ಶಿವಕುಮಾರ ಶ್ರೀ ಜ್ಞಾನದ ಜ್ಯೋತಿ ಬೆಳಗಿಸಿದ್ದಾರೆ: ಸಿದ್ದಲಿಂಗ ಶ್ರೀ

90

Get real time updates directly on you device, subscribe now.


ಶಿರಾ: ಯಾರೊಬ್ಬರೂ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಳಕಳಿಯಿಂದ ಶಿವಕುಮಾರ ಸ್ವಾಮೀಜಿ ಅವರು ಅದನ್ನು ವ್ರತದಂತೆ ಪಾಲಿಸಿ ನಮ್ಮ ಮುಂದೆ ಬಹುದೊಡ್ಡ ಜವಾಬ್ದಾರಿ ನೀಡಿದ್ದಾರೆ ಎಂದು ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ತರೂರು ಗ್ರಾಮದ ಸಿದ್ದಗಂಗಾ ಗ್ರಾಮಾಂತರ ಪ್ರೌಶಾಲಾ ಆವರಣದಲ್ಲಿ ಕೆ.ಆರ್.ರುದ್ರೇಶ್ ನಿರ್ಮಿಸಿರುವ ಡಾ.ಶಿವಕುಮಾರ ಸ್ವಾಮೀಜಿ ಅವರ ವಿಗ್ರಹ ಮೂರ್ತಿ ಲೋಕಾರ್ಪಣೆಗೊಳಿಸಿ ಮಾತನಾಡಿ, ಅನ್ನ, ಅಕ್ಷರ, ಆಶ್ರಯ ಎಂಬ ತ್ರಿವಿಧ ದಾಸೋಹದ ಮೂಲಕ ಇಡೀ ಜಗತ್ತಿಗೆ ಜ್ಞಾನದ ಜ್ಯೋತಿ ಬೆಳಗಿಸಿ ಅದು ಸೂಸುವ ಕಿರಣದ ಮೂಲಕ ಶಿವಕುಮಾರ ಸ್ವಾಮೀಜಿ ಅವರು ನಮ್ಮೊಟ್ಟಿಗೆ ಇದ್ದು ಆಶೀರ್ವದಿಸುತ್ತಿದ್ದಾರೆ ಎಂದರು.
ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ ಶಿಕ್ಷಣ ದೊರೆಯುವ ಮುನ್ನ ಮಾನವ ಶಿಲೆ ಆಗಿರುತ್ತಾನೆ, ದೊರೆತ ನಂತರ ಶಿಲ್ಪಕಲೆಯಾಗಿ ಮಾರ್ಪಡುತ್ತಾನೆ, ಇದೇ ಶಿಕ್ಷಣಕ್ಕಿರುವ ಶಕ್ತಿ ಎಂದರು.
ಸಿದ್ದರಬೆಟ್ಟದ ಬಾಳೇ ಹೊನ್ನೂರು ಪೀಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಶಿವಕುಮಾರ ಸ್ವಾಮೀಜಿ ಅವರು ಬದುಕಿದ ಕಾಲಘಟ್ಟದಲ್ಲಿ ನಾವು ಅವರು ತೋರಿದ ಹಾದಿಯಲ್ಲಿ ಬಾಳುತ್ತಿರುವುದು ನಮ್ಮಗಳ ಅದೃಷ್ಟ ಎಂದರು.
ಕಾರದ ಮಠದ ಶಿವಯೋಗಿ ಸ್ವಾಮೀಜಿ, ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ ಮಾತನಾಡಿದರು. ಎಸ್ಎಸ್ಎಲ್ಸಿ ಯಲ್ಲಿ ಅತಿಹೆಚ್ಚು ಅಂಕ ಪಡೆದ ಹಾಗೂ ಬಡ ವಿದ್ಯಾರ್ಥಿಗಳಿಗೆ ಕೆ.ಆರ್.ರುದ್ರೇಶ್ ಅವರು ವಿದ್ಯಾರ್ಥಿ ವೇತನ ನೀಡಿದರು. ತರೂರು ಗ್ರಾಪಂ ಅಧ್ಯಕ್ಷೆ ಲತಾದೇವಿ, ಮಾಜಿ ಜಿಪಂ ಉಪಾಧ್ಯಕ್ಷ ಮುದಿಮಡು ರಂಗಸ್ವಾಮಿ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಆರ್.ಉಗ್ರೇಶ್, ಬಿಜೆಪಿ ಗ್ರಾಮಾಂತರ ಅಧ್ಯಕ್ಷ ರಂಗಸ್ವಾಮಿ, ಮಾಜಿ ಜಿಪಂ ಸದಸ್ಯರಾದ ಪರ್ವತಪ್ಪ, ಬೊಮ್ಮಣ್ಣ, ಮುಖಂಡರಾದ ಮುದಿಮಡು ಮಂಜುನಾಥ್, ತರೂರು ಬಸವರಾಜ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವೀರಭದ್ರಯ್ಯ, ಉದಯಶಂಕರ್, ತಾಪಂ ಇಓ ಅನಂತರಾಜ್, ಬಿಇಓ ಶಂಕರಪ್ಪ, ಗ್ರಾಪಂ ಸದಸ್ಯರಾದ ಮಮತ, ನಾಗಮ್ಮ, ಪುಷ್ಪಲಕ್ಷ್ಮೀ, ತಿಪ್ಪೇಶ್, ಗಂಗಣ್ಣ, ನಾಗರಾಜ್, ಸತೀಶ್, ಗೀತಾ, ಎಸ್ಡಿಎಂಸಿ ಅಧ್ಯಕ್ಷ ನಾಗರಾಜ್, ಸುರೇಶ್ ಬಾಬು, ಪ್ರವೀಣ್ ಬಾಬು, ಮಹೇಶ್, ರಂಗನಾಥ್ ಯಾದವ್, ಪ್ರಮೀಳಾ ರಾಜಶೇಖರ್, ನಾಗರತ್ನಮ್ಮ, ಗಂಜಲಗುಂಟೆ ರಾಮಚಂದ್ರಪ್ಪ, ಸದಾನಂದಗೌಡ ಇತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!