ಶ್ರೀನಿವಾಸ್ ರಾಜಿನಾಮೆಗೆ ಒತ್ತಾಯಿಸಿ ಪ್ರತಿಭಟನೆ

280

Get real time updates directly on you device, subscribe now.

ಗುಬ್ಬಿ: ಪಕ್ಷ ವಿರೋಧಿ ಚಟುವಟಿಕೆ ಮಾಡಿರುವಂತಹ ಶಾಸಕ ಎಸ್.ಆರ್.ಶ್ರೀನಿವಾಸ್ ಕೂಡಲೇ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿ ಚನ್ನಬಸವೇಶ್ವರ ಸ್ವಾಮಿ ದೇವಾಲಯದ ಆವರಣದಿಂದ ಮೆರವಣಿಗೆ ಬಂದು ಬಸ್ ನಿಲ್ದಾಣದಲ್ಲಿ ಶಾಸಕ ಶ್ರೀನಿವಾಸ್ ಅವರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ಮಾತನಾಡಿ, ಪಕ್ಷಕ್ಕೆ ರಾಜಿನಾಮೆ ನೀಡಿ ಅಖಾಡಕ್ಕೆ ಬಂದು ಜನತಾ ತೀರ್ಪು ತೆಗೆದುಕೊಳ್ಳಲಿ, ಅದನ್ನು ಬಿಟ್ಟು ಪಕ್ಷದ ಗೌರವವನ್ನು ಏನು ಮಾಡುತ್ತೀರಾ, ನೀವು ಮಾಡಿರುವ ಅಭಿವೃದ್ಧಿಯನ್ನು 20 ವರ್ಷದಿಂದ ನೋಡಿದ್ದಾರೆ ಎಂದು ನೇರವಾಗಿ ಟೀಕೆ ಮಾಡಿದ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ಶಾಸಕರು ಒಂದು ಕಡೆ ಒಂದೊಂದು ರೀತಿಯಲ್ಲಿ ಮಾತನಾಡುತ್ತಾರೆ, ಕಾರ್ಯಕರ್ತರ ಗೊಂದಲಕ್ಕೆ ದೂಡುತ್ತಾರೆ, ಪಕ್ಷದ ಅಭ್ಯರ್ಥಿಗೆ ಮತ ಹಾಕುವ ಬದಲು ಬಿಜೆಪಿ ಪಕ್ಷಕ್ಕೆ ಹಾಕುವ ಮೂಲಕ ಪಕ್ಷಕ್ಕೆ ಅವಮಾನ ಮಾಡಿದ್ದಾರೆ, ದೇವೇಗೌಡರು, ಕುಮಾರಸ್ವಾಮಿ ಹಾಗೂ ಪಕ್ಷಕ್ಕೆ ಮತ ಕೊಟ್ಟು ಗೆಲ್ಲಿಸಿದವರ ಕತ್ತು ಕುಯ್ಯುವ ಕೆಲಸ ಮಾಡಿದ್ದಾರೆ, ಈ ನಾಟಕ ಆಡುವ ಬದಲಿಗೆ ನೇರವಾಗಿ ಚುನಾವಣೆಗೆ ಬನ್ನಿ ಎಂದು ಆಗ್ರಹ ಮಾಡಿದರು.
ಎಪಿಎಂಸಿ ಸದಸ್ಯ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ ಬಿಜೆಪಿ ಪಕ್ಷ ಯಾವತ್ತಿದ್ರು ನನ್ನ ವಿರೋಧ ಎಂದಿದ್ದ ಶಾಸಕರು ಜಾತ್ಯಾತೀತ ತತ್ವ ಬಿಟ್ಟು ಬಿಜೆಪಿ ಪಕ್ಷದ ಅಭ್ಯರ್ಥಿಗೆ ಮತ ಹಾಕುವ ಮೂಲಕ ನಮ್ಮ ಪಕ್ಷ ಅವಮಾನ ಮಾಡಿದ್ದಾರೆ, ಒಂದು ಪಕ್ಷದ ಮತದಾರರಿಂದ ಅಧಿಕಾರವನ್ನ ಪಡೆದುಕೊಂಡು ಮತ್ತೊಂದು ಪಕ್ಷಕ್ಕೆ ಮತ ಹಾಕುವ ಮೂಲಕ ಪಕ್ಷ ವಿರೋಧಿ ಚಟುವಟಿಕೆ ಜೊತೆಯಲ್ಲಿ ಇಡೀ ಮತದಾರರಿಗೆ ಮೋಸ ಮಾಡಿದ್ದಾರೆ, ನಮ್ಮ ಪಕ್ಷದಲ್ಲಿ ಇರಲು ಇಷ್ಟ ಇಲ್ಲ ಎಂದರೆ ರಾಜೀನಾಮೆ ನೀಡಿ ಬೇರೊಂದು ಪಕ್ಷಕ್ಕೆ ಹೋಗಿ ಚುನಾವಣೆ ಎದುರಿಸಿ, ಅದನ್ನು ಬಿಟ್ಟು ಈ ರೀತಿ ಮಾಡಿರುವುದು ಎಷ್ಟು ಸರಿ ಎಂಬುದನ್ನು ಮುಂದೆ ಜನರೇ ತೀರ್ಮಾನಿಸುತ್ತಾರೆ ಎಂದು ತಿಳಿಸಿದರು.
ಮುಖಂಡ ಶಿವಲಿಂಗೇಗೌಡ ಮಾತನಾಡಿ ಪಕ್ಷಕ್ಕೆ ಮೋಸ ಮಾಡಿದಂತಹ ಶಾಸಕರಿಗೆ ಮುಂದಿನ ದಿನಗಳಲ್ಲಿ ಮತದಾರರೇ ತೀರ್ಪು ನೀಡುತ್ತಾರೆ, ಕ್ಷೇತ್ರದ ಸಮಸ್ಯೆಗೆ ಸ್ಪಂದಿಸಿದ ಶಾಸಕರು ಹಣದಾಸೆಗೆ ಬಲಿಯಾಗಿದ್ದು, ತಾಲೂಕಿನ ಜನತೆಗೆ ಅವಮಾನ ಮಾಡಿದ್ದಾರೆ ಎಂದು ಕುಟುಕಿದರು.
ಜೆಡಿಎಸ್ ಮುಖಂಡ ಸುರೇಶಗೌಡ ಮಾತನಾಡಿ ಹಣದ ಆಮಿಷಕ್ಕೆ ಒಳಗಾಗಿ ಬಿಜೆಪಿ ಪಕ್ಷಕ್ಕೆ ಮತ ಹಾಕುವ ಮೂಲಕ ತಮ್ಮ ನೈತಿಕತೆ ಕಳೆದುಕೊಂಡು ವಿಶ್ವಾಸ ದ್ರೋಹಿ ಕೆಲಸ ಮಾಡಿರುವಂತಹ ಶಾಸಕ ಶ್ರೀನಿವಾಸ್ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.
ಈ ಸಂದ‘ರ್ದಲ್ಲಿ ಮುಖಂಡರಾದ ಚಿಕ್ಕವೀರಪ್ಪ, ರಘು, ಗೋಪಾಲಗೌಡ, ಗಂಗಣ್ಣ ಸೇರಿದಂತೆ ಜೆಡಿಎಸ್ ಕಾರ್ಯ ಕರ್ತರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!