ಮನುಷ್ಯನ ಬೆಳವಣಿಗೆಗೆ ಗ್ರಂಥಾಲಯ ಸಹಕಾರಿ

74

Get real time updates directly on you device, subscribe now.


ಶಿರಾ: ಮನುಷ್ಯನ ಸರ್ವತೋಮುಖ ಬೆಳವಣಿಗೆಗೆ ಗ್ರಂಥಾಲಯಗಳು ಸಹಕಾರಿಯಾಗಿವೆ, ಗ್ರಂಥಾಲಯದಲ್ಲಿ ಪುಸ್ತಕ ಓದುವ ಅಭ್ಯಾಸ ರೂಢಿಸಿಕೊಂಡರೆ ಪ್ರತಿಯೊಬ್ಬರು ಉತ್ತಮ ಭವಿಷ್ಯ ರೂಪಿಕೊಳ್ಳಲು ಸಾಧ್ಯವಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ವೈ.ನರೇಶ್ ಬಾಬು ತಿಳಿಸಿದರು.
ನಗರದ ಶಾಖಾ ಗ್ರಂಥಾಲಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾನಾಡಿ, ಪ್ರಸ್ತುತ ಯುಗದಲ್ಲಿ ಯುವ ಜನತೆ ಹೆಚ್ಚು ಮೊಬೈಲ್ ಬಳಕೆಯ ಗುಂಗಿನಲ್ಲಿರುವುದರ ಬದಲಾಗಿ ಗ್ರಂಥಾಲಯಕ್ಕೆ ಬಂದು ತಮ್ಮ ಜ್ಞಾನ ವೃದ್ಧಿಪಡಿಸಿಕೊಳ್ಳಿ ಎಂದರು.
ಮಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮುಖ್ಯ ಶಿಕ್ಷಕ ರಾಮರಾಜ್ ಮಾತಾನಾಡಿ ಜ್ಞಾನದ ಹಸಿವು ಯಾವ ವ್ಯಕ್ತಿಳಿಗೆ ಇರುತ್ತದೆಯೋ ಅಂತಹ ವ್ಯಕ್ತಿಗಳು ಗ್ರಂಥಾಲಯದಲ್ಲಿನ ಪುಸ್ತಕಗಳ ಒಡನಾಟದಿಂದ ಜ್ಞಾನಿಗಳಾಗಿ, ವಿದ್ವಾಂಸರಾಗಿ, ಉತ್ತಮ ವಾಗ್ಮಿಳಾಗಿ ಹೊರ ಹೊಮ್ಮಬಹುದಾಗಿದೆ ಎಂದರು.
ಉಪನ್ಯಾಸಕ ಹೆಂದೊರೆ ಶಿವಣ್ಣ ಮಾತನಾಡಿ ಜನಗಳು ಪ್ರಚಲಿತ ಕಾಲದಲ್ಲಿ ಓದಿನ ಅಭಿರುಚಿ ಕಳೆದುಕೊಳ್ಳುತ್ತಿದ್ದಾರೆ ಎಂಬ ಆಪಾದನೆ ಕೇಳಿಬರುತ್ತಿದೆ, ಆದರೆ ಇಂದಿಗೂ ಕೂಡ ಆಸಕ್ತಿಿಯಿಂದ ಓದುವ ಓದುಗರು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಭ್ಯಸಿಸುವ ಸ್ಪರ್ಧಾರ್ಥಿಗಳು ಮತ್ತು ವಿದ್ಯಾರ್ಥಿಗಳು ಗ್ರಂಥಾಲಯದ ಸದುಪಯೋಗ ಪಡೆದು ಉತ್ತಮ ಬದುಕಿನ ಜೊತೆಗೆ ವ್ಯಕ್ತಿತ್ವ ತಮ್ಮದಾಗಿಸಿಕೊಳ್ಳುವಲ್ಲಿ ಬಹಳಷ್ಟು ಮಂದಿ ಸಫಲರಾಗಿದ್ದಾರೆ, ಹಾಗಾಗಿ ಸಧೃಢ ಸಮಾಜ ನಿರ್ಮಾಣ ಕಾರ್ಯದಲ್ಲಿ ಗ್ರಂಥಾಲಯಗಳ ಪಾತ್ರಮಹತ್ವದ್ದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ನಡೆಸಿದ ಜನಪದಗೀತೆ, ಭಾವಗೀತೆ, ಥಟ್ ಅಂತ ಹೇಳಿಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಶಾಖಾ ಗ್ರಂಥಾಲಯದ ಪ್ರಭಾರ ಧಾರಕ ರಾಜಶೇಖರ್.ಕೆ. ಮತ್ತು ನವೋದಯ ಯುವ ವೇದಿಕೆ ಅಧ್ಯಕ್ಷ ಜಯರಾಮಕೃಷ್ಣ ಬಹುಮಾನ ವಿತರಿಸಿದರು. ಯುವ ಸಾಹಿತಿ ರಮೇಶ್, ಗ್ರಂಥಾಲಯದ ಸಿಬ್ಬಂದಿವರ್ಗ ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!