ ಹಿಡಿದುಕೊಂಡಿದ್ದೇನೆ, ಅದಾದ ಮೇಲೆ ಹೋಗಿ ವೋಟ್ ಹಾಕಿದ್ದೇನೆ, ಅವನೇನು ಕತ್ತೆ ಕಾಯುತ್ತಿದ್ದನಾ? ಹೆಬ್ಬೆಟ್ಟು ತೆಗಿ ಅನ್ನಬೇಕಿತ್ತು, ನನಗಿರುವ ಮಾಹಿತಿ ಪ್ರಕಾರ ಕುಮಾರಸ್ವಾಮಿ ಮನೆಯವರೇ ನಾಟಕ ಮಾಡ್ತಿದ್ದಾರೆ, ನನ್ನನ್ನು ಮುಗಿಸಬೇಕು ಅಂತಾ ಹೇಳಿ ಅವರೇ ತಮಗೆ ಬೇಕಾದವರಿಂದ ಕ್ರಾಸ್ ವೋಟಿಂಗ್ ಮಾಡಿಸಿದ್ದಾರೆ, ನನ್ನ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಲಾಗುತ್ತಿದೆ ಕಿಡಿ ಕಾರಿದರು.
ನನಗೂ, ಅವರಿಗೂ ಆಗೊಲ್ಲ ಅನ್ನೋದು ಗೊತ್ತು, ಈಗಾಗಲೇ ನನ್ನನ್ನು ಸೋಲಿಸಲೇ ಬೇಕು ಅಂತಾ ಷಡ್ಯಂತರ ಮಾಡಿದ್ದಾರೆ, ಇದು ಕೂಡ ಅದೇ ರೀತಿ ಷಡ್ಯಂತರ, ಇದೇ ಕುಮಾರಸ್ವಾಮಿ ಕ್ರಾಸ್ ವೋಟಿಂಗ್ ಮಾಡ್ಸಿ, ನನ್ನ ಮೇಲೆ ಹಾಕುತ್ತಿದ್ದಾರೆ, ಅವರಿಗೆ ಗೊತ್ತಿತ್ತು ತಮ್ಮ ಅಭ್ಯರ್ಥಿ ಗೆಲ್ಲಲ್ಲ ಅಂತಾ, ಹೀಗಾಗಿ ನನ್ನ ಮೇಲೆ ಗೂಬೆ ಕೂರಿಸಿ ತೇಜೋವಧೆ ಮಾಡುವ ಪ್ರಯತ್ನ ಮಾಡಿದ್ದಾರೆ. ನಾನು ಇವನಿಗೆ ಹೆದರಿಕೊಂಡು ಅಥವಾ ಬೇರೆ ಯಾರಿಗೋ ಹೆದರಿಕೊಂಡು ಯಾರಿಗೂ ಕಚ್ಚೆ ಕ್ಷಿಟ್ಟಲ್ಲ, ನನ್ನ ಮನಃಸಾಕ್ಷಿ ವಿರುದ್ಧ ನಾನು ನಡೆಯಲ್ಲ, ನಾಚಿಕೆ ಇಲ್ಲ, ಮಾನ ಮರ್ಯಾದೆ ಇಲ್ಲ, ಗಳಿಗೆಗೊಂದು, ಗಂಟೆಗೊಂದು ಹೇಳಿಕೊಂಡು ತಿರುಗುತ್ತಾನೆ, ಇವನನ್ನ ಯಾರಾದ್ರೂ ಲೀಡರ್ ಅಂತಾ ಹೇಳ್ತಾರಾ ಎಂದು ಹೆಚ್ಡಿಕೆ ವಿರುದ್ಧ ಏಕವಚನದಲ್ಲೇ ಆಕ್ರೋಶ ಹೊರಹಾಕಿದರು.
ನಾನು ಬಿಜೆಪಿಯನ್ನು ಪ್ರಾರಂಭದಿಂದಲೂ ವಿರೋಧ ಮಾಡಿಕೊಂಡು ಬಂದಿದ್ದೇನೆ, ಆಪರೇಷನ್ ಕಮಲ ನಿಲ್ಲಿಸಿದ್ದೆ ನಾನು, ಹಾಕಿದ್ರೆ ನಾನು ಕಾಂಗ್ರೆಸ್ ಗೆ ಮತ ಹಾಕಿರುತ್ತೇನೆ, ನಾನೇನು ಇವನಿಗೆ ಹೆದರಿಕೊಳ್ಳಬೇಕಾ? ನನ್ನ ವಿರುದ್ಧ ಅಭ್ಯರ್ಥಿಯನ್ನು ಹಾಕಿದ್ದ ಮೇಲೆ ಹೆದರಿಕೊಳ್ಳುವುದು ಹೇಗೆ ಬಂತು, ಕುಮಾರಸ್ವಾಮಿ ನಾನು ಹೆಬ್ಬೆಟ್ಟು ಇಟ್ಟುಕೊಂಡಿರೋದನ್ನ ನೋಡಿದ್ನಾ? ಎಲ್ಲವನ್ನೂ ಕಲ್ಪನೆ ಮಾಡಿಕೊಂಡು ಹೇಳ್ತಾನೆ, ಒಬ್ಬನನ್ನ ತೇಜೋವಧೆ ಮಾಡಬೇಕು ಅಂದ್ರೆ ಏನೂ ಬೇಕಾದ್ರೂ ಮಾಡ್ತಾರೆ, ಇವನು ಅನಿರೀಕ್ಷಿತವಾಗಿ ಮುಖ್ಯಮಂತ್ರಿ ಆದವನು, ಯೋಗ್ಯತೆಯಿಂದ ಮುಖ್ಯಮಂತ್ರಿ ಆದವನಲ್ಲ, ಇನ್ನೊಂದು ಜನ್ಮ ಎತ್ತಿ ಬಂದರೂ ಇವನ ಪಕ್ಷ ಬಹುಮತ ಬರಲ್ಲ, ಒಕ್ಕಲಿಗರನ್ನ ತುಳಿಯೋದೆ ಇವನ ಒನ್ ಪಾಯಿಂಟ್ ಅಜೆಂಡಾ, ಒಳ್ಳೆಯ ಕಾರು, ಒಳ್ಳೆಯ ಬಟ್ಟೆ ಹಾಕಿಕೊಂಡು ಹೋದ್ರೆ ಅವರ ಕೆಂಗಣ್ಣಿಗೆ ಗುರಿಯಾಗಿ ಹೋಗ್ತೇವೆ, ಪಕೀರರು, ಪೇಪರ್ ಆಯೋರು ಇರ್ತಾರಲ್ಲ ಆ ತರಾ ಇರಬೇಕು, ಉಟ್ರೆ, ಬೈಟ್ರೆ ಅಂತಿದ್ರೆ ಕೊನೆಯ ತನಕಾ ಇಟ್ಕೊಂಡ್ತಾರೆ ಎಂದು ತಿಳಿಸಿದರು.
ಇನ್ನು ಮುಂದೆ ನೋಡಲಿ, ಎಲ್ಲವನ್ನೂ ಬಿಚ್ಚಿಡುತ್ತೇವೆ, ಯಾವುದರಲ್ಲಿ ಪರಿಶುದ್ಧವಾಗಿ ಅವ್ನೆ, ಕಚ್ಚೆ ಸರಿಯಿಲ್ಲ, ಬಾಯಿ ಸರಿ ಇಲ್ಲ, ಏನು ನೈತಿಕತೆ ಇದೆ, ಇನ್ನೊಬ್ಬರ ಬಗ್ಗೆ ಮಾತನಾಡೋಕೆ, ಇವರದು ಏನು ಇದೆ ಅದನ್ನ ನೋಡಿಕೊಳ್ಳಬೇಕು, ಇವನ ವಿರುದ್ಧ ಹೋರಾಟ ಮಾಡೋದೆ ನನ್ನ ಮುಂದಿನ ನಡೆ, ನಾನು ಸೋತರೂ ಪರವಾಗಿಲ್ಲ, ಇವನ ಅಭ್ಯರ್ಥಿಯನ್ನು ಗೆಲ್ಲೋಕೆ ಬಿಡಲ್ಲ, ಅವನೇ ಬಂದು ನಿಂತು ಗೆದ್ದು ಬಿಡಲಿ ನೋಡೋಣ, ನನ್ನ ಲೈಫ್ ಲಾಂಗ್ ಅವರ ಮನೆಯಲ್ಲಿ ಕೂಲಿ ಮಾಡ್ತೇನೆ, ನನ್ನನ್ನು ತೇಜೋವಧೆ ಮಾಡಲು ಕಾಸು ಹೊಡೆಯುವುದು, ಕಾಸು ಕೊಡುವುದು ಕುಮಾರಸ್ವಾಮಿಯದ್ದು ಕೆಲಸ, ಕುಮಾರಸ್ವಾಮಿ ಹತ್ರ ಕಾಸು ಇಸ್ಕೊಂಡ್ ಬಂದು ಮನೆ ಮುಂದೆ ಪ್ರತಿ‘ಟನೆ ಮಾಡುತ್ತಿದ್ದಾರೆ, ಟಿಕೆಟ್ ಕೊಡ್ತೀನಿ ಅಂತ ಹೇಳಿ ಅವರ ಬಳಿ ಕಾಸು ಇಸ್ಕೊಳ್ತಾನೆ ಕುಮಾರಸ್ವಾಮಿ ಎಂದು ಆರೋಪಿಸಿದರು.
ಹಳ್ಳಿ ಕಡೆ ನಾಲ್ಕೈದು ಎಕರೆ ಜಮೀನು ಇಟ್ಕೊಂಡು ಜೀವನ ಮಾಡಿದಂಗೆ ಇವನು ಜೆಡಿಎಸ್ ಪಕ್ಷ ಇಡ್ಕೊಂಡು ಜೀವನ ಮಾಡುತ್ತಾನೆ, ಕುಮಾರಸ್ವಾಮಿಗೆ ತಾಕತ್ತಿದ್ದರೆ ಗುಬ್ಬಿಯಲ್ಲಿ ಬಂದು ಚುನಾವಣೆ ಮಾಡಲಿ ನಿಂತು ಕೊಳ್ಳಲಿ, ಇದಕ್ಕೆಲ್ಲ ನಾನು ಹೆದರೋನಲ್ಲ ಎಂದು ಶಾಸಕ ಶ್ರೀನಿವಾಸ್ ಕಿಡಿಕಾರಿದರು.
ಕುಮಾರಸ್ವಾಮಿಯ ಕಚ್ಚೆ, ಬಾಯಿ ಸರಿ ಇಲ್ಲ
ಹೆಚ್ಡಿಕೆ ಗುಬ್ಬಿಯಲ್ಲಿ ಸ್ಪರ್ಧಿಸಿ ಗೆಲ್ಲಲಿ ನೋಡೋಣ- ಶಾಸಕ ಶ್ರೀನಿವಾಸ್ ಸವಾಲ್
Get real time updates directly on you device, subscribe now.
Prev Post
Comments are closed.