ಅರ್ಹರಿಗೆ ಮಾತ್ರ ನಿವೇಶನ ನೀಡಲು ಕ್ರಮ

ರಾಜಕೀಯ, ಪಕ್ಷ ಕಾರ್ಯಕರ್ತರ ಒತ್ತಡಕ್ಕೆ ಮಣಿಯುವುದಿಲ್ಲ: ಡಿಕೆಎಸ್

180

Get real time updates directly on you device, subscribe now.


ಕುಣಿಗಲ್: ಪಟ್ಟಣದಲ್ಲಿ ಕಳೆದ ಹಲವಾರು ವರ್ಷಗಳಿಂದ ಬಡ ಜನತೆಗೆ ನಿವೇಶನ ಹಂಚಿಲ್ಲ, ಪಟ್ಟಣದಲ್ಲಿ ಗುರುತಿಸಲಾಗಿರುವ ಜಾಗ ಅಭಿವೃದ್ಧಿಗೆ ರಾಜ್ಯದಲ್ಲೆ ಹೆಚ್ಚಿನ ಅನುದಾನ ನೀಡಿದ ವಸತಿ ಸಚಿವ ಸೋಮಣ್ಣ ಅವರಿಗೆ ಪಟ್ಟಣದ ಜನತೆ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆಂದು ಸಂಸದ ಡಿ.ಕೆ.ಸುರೇಶ್ ಹೇಳಿದರು.
ಮಂಗಳವಾರ ಸಂಜೆ ಪಟ್ಟಣದ ಹೊರವಲಯದ ಬೇಗೂರಿನಲ್ಲಿ ಆರುವರೆ ಕೋಟಿ ರೂ. ವೆಚ್ಚದಲ್ಲಿ ಸೇತುವೆ ರಸ್ತೆ ಅಭಿವೃದ್ಧಿ ಹಾಗೂ ಪಟ್ಟಣದ ಮೂರನೆ ವಾರ್ಡ್ನಲ್ಲಿ ಆರುವರೆ ಕೋಟಿ ರೂಪಾಯಿ ವೆಚ್ಚದಲ್ಲಿ ನಿವೇಶನ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ, ರಸ್ತೆ ಅಭಿವೃದ್ಧಿ ನಿಟ್ಟಿನಲ್ಲಿ ಗ್ರಾಮದ ಜನರು ರಸ್ತೆ ಒತ್ತುವರಿ ಜಾಗಬಿಟ್ಟು ಕಾಮಗಾರಿಗೆ ಅನುಕೂಲ ಮಾಡಿಕೊಟ್ಟಲ್ಲಿ ಉತ್ತಮ ರಸ್ತೆಯಾಗುತ್ತದೆ, ಪಟ್ಟಣದಲ್ಲಿ ನಿವೇಶನ ಹಂಚಿಕೆ ಕಾರ್ಯ ಜಾಗ ಗುರುತಿಸಿದರೂ ಬಂಡೆ ಇದ್ದರೂ ಯಾರೂ ನಿವೇಶನ ವಿಂಗಡನೆಗೆ ಮುಂದಾಗಿರಲಿಲ್ಲ, ಆದರೆ ಈ ನಿಟ್ಟಿನಲ್ಲಿ ಸಚಿವ ಸೋಮಣ್ಣನವರು ನಾಲ್ಕು ಬಾರಿ ಸಭೆ ಕರೆದು ನಿವೇಶನ ಅಭಿವೃದ್ಧಿಗೆ ಆರುವರೆ ಕೋಟಿ ರೂ.ಮಂಜೂರು ಮಾಡಿದ್ದಲ್ಲದೆ ಪಟ್ಟಣಕ್ಕೆ ಸಾವಿರ ನಿವೇಶನ ಮಂಜೂರು ಮಾಡಿದ್ದಾರೆ ಎಂದರು.
ಈಗಾಗಲೆ ಮೂರುವರೆ ಸಾವಿರ ಅರ್ಜಿ ಸ್ವೀಕೃತವಾಗಿದೆ, ಈಪೈಕಿ ಅರ್ಹರಿಗೆ ಮಾತ್ರ ನಿವೇಶನ ನೀಡಲು ಕ್ರಮ ಕೈಗೊಳ್ಳಲಾಗುವುದು, ಯಾವುದೇ ರಾಜಕೀಯ ಒತ್ತಡಕ್ಕೆ, ಪಕ್ಷ ಕಾರ್ಯಕರ್ತರ ಒತ್ತಡಕ್ಕೆ ಮಣಿಯುವುದಿಲ್ಲ, ಬಡಜನತೆಗೆ ನಿವೇಶನ ಸಿಗಬೇಕೆಂಬುದು ನಮ್ಮ ಧ್ಯೇಯ, ನನ್ನ ಹಣೆಬರಹದಲ್ಲಿ ಏನಿದೆಯೋ ಅದೇ ಆಗುತ್ತದೆ ಹೊರತು ನಿವೇಶನ ಕೊಟ್ಟಿಲ್ಲ ಎಂದು ಮತ ಹಾಕುವುದಿಲ್ಲ ಎಂಬ ಭಯ ಇಲ್ಲ, ಈಗ ಲಭ್ಯ ಇರುವ ನಿವೇಶನ ಹಂಚಿಕೆ ಮಾಡಿ ಉಳಿದವರಿಗೂ ನಿವೇಶನ ನೀಡಲು ಕ್ರಮ ಕೈಗೊಳ್ಳಲಾಗುವುದು ಗೊಂದಲಬೇಡ ಎಂದರು.
ಈಗ ಚುನಾವಣೆ ವರ್ಷ, ಶಾಸಕ ಡಾ.ರಂಗನಾಥ್ ಅವರನ್ನು ಮತ್ತೊಮ್ಮೆ ಬೆಂಬಲಿಸಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೈ ಬಲಪಡಿಸಿ ಮುಂದಿನ ದಿನಗಳಲ್ಲಿ ಉತ್ತಮ ಜನಪರ ಕಾರ್ಯ ಮಾಡಿ ತಾಲೂಕನ್ನು ಮಾದರಿ ಮಾಡಲಾಗುವುದು ಎಂದರು.
ಶಾಸಕ ಡಾ.ರಂಗನಾಥ್ ಮಾತನಾಡಿ, ಬೇಗೂರು ಗ್ರಾಮ ಒಂದಕ್ಕೆ ಸುಮಾರು 17 ಕೋಟಿ ರೂ. ಕಾಮಗಾರಿ ಮಾಡಲಾಗಿದೆ, ತಾಲೂಕಿನ ಗ್ರಾಮಾಂತರ ಹಾಗೂ ಪಟ್ಟಣ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಜನತೆ ನೀಡಿದ ಅಧಿಕಾರ ಸದ್ಬಳಕೆ ಮಾಡಿಕೊಂಡು ಉತ್ತಮ ಜನಪರ ಕಾರ್ಯ ಮಾಡುತ್ತಿದ್ದೇನೆ, ಅಭಿವೃದ್ಧಿ ವಿಷಯದಲ್ಲಿ ಎಂದೂ ರಾಜಕಾರಣ ಮಾಡುವುದಿಲ್ಲ, ವಿರೋಧ ಪಕ್ಷದವರು ರಾಜಕಾರಣ ಮಾಡುತ್ತಾ ಅಭಿವೃದ್ಧಿ ವಿಷಯದ ಬಗ್ಗೆ ಚರ್ಚೆಗೆ ಬರುತ್ತಿಲ್ಲ, 1950ರಲ್ಲಿ ಬೇಗೂರಿನಲ್ಲಿ ಸೇತುವೆ, ರಸ್ತೆ ಮಾಡಲಾಗಿದ್ದು ಇದೀಗ 72 ವರ್ಷದ ನಂತರ ಸಂಸದ ಡಿ.ಕೆ.ಸುರೇಶ್ ಮಾರ್ಗದರ್ಶನದಲ್ಲಿ ಆರುವರೆ ಕೋಟಿ ವೆಚ್ಚದಲ್ಲಿ ಸೇತುವೆ, ಕಾಂಕ್ರಿಟ್ ರಸ್ತೆ ನಿರ್ಮಿಸಿದ್ದೇವೆ, ಜನರ ಅಭಿವೃದ್ಧಿ ಪರ ಚಿಂತನೆ ಮಾಡಬೇಕು, ತಾಲೂಕಿನಲ್ಲಿ ಇನ್ನು ನೀರಾವರಿ, ಗ್ರಾಮಾಂತರ ಪ್ರದೇಶದ ಸಮಗ್ರ ಮೂಲಭೂತ ವ್ಯವಸ್ಥೆ ಕಲ್ಪಿಸುವ ಬಹಳಷ್ಟು ಕೆಲಸ ಮಾಡಬೇಕಿದೆ, ಅಭಿವೃದ್ಧಿಗಾಗಿ ಮತ್ತೊಮ್ಮೆ ತಮ್ಮ ಕೈ ಬಲಪಡಿಸಬೇಕೆಂದು ಮನವಿ ಮಾಡಿದರು.
ಗ್ರಾಪಂ ಅಧ್ಯಕ್ಷೆ ನಯನ ಮುರುಳಿ ಮೋಹನ್, ಸದಸ್ಯ ನಾಗಾನಂದ್, ಪುರಸಭೆ ಅಧ್ಯಕ್ಷ ರಂಗಸ್ವಾಮಿ, ಉಪಾಧ್ಯಕ್ಷೆ ಶಬನಾ ತಬಸ್ಸುಮ್, ಸ್ಥಾಯಿಸಮಿತಿ ಅಧ್ಯಕ್ಷ ಮಲ್ಲಿಪಾಳ್ಯಶ್ರೀನಿವಾಸ, ಪುರಸಭೆ ಸದಸ್ಯರು, ತಹಶೀಲ್ದಾರ್ ಮಹಾಬಲೇಶ್ವರ್, ಮುಖ್ಯಾಧಿಕಾರಿ ರಮೇಶ, ಬ್ಲಾಕ್ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ, ವೆಂಕಟರಾಮು, ಮುಖಂಡರಾದ ಬೇಗೂರು ನಾರಾಯಣ, ರಾಜಣ್ಣ, ಸದಾಖತ್, ರೆಹಮಾನ್ ಶರೀಫ್, ಏಜಾಸ್ ಇತರರು ಇದ್ದರು.

ರಾಜಿನಾಮೆ ಕೊಟ್ಟು ಕರೆ ಮಾಡು
ಕುಣಿಗಲ್ ಪುರಸಭೆಯಲ್ಲಿ ಅಧಿಕಾರ ಹಂಚಿಕೆ ಪ್ರಕಾರ ಹಾಲಿ ಪುರಸಭಾಧ್ಯಕ್ಷರು ರಾಜಿನಾಮೆ ನೀಡಬೇಕಿತ್ತು, ಆದರೆ ಸಮಯ ಕಳೆದರೂ ರಾಜಿನಾಮೆ ನೀಡದ ಕಾರಣ ಪುರಸಭೆ ಅಧಿಕಾರ ರೂಡ ಕಾಂಗ್ರೆೆಸ್ ಸದಸ್ಯರೆ ಸಂಸದರ, ಶಾಸಕರ ಗಮನಕ್ಕೆೆ ತಂದಿದ್ದರು.
ಶಾಸಕರು ಹಲವಾರು ಬಾರಿ ಸೂಚಿಸಿದ್ದರೂ ಪುರಸಭಾಧ್ಯಕ್ಷರು ತಲೆ ಕೆಡಿಸಿಕೊಂಡಿರಲಿಲ್ಲ, ಮಂಗಳವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಸಂಸದರು, ಪುರಸಭಾಧ್ಯಕ್ಷರಿಗೆ ಸೂಚನೆ ನೀಡಿದರಲ್ಲದೆ ರಾಜಕಾರಣ ಮಾಡುವುದು ಬೇಡ ಈ ವಿಷಯದಲ್ಲಿ ಎಂದು ಎಚ್ಚರಿಕೆ ಮಾತು

Get real time updates directly on you device, subscribe now.

Comments are closed.

error: Content is protected !!