ಪುನರಾವರ್ತಿತ ಪ್ರಮಾದ : ಸುಮಾರು ೧೮ ವರ್ಷಗಳ ಹಿಂದೆ ಈ ಕರೋನವನ್ನೇ ಹೋಲುವ ವೈರಾಣುವೊಂದು ಚೀನಾದಲ್ಲಿ ಧಾಗುಂಡಿ ಇಟ್ಟಿತ್ತು. SARS ಎಂಬ ಹೆಸರಿನ ವೈರಾಣು ಮನುಷ್ಯನನ್ನು ತೀವ್ರ ಉಸಿರಾಟದ ತೊಂದರೆಗೆ ಈಡು ಮಾಡುತ್ತದೆ ಮತ್ತು ಇದು ಜೊನೆತಿಕ್ ಮೂಲದ ಖಾಯಿಲೆ ಎಂದು ಗುರುತಿಸಲ್ಪಟ್ಟಿತು. ತೀವ್ರ ಉಸಿರಾಟದ ಸಿಂಡ್ರೋಮ್ (SARS- Severe acute respiratory syndrome) ಪ್ರಭೇದದ ಮುಂದುವರೆದ ಭಾಗವೇ ಈ ಕರೋನ ಎಂಬುದು ವಿಶ್ವ ವೈದ್ಯಕೀಯ ಸಮೂಹದ ಅನಿಸಿಕೆ.
೨೦೧೯ರ ಕಡೆ ಭಾಗದಲ್ಲಿ ತನ್ನ ದೇಶದ ಕೆಲ ನಾಗರಿಕರು ತೀವ್ರ ಉಸಿರಾಟದ ತೊಂದರೆಯಿಂದ ಸಾವಿಗೀಡಾದಾಗ ಎಚ್ಚೆತ್ತುಕೊಂಡ ಚಿನಾ ಸರ್ಕಾರ ಸಮಸ್ಯೆಯ ಮೂಲ ಹುಡುಕಲು ಆರಂಭಿಸಿತು. ಆಗ ಬಯಲಿಗೆ ಬಂದಿದ್ದೇ ಈ ಕರೋನ ಅಥವಾ COVID-19. ಗುಹೆಗಳಲ್ಲಿ ವಾಸಿಸುವ ಬಾವಲಿಗಳಲ್ಲಿ ಕಂಡುಬರುವ ಈ ವೈರಾಣು ವುಹಾನ್ ಪ್ರಾಂತ್ಯದ “ತೇವ ಮಾರುಕಟ್ಟೆ” (WET MARKET) ಮೂಲಕ ಹರಡಲು ಪ್ರಾರಂಭವಾಯಿತು ಎಂದು ತಿಳಿದು ಬಂತು. ಇಲ್ಲಿ ಒಂದು ನಿರ್ಧಿಷ್ಟ ಕಾರಣಕ್ಕಾಗಿ “ವೆಟ್ ಮಾರ್ಕೆಟ್” ಪದವನ್ನು ದಪ್ಪವಾಗಿ ಉಲ್ಲೇಖಿಸಿದ್ದೇನೆ.
ಏನಿದು “ವೆಟ್ ಮಾರ್ಕೆಟ್ ” ?
ತೇವ ಮಾರುಕಟ್ಟೆ, ಒದ್ದೆ ಮಾರುಕಟ್ಟೆ (ಕೆಲವೊಮ್ಮೆ ಇದನ್ನು “ವನ್ಯಜೀವಿ ಮಾರುಕಟ್ಟೆ” ಎಂದು ಕರೆಯಲಾಗುತ್ತದೆ) ಎಂಬುದು ವುಹಾನ್ನ ಅತಿ ದೊಡ್ಡ ಮಾಂಸ ಮಾರಾಟ ಪೇಟೆ. ಇಲ್ಲಿ ಮೀನು, ಪಕ್ಷಿಗಳು, ಬ್ಯಾಜರ್‌ಗಳು, ಬಾವಲಿಗಳು, ಪ್ಯಾಂಗೊಲಿನ್ಗಳು, ಹಾವುಗಳು, ಆಮೆಗಳು ಸೇರಿದಂತೆ ಅನೇಕ ಪ್ರಭೇದದ ಜೀವಂತ ಮತ್ತು ಸತ್ತ ಪ್ರಾಣಿಗಳನ್ನು ಮಾರಾಟ ಮಾಡಲಾಗುತ್ತದೆ. ತಜ್ಞರ ಪ್ರಕಾರ ಹಾಗೆ ಮಾರಟವಾದ ಪ್ರಾಣಿಗಳ ಮಾಂಸ ಸೇವನೆಯಿಂದ ಕರೋನ ವೈರಾಣು ಮಾನವ ದೇಹಕ್ಕೆ ವರ್ಗವಾಗಿದೆ.
ಕಂಗಾಲಾಗುವ ವಿಷಯವೇನೆಂದರೆ ಚೀನಾ ದೇಶದಲ್ಲಿ ಹುಟ್ಟುವ ಅನೇಕ ವೈರಾಣುಗಳು ಅಸಹಜ ‘ಮಾನವ – ಪ್ರಾಣಿ’ ಸಂಪರ್ಕದಿಂದಲೇ ಉದ್ಭವವಾಗಿವೆ. ಅಮೇರಿಕ ಮತ್ತು ವಿಶ್ವದ ಅನೇಕ ಉನ್ನತ ಸಾಂಕ್ರಾಮಿಕ ತಜ್ಞರುಗಳು, ಕಾನೂನು ರೂಪಿಸುವರು, ವಿಶ್ವ ಆರೋಗ್ಯ ಸಂಸ್ಥೆ ಮತ್ತಿತರರು ‘ನೈರ್ಮಲ್ಯವಿಲ್ಲದ ಕಟ್ಟುವಿಕೆ ಮತ್ತು ತೆರೆದ ಗಾಳಿಯ ಪರಿಸರದಲ್ಲಿ’ ಮಾರಾಟ ಮಾಡುವ ವೆಟ್ ಮಾರ್ಕೆಟ್ ಗಳನ್ನು ಮುಚ್ಚಿಬಿಡಿ ಎಂದು ಎಷ್ಟೇ ಮನವಿ ಮಾಡಿದರೂ ಬೀಜಿಂಗ್ ಸರ್ಕಾರ ಅದಕ್ಕೆ ಕಿವಿಗೊಡಲಿಲ್ಲ. ‘ತೇವ ಮಾರುಕಟ್ಟೆಗಳು’ ಉಂಟುಮಾಡುವ ಅಪಾಯಗಳು ತುಂಬಾ ಇವೆ ಎಂಬ ನಿರ್ವಿವಾದವಾದ ಅರಿವಿದ್ದರೂ ಚೀನಾ ಸರ್ಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ. SARS ಒಕ್ಕರಿಸಿದ ಪ್ರಾರಂಭದಲ್ಲಿ ವಿಶ್ವ ಒತ್ತಡಕ್ಕೆ ಮಣಿದು ಕೆಲ ತಿಂಗಳು ಮುಚ್ಚಿದ್ದು ಬಿಟ್ಟರೆ ಚೀನಾ ಈ ಮಾರುಕಟ್ಟೆಯಿಂದಾಗುವ ಅನಾಹುತಗಳ ಬಗ್ಗೆ ತಲೆ ಕೆಡಿಸಿಕೊಳ್ಳಲೇ ಇಲ್ಲ. ಕಾರಣ ಸಿಂಪಲ್ ಅದು ದುಡ್ಡು. ೨೦೧೭ರ ಚೀನಾದ ಸರ್ಕಾರಿ ವರದಿಯ ಪ್ರಕಾರ ವಿಲಕ್ಷಣ ಜೀವಿಗಳ ಮಾರಾಟದಿಂದಾಗುತ್ತಿದ್ದ ಒಟ್ಟು ವಹಿವಾಟು ೨೩ ಬಿಲಿಯನ್ ಡಾಲರ್ ಗೂ ಹೆಚ್ಚು. ಅಳಿವಿನಂಚಿನಲ್ಲಿರುವ ಅನೇಕ ಪ್ರಾಣಿ ಪ್ರಭೇಧ ಗಳ ಮಾರಾಟವನ್ನು ತಡೆಹಿಡಿಯ ಬೇಕೆಂದು ಪ್ರಾಣಿ ಪ್ರಿಯಯರು ಒತ್ತಾಯಿಸಿದಾಗ ಸಿವೆಟ್ ಬೆಕ್ಕುಗಳು ಮತ್ತು ಕೆಲವು ಹಾವುಗಳ ಮಾರಾಟದ ಮೇಲೆ ನಿಷೇಧ ಹೆರುವ ನಾಟಕವನ್ನು ಚೀನಾ ಸರ್ಕಾರ ಮಾಡಿತು. ಆದರೆ ಈ ನಿಷೆದವೂ ಕೂಡ ಒಂದು ಕಣ್ಣೊರೆಸುವ ತಂತ್ರವಾಗಿತ್ತಷ್ಟೇ. ಏಕೆಂದರೆ ನಿಷೆದಿಸಲ್ಪಟ್ಟ ಎಲ್ಲ ಪ್ರಾಣಿಗಳ ಮಾರಾಟವು ವೆಟ್ ಮಾರ್ಕೆಟ್ ನಲ್ಲಿ ಖುಲ್ಲಂ ಖುಲ್ಲ. ಅನೇಕ ತಜ್ಞರ ಪ್ರಕಾರ ಮುಂಬರುವ ಸಾಂಕ್ರಮಿಕಗಳನ್ನು ತಡೆಯಬೇಕೆಂದರೆ ಅಕ್ರಮ ಪ್ರಾಣಿಗಳ ವ್ಯಾಪಾರ ಮತ್ತು ಸೇವನೆಯನ್ನು ಕೊನೆಗೊಳಿಸಲೇ ಬೇಕು. ವಿಶೇಷವಾಗಿ ಅಳಿವಿನಂಚಿನಲ್ಲಿರುವ ವಿಲಕ್ಷಣ ವನ್ಯಜಿವಿಗಳನ್ನು ಅಹಾರಕ್ಕಾಗಿ ಬಳಸುವುದನ್ನು ಸ್ಥಳೀಯ ಮಟ್ಟದಲ್ಲಿ ಉತ್ತಮ ನಿಯಂತ್ರಣ ಮತ್ತು ಕಠಿಣ ಕಾನೂನು ಜಾರಿ ಮೂಲಕ ತಡೆಗಟ್ಟದಿದ್ದಲಿ ಮಾನವ ಸಂಕುಲಕ್ಕೆ ಉಳಿಗಾಲವಿಲ್ಲ.
ಕಾಕತಾಳೀಯವೇನೋ ಎಂಬಂತೆ COVID 19 ಪ್ರತ್ಯಕ್ಷ್ಯವಾಗುವ ಅನೇಕ ತಿಂಗಳುಗಳ ಮೊದಲೇ ಮೈಕ್ರೋ ಸಾಫ್ಟ್ ನ ಸಂಸ್ಥಾಪಕ ಬಿಲ್ ಗೆಟ್ ವೈರಾಣುಗಳ ಹರಡುವಿಕೆ ಮತ್ತು ಅದರಲ್ಲಿ ವೆಟ್ ಮಾರ್ಕೆಟ್ ಗಳ ಪಾತ್ರವನ್ನು ವಿವರಿಸಿದ್ದ. ನೆಟ್ ಫ್ಲಿಕ್ಷ್ ನ ಸರಣಿಯೊಂದರಲ್ಲಿ ವೈರಾಣುಗಳು ಮತ್ತದರ ಹರಡುವಿಕೆ, ಚಿಕಿತ್ಸೆ ಮತ್ತು ಮದ್ದುಗಳ ಬಗ್ಗೆ ವಿವರವಾಗಿ ವರ್ಣಿಸಿದ್ದ. ಬಿಲ್ ಗೇಟ್ ಪ್ರಕಾರ ಈ ಹಂತದ ವೈರಾಣುಗಳಿಗೆ ಮದ್ದರೆಯಲು ವರ್ಷಗಳೇ ಬೇಕಾಗುತ್ತದೆ.
ಮುಂದುವರೆದು TED TALK show ನಲ್ಲಿ ಬಿಲ್ ಗೇಟ್ಸ್ ಮಾತನಾಡುತ್ತಾ “ಮುಂದೆ ಮಿಲಿಯಾಂತರ ಜನರು ಸಾಯುವುದು ಯಾವುದೇ ಕ್ಷಿಪಣಿ ಅಥವಾ ಅಟಂ ಬಾಂಬು ಗಳಿಂದಲ್ಲ ಮಿಗಿಲಾಗಿ ಕಣ್ಣಿಗೆ ಕಾಣದ ವೈರಾಣುಗಳಿಂದ ಮತ್ತು ನಾವಿಂದು ಬಿಲಿಯನ್ ಗಟ್ಟಲೆ ಹಣವನ್ನು ಪರಮಾಣು ನಿರೋಧಕಗಳು, ಅಂತರಿಕ್ಷ ಶಸ್ತ್ರಾಸ್ತ್ರಗಳ ಸಂಶೋಧನೆಗಳಿಗಾಗಿ ಹೂಡಿಕೆ ಮಾಡಿದ್ದೇವೆ, ಆದರೆ ಅತಿ ಮಾರಣಾಂತಿಕ ವಾಗಬಹುದಾದ ಸಾಂಕ್ರಾಮಿಕಗಳನ್ನು ತಡೆಗಟ್ಟಲು ನಾವು ಯಾವುದೇ ಪ್ರಯತ್ನವನ್ನು ಪಡುತ್ತಿಲ್ಲ” ಎಂದು ಉಲ್ಲೇಖಿಸಿದ್ದಾನೆ.
ಕೋವಿಡ್ -19 ಅನ್ನು ಸಂಕ್ರಾಮಿಕ ಪಿಡುಗು ಎಂದು ಘೋಷಿಸುವಲ್ಲಿ ವಿಳಂಬ ಏಕಾಯಿತು?
ಮೊದಲ ರೋಗಿ ಪತ್ತೆಯಾದ ನಾಲ್ಕು ತಿಂಗಳ ನಂತರ ಮಾರ್ಚ್ 11, 2020ರಂದು ಕೋವಿಡ್ -19 ಒಂದು ಸಂಕ್ರಾಮಿಕ ಪಿಡುಗು ಎಂದು ವಿಶ್ವ ಸಂಸ್ಥೆ ಅಧಿಕೃತವಾಗಿ ಘೋಷಿಸಿತು. ವಿಶ್ವ ಅರೋಗ್ಯ ಸಂಸ್ಥೆಯ ಮುಖ್ಯಸ್ಥ ತೆದೂರ್ಸ್ ಅಧನೋಮ್ ನ ವಿಳಂಬ ನೀತಿಯ ಬಗ್ಗೆ ಅನೇಕ ಅನುಮಾನಗಳಿವೆ. ವಿಶ್ವದ ದೊಡ್ಡಣ್ಣ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದಿಯಾಗಿ ಅನೇಕ ಪ್ರಮುಖ ನಾಯಕರು Tedros Adhanom ನಡೆಯನ್ನು ಟೀಕಿಸಿದ್ದಾರೆ. ಈ ಅಪಸವ್ಯಕ್ಕೆ ಚೀನಾ ದೇಶವನ್ನು ಹೊಣೆಗಾರನನ್ನಾಗಿ ಮಾಡದಿದ್ದಕ್ಕೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ವಿಶ್ವ ಅರೋಗ್ಯ ಸಂಸ್ಥೆಯ ಮೊದಲ ಆಫ್ರಿಕಾ ಮೂಲದ ಮುಖ್ಯಸ್ಥನಾದ Tedros Adhanom ಚೀನಾ ದೇಶದ ಆಮಿಷಕ್ಕೆನಾದರು ಬಲಿಯಾದರಾ ಎಂಬ ಅನುಮಾನ ಅನೇಕರನ್ನು ಕಾಡುತ್ತಿದೆ. ಏಕೆಂದರೆ ತನ್ನ ದೇಶದ ಅಷ್ಟೊಂದು ಮಂದಿ COVID-19 ಗೆ ಬಲಿಯಾಗುತ್ತಿದ್ದರೂ ಚೀನಾ ಸರ್ಕಾರ ತನ್ನ ಆರ್ಥಿಕತೆ ಮತ್ತು ವ್ಯಾಪಾರ ವಹಿವಾಟುಗಳೇ ಮುಖ್ಯವೆಂಬಂತೆ ವರ್ತಿಸಿತ್ತು.
ಕಾಣದ ಕರೋನಾಗೆ ಈಗಾಗಲೇ ಹತ್ತಿರ ಹತ್ತಿರ ಒಂದೂ ವರೆ ಲಕ್ಷ ಮಂದಿ ಬಲಿಯಾಗಿದ್ದಾರೆ. 20 ಲಕ್ಷಕ್ಕೂ ಹೆಚ್ಚು ಮಂದಿ ಸೊಂಕಿತರಾಗಿದ್ದರೆ. ಚೀನಾ ಮಾಡಿದ ಅದೊಂದು ತಪ್ಪಿನಿಂದ ವಿಶ್ವ ದಲ್ಲಿ ಹಿಂದೆಂದೂ ಕಂಡು ಕೇಳರಿಯದಂತ ಆರ್ಥಿಕ ಮಹಾ ಕುಸಿತ ಆರಂಭವಾಗಿದೆ. ವಿಶ್ವ ಆರ್ಥಿಕ ಸಂಸ್ಥೆ ಐ.ಎಂ.ಎಫ್. ಪ್ರಕಾರ ಈ ಅರ್ಥಿಕ ಮಹಾಕುಸಿತ ಪ್ರಪಂಚದ ಎಲ್ಲಾ ಜನರಿಗೆ ಅತ್ಯಂತ ಅನಾನುಕುಲ ಮತ್ತು ವಿನಾಶಕಾರಿ ಭವಿಷ್ಯವನ್ನು ತಂದೊಡ್ಡಲಿದೆ.
ಚೀನಾ ದೇಶದ ಸಮಯ ಸಾಧಕತನ ಮತ್ತು ಸ್ವಾರ್ಥ ಚಿಂತನೆಯ ಮನಸ್ಥಿತಿಯನ್ನು ಅರಿತ ಅನೇಕ ದೇಶಗಳು ಚಿನಾದೊಂದಿಗೆ ವ್ಯಾಪಾರಿ ಸಂಭಂದಗಳನ್ನು ತುಂಡರಿಸುವ ಬಗ್ಗೆ ಯೋಚಿಸುತ್ತಿದೆ. ಜಪಾನ್ ಸೇರಿದಂತೆ ಅನೇಕ ಐರೋಪ್ಯ ರಾಷ್ಟಗಳು ಈಗಾಗಲೇ ಚಿನಾದಲ್ಲಿನ ತಮ್ಮ ಹುಡಿಕೆಗಳನ್ನು ವಾಪಸ್ ಪಡೆಯುತ್ತಿದೆ ಮತ್ತು ಉದ್ಯಮಗಳನ್ನು ಸ್ಥಳಾಂತರ ಮಾಡುತ್ತಿವೆ. ಭಾರತವು ವಿಶ್ವ ಗುರುವಾಗಲು ಇದೊಂದು ಸುವರ್ಣಾವಕಾಶ. ನಾವು ನೀವು ಮಾಡಬೇಕಾಗಿದ್ದಿಷ್ಟೇ, ಮನೆಯಲ್ಲಿರೋಣ – ಕರೋನ ತೊಲಗಿಸೋಣ. ಲಾಕ್ ಡೌನ್ ನಂತರ ಚೀನಾ ಉತ್ಪನ್ನಗಳನ್ನು ಬಹಿಸ್ಕರಿಸೋಣ.
ನೀವೇನಂತೀರಿ?…
ಅನುವಾದ : ಭಾರತಿಶ್ ಹೊನ್ನಾಳಿ
Comments are closed.