ವೆಂಕಟೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ

589

Get real time updates directly on you device, subscribe now.

ತುಮಕೂರು: ಮಹಾಲಕ್ಷ್ಮಿ ನಗರದ ವೆಂಕಟೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ಶನಿವಾರ ಭಕ್ತಿ ಸಡಗರದಿಂದ ನೆರವೇರಿತು.

ಇದರ ಅಂಗವಾಗಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿವಿಧ ಪೂಜೆ, ಹೋಮ ಮತ್ತಿತರ ಕಾರ್ಯಕ್ರಮ ನೆರವೇರಿದವು. ಕೊರೊನಾ ಕಾರಣದಿಂದ ಎರಡು ವರ್ಷಗಳಿಂದ ಬ್ರಹ್ಮ ರಥೋತ್ಸವ ಆಚರಣೆಯಾಗಿರಲಿಲ್ಲ, ದೇವಸ್ಥಾನದ 18ನೇ ವಾರ್ಷಿಕೋತ್ಸವದ ಪ್ರಯುಕ್ತ 4 ದಿನ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ಶನಿವಾರ ಪೂಜಾ ವಿಧಿವಿಧಾನಗಳ ನಂತರ ವೆಂಕಟೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ಜರುಗಿತು, ಗುರುವಾರ ನಡೆದ ಸಾಮೂಹಿಕ ವಿವಾಹದಲ್ಲಿ ಎರಡು ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು ಎಂದು ಶ್ರೀನಿವಾಸ ಟ್ರಸ್ಟ್ ಅಧ್ಯಕ್ಷ ಡಿ.ಎಸ್.ಕುಮಾರ್ ಹೇಳಿದರು.
ಶುಕ್ರವಾರ ನಡೆದ ಕಾರ್ಯಕ್ರಮಗಳಲ್ಲಿ ಸ್ವಾಮಿಗೆ ಸುಪ್ರಭಾತ ಸೇವೆ, ನಿತ್ಯವಿಧಿ ಆರಾಧನೆ, ದ್ವಜಾರೋಹಣ, ಯಾಗ ಶಾಲಾ ಪ್ರವೇಶ, ದ್ವಾರ ತೋರಣ, ದ್ವಜ ಕುಂಭಾರಾಧನೆ, ಚತುಸ್ಥಾನಾರ್ಚನೆ, ಅಗ್ನಿಪ್ರತಿಷ್ಠೆ, ನಿತ್ಯ ಹೋಮ, ಪೂರ್ಣಾಹುತಿ ಸ್ವಾಮಿಯ ವಿಶೇಷವಾಹನೋತ್ಸವ, ವಿಶೇಷ ಕಲ್ಯಾಣೋತ್ಸವ ನೆರವೇರಿತು. ಭಾನುವಾರ ಗರುಡೋತ್ಸವ, ಸ್ವಾಮಿಗೆ ಮಂಗಳ ದ್ರವ್ಯಾಭಿಷೇಕ, ರಾತ್ರಿ ಶಯನೋತ್ಸವ ಹಮ್ಮಿಕೊಳ್ಳಲಾಗಿದೆ.
ಶ್ರೀನಿವಾಸ ಟ್ರಸ್ಟ್ ಅಧ್ಯಕ್ಷ ಡಿ.ಎಸ್.ಕುಮಾರ್, ಪ್ರಧಾನ ಅರ್ಚಕ ನರಹರಿ ದೀಕ್ಷಿತ್, ಪದ್ಮರೇಖಾ ಡಿ.ಎಸ್.ಕುಮಾರ್, ಅರ್ಚನ, ಅರ್ಜುನ್, ಮುಖಂಡ ರಾಜೇಶ್ ದೊಡ್ಮನೆ ಮತ್ತಿತರರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!