ವಿದ್ಯಾರ್ಥಿಗಳು ಸಾಹಿತ್ಯ ಕ್ಷೇತ್ರ ಪ್ರವೇಶಿಸಲಿ: ಶಿವಾರೆಡ್ಡಿ

70

Get real time updates directly on you device, subscribe now.


ತುಮಕೂರು: ಕನ್ನಡ ಸಾಹಿತ್ಯಕ್ಕೆ ಹವಾರು ವರ್ಷಗಳ ಇತಿಹಾಸವಿದೆ, ಅಂತಹ ಸಾಹಿತ್ಯವನ್ನು ಇಂದಿನ ಕಾಲದ ವಿದ್ಯಾರ್ಥಿಗಳು ಹೆಚ್ಚಿನದಾಗಿ ಓದಿ ಅರ್ಥೈಸಿಕೊಳ್ಳಬೇಕಿದೆ ಎಂದು ಪ್ರಾಧ್ಯಾಪಕ ಪ್ರೊ.ಕೆ.ಸಿ.ಶಿವಾರೆಡ್ಡಿ ಅಭಿಪ್ರಾಯಪಟ್ಟರು.
ತುಮಕೂರು ವಿಶ್ವ ವಿದ್ಯಾಲಯದ ಮಹಿಳಾ ಅಧ್ಯಯನ ಕೇಂದ್ರವು 67 ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಕುವೆಂಪು ಅವರ ಕಾದಂಬರಿಗಳು ಸ್ತ್ರೀ ಕಥನಗಳು ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡ ಸಾಹಿತ್ಯದಲ್ಲಿ ಯುವಕರನ್ನೇ ಕುರಿತು ಬರೆದಂತಹ ಕೃತಿಗಳು ಹೆಚ್ಚಾಗಿದ್ದು ವಿದ್ಯಾರ್ಥಿಗಳು ಅಂತಹ ವಿಚಾರಗಳನ್ನು ಸೂಕ್ಷ್ಮವಾಗಿ ಓದುವುದರ ಮೂಲಕ ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕಿದೆ, ಹೊಸ ವಿಚಾರಗಳನ್ನು ಓದುವುದರ ಮೂಲಕ ವ್ಯಕ್ತಿಗಳು ತಮ್ಮಲ್ಲಿ ತಾವೇ ವಿಕಾಸ ಹೊಂದುವುದರ ಮೂಲಕ ತಮ್ಮ ವ್ಯಕ್ತಿತ್ವ ರೂಢಿಸಿಕೊಳ್ಳುತ್ತಾರೆ ಎಂದರು.
ಕುವೆಂಪು ಅವರ ಕಾನೂರು ಹೆಗ್ಗಡತಿ ಹಾಗೂ ಮಲೆಗಳಲ್ಲಿ ಮದುಮಗಳು ಎಂಬ ಕಾದಂಬರಿಗಳಲ್ಲಿ ಮಲೆನಾಡಿನ ಸೊಬಗು, ಅಲ್ಲಿದ್ದಂತಹ ಜಾತಿ ಪದ್ಧತಿ, ಶೋಷಣೆ, ಕ್ರೂರತೆ, ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಹಾಗೂ ಪುರುಷ ಪ್ರಧಾನ ಸಮಾಜ ಮಹಿಳೆಯರನ್ನು ನೋಡುತ್ತಿರುವ ದೃಷ್ಟಿಕೋನ ಬಿಂಬಿತವಾಗಿದೆ ಎಂದರು.
ವಿದ್ಯಾರ್ಥಿಗಳು ಪೂರ್ವಗ್ರಹ ಪೀಡಿತರಾಗದೆ ಆಧುನಿಕ ದೃಷ್ಟಿಕೋನದಲ್ಲಿ ಸಾಹಿತ್ಯವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ವಿಶ್ಲೇಷಿಸಿದರು.
ವಿವಿಯ ಪರೀಕ್ಷಾಂಗ ಕುಲಸಚಿವ ಪ್ರೊ.ನಿರ್ಮಲ್ ರಾಜು ಮಾತನಾಡಿ, ತರಗತಿಗಳಲ್ಲಿ ಅಧ್ಯಾಪಕರಿಂದ ಸಿಗದೆ ಇರುವ ಹಲವಾರು ವಿಚಾರ ಇಂತಹ ಉಪನ್ಯಾಸಗಳಿಂದ ದೊರೆಯುತ್ತವೆ, ಸಾಹಿತ್ಯವು ತಮ್ಮ ನಿಜ ಜೀವನದ ಬದುಕನ್ನು ರೂಪಿಸುತ್ತದೆ, ಆದ್ದರಿಂದ ಯುವಕರು ಮೊಬೈಲ್, ಸಾಮಾಜಿಕ ಜಾಲತಾಣಗಳಿಗಿಂತ ಪುಸ್ತಕಗಳಿಗೆ ಹೆಚ್ಚಿನ ಸಮಯ ಮೀಸಲಿಡಬೇಕು ಎಂದರು.

Get real time updates directly on you device, subscribe now.

Comments are closed.

error: Content is protected !!