ನಿಟ್ಟೂರು ಬೆಸ್ಕಾಂ ಕಚೇರಿಗೆ ಗುತ್ತಿಗೆದಾರರಿಂದ ಬೀಗ

ಅಧಿಕಾರಿಗಳನ್ನು ಕೂಡಿ ಹಾಕಿ ಪ್ರತಿಭಟನೆ

161

Get real time updates directly on you device, subscribe now.


ಗುಬ್ಬಿ: ತಾಲ್ಲೂಕಿನ ನಿಟ್ಟೂರು ಬೆಸ್ಕಾಂ ಕಚೇರಿಗೆ ವಿದ್ಯುತ್ ಗುತ್ತಿಗೆದಾರರು ಬೀಗ ಜಡಿದು ಅಧಿಕಾರಿಗಳನ್ನು ಕೂಡಿ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಬುಧವಾರ ನಡೆಯಿತು.
ನಿಟ್ಟೂರು ಎಇಇ ಅನಿಲ್ ಕುಮಾರ್ ಗುತ್ತಿಗೆದಾರರಿಂದ ಲಂಚ ಪಡೆದು ಅವರಿಗೆ ಬೇಕಾದವರಿಗೆ ಗುತ್ತಿಗೆ ನೀಡಿ ಅವರಿಂದ ಹಣ ಪಡೆಯುವಂತಹ ಕೆಲಸಕ್ಕೆ ಮುಂದಾಗಿದ್ದು ನಿಜವಾದ ಗುತ್ತಿಗೆದಾರರಿಗೆ ಅನ್ಯಾಯ ಮಾಡುತ್ತಿದ್ದಾರೆ, ಗುಬ್ಬಿಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿಯೂ ಇಂತಹ ಕೆಲಸ ಮಾಡುವ ಮೂಲಕ ಸಾಕಷ್ಟು ಪ್ರತಿಭಟನೆ ಎದುರಿಸಿದ್ದ ಅನಿಲ್ ಕುಮಾರ್, ನಿಟ್ಟೂರಿಗೆ ವರ್ಗಾವಣೆಯಾಗಿ ಬಂದು ಕೆಲವೇ ದಿನಗಳಲ್ಲಿ ಮತ್ತೆ ಲಂಚಾವತಾರ ಶುರು ಮಾಡಿದ್ದಾರೆ. ಇವರನ್ನು ಈ ಜಿಲ್ಲೆಯಿಂದಲೇ ವರ್ಗಾವಣೆ ಮಾಡಿದಾಗ ಮಾತ್ರ ಕಲ್ಪತರು ನಾಡಿನ ರೈತರು ಖುಷಿಯಾಗಿ ಬದುಕಲು ಸಾಧ್ಯವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ಅಲ್ಲದೆ ಇಲ್ಲಿಗೆ ಬರುವ ಆರ್ಥಿಕ ಬಡವರಿಗೆ ಕ್ರಿಶ್ಚಿಯನ್ ಧರ್ಮಕ್ಕೆ ತಾವು ಸೇರ್ಪಡೆಯಾದರೆ 5 ಲಕ್ಷ ಹಣ ಹಾಗೂ ಭೂಮಿ ನೀಡುತ್ತೇವೆ ಎಂದು ಹೇಳುವ ಮೂಲಕ ನಮ್ಮ ಧರ್ಮವನ್ನೇ ಬದಲಾವಣೆ ಮಾಡುವ ಹುನ್ನಾರವನ್ನು ಎಇಇ ಅನಿಲ್ ಕುಮಾರ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ತಾಲೂಕು ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ನಂಜೇಗೌಡ ಮಾತನಾಡಿ, ಈ ಅಧಿಕಾರಿಯಿಂದ ನಮ್ಮ ವಿದ್ಯುತ್ ಗುತ್ತಿಗೆದಾರರು ಸಾಕಷ್ಟು ನೋವು ಅನುಭವಿಸುತ್ತಿದ್ದಾರೆ, ಇಲ್ಲಸಲ್ಲದ ಸುಳ್ಳುಗಳನ್ನು ಮೇಲಧಿಕಾರಿಗಳಿಗೆ ಹೇಳಿ ನಮಗೆ ಯಾವುದೇ ರೀತಿಯ ಕೆಲಸ ಸಿಗದಂತೆ ಮಾಡುವ ಕೆಲಸಕ್ಕೂ ಮುಂದಾಗಿದ್ದಾರೆ ಎಂದು ಕಿಡಿಕಾರಿದರು.
ಗುತ್ತಿಗೆದಾರ ಲೋಕೇಶ್ ಮಾತನಾಡಿ ಗ್ರಾಹಕರು ಹಲವು ವಿದ್ಯುತ್ ಸಂಬಂಧ ಪಟ್ಟಹಾಗೆ ಕೆಲಸಕ್ಕೆ ಬಂದಾಗ ಅವರಿಗೆ ಒಂದು ದರ ನಿಗದಿಪಡಿಸಿ ನಮಗೆ ಒಂದು ದರ ತಿಳಿಸುತ್ತಾರೆ, ಮತ್ತೆ ಅದೇ ಫೈಲ್ನ್ನು ಬಳಸಿಕೊಳ್ಳುವ ಅನಿಲ್ ಕುಮಾರ್ ಅವರಿಗೆ ಬೇಕಾದ ಗುತ್ತಿಗೆದಾರನಿಗೆ ಆ ಫೈಲನ್ನು ನೀಡಿ ಕಡಿಮೆ ಬೆಲೆಗೆ ಮಾಡಿಸಿ ನಮ್ಮ ಕೆಲಸ ಕಿತ್ತು ಕೊಂಡು ಇವರು ದುಡ್ಡು ಹೊಡೆಯುವ ಸಂಚು ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ವಿದ್ಯುತ್ ಗುತ್ತಿಗೆ ದಾರರದ ಶಶಿಕುಮಾರ್, ಚಂದನ್, ರಂಗನಾಥ್, ಪ್ರದೀಪ್, ಪಂಚಾಕ್ಷರಿ, ಝಬಿ, ಹೇಮಣ್ಣ, ಜಗದೀಶ್ ತಿಪ್ಪೂರು ಇನ್ನಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!