ವಿದ್ಯಾರ್ಥಿನಿಯೊಂದಿಗೆ ಅಸಭ್ಯ ವರ್ತನೆ- ಉಪನ್ಯಾಸಕನಿಗೆ ಗೂಸ

164

Get real time updates directly on you device, subscribe now.


ಕುಣಿಗಲ್: ಅಸ್ವಸ್ಥಳಾಗಿದ್ದ ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಉಪನ್ಯಾಸಕನಿಗೆ ವಿದ್ಯಾರ್ಥಿಗಳೆ ಧರ್ಮದೇಟು ನೀಡಿದ ಘಟನೆ ಪಟ್ಟಣದ ಕುವೆಂಪು ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಮಂಗಳವಾರ ಸಂಜೆ ನಡೆದಿದೆ.
ಕಾಲೇಜಿನಲ್ಲಿ ಪಿಯು ವ್ಯಾಸಂಗ ಮಾಡುವ ವಿದ್ಯಾರ್ಥಿನಿ ಶನಿವಾರ ಭೋದನೆ ಸಮಯದಲ್ಲಿ ಕುಸಿದು ಬಿದ್ದಿದ್ದು, ಆಕೆಯನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಸಹಾಯಕ್ಕೆಂದು ಬಂದಿದ್ದ ಉಪನ್ಯಾಸಕ ಅನುಚಿತವಾಗಿ ವರ್ತಿಸಿದ್ದ ಎನ್ನಲಾಗಿದೆ, ಮಂಗಳವಾರ ಕಾಲೇಜಿನ ಸಹಪಾಠಿಗಳೊಂದಿಗೆ ವಿದ್ಯಾರ್ಥಿನಿ ತಾನು ಅನುಭವಿಸಿದ ನೋವನ್ನು ಹಂಚಿಕೊಂಡಿದ್ದು, ಈ ವಿಷಯ ತರಗತಿಯ ವಿದ್ಯಾರ್ಥಿಗಳ ಗಮನಕ್ಕೆ ಬಂದಿತು, ಇದನ್ನು ಪ್ರಶ್ನಿಸಲು ಹೋದ ವಿದ್ಯಾರ್ಥಿಗಳೊಂದಿಗೆ ಉಪನ್ಯಾಸಕ ಅಸಭ್ಯವಾಗಿ ನಡೆದುಕೊಂಡಿದ್ದರಿಂದ ಸಹನೆ ಕಳೆದುಕೊಂಡು ವಿದ್ಯಾರ್ಥಿಗಳು ಧರ್ಮದೇಟು ನೀಡಿದ್ದಾ. ಈ ವೇಳೆ ಗೊಂದಲದ ಸ್ಥಿತಿ ಉಂಟಾದ್ದರಿಂದ ಪೊಲೀಸರು ಮಧ್ಯ ಪ್ರವೇಶಿಸಿ ಪೋಲಿ ಉಪನ್ಯಾಸಕನನ್ನು ವಶಕ್ಕೆ ಪಡೆದು ಕರೆ ತಂದಿದ್ದು, ವಿದ್ಯಾರ್ಥಿನಿಯ ಭವಿಷ್ಯದ ದೃಷ್ಟಿಯಿಂದ ಪೋಷಕರು ದೂರು ನೀಡಲು ಹಿಂದೇಟು ಹಾಕಿದ್ದು, ಕಾಲೇಜಿನಿಂದ ಪೋಲಿ ಉಪನ್ಯಾಸಕನನ್ನು ವಜಾಗೊಳಿಸುವಂತೆ ಆಗ್ರಹಿಸಿದ ಹಿನ್ನೆಲೆಯಲ್ಲಿ ಪ್ರಾಚಾರ್ಯರು ಕಾಲೇಜಿನ ಆಡಳಿತ ಮಂಡಳಿಯವರೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರಿಂದ ಪರಿಸ್ಥಿ ತಿಳಿಗೊಂಡಿದ್ದು, ಪೊಲೀಸರು ಕಾಲೇಜಿನ ಸಿಬ್ಬಂದಿಯಿಂದ ವಿವರಣೆ ಪಡೆದುಕೊಂಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!