30ಕ್ಕೂ ಹೆಚ್ಚು ಮೇಕೆ ಸಾವು

275

Get real time updates directly on you device, subscribe now.


ಕುಣಿಗಲ್: ತಾಲೂಕಿನ ಹುತ್ರಿದುರ್ಗ ಹೋಬಳಿಯ ಇಪ್ಪಾಡಿ ಗ್ರಾಮದ ಶಿವಣ್ಣ ಎಂಬವರಿಗೆ ಸೇರಿದ ಸುಮಾರು 30ಕ್ಕೂ ಹೆಚ್ಚು ಮೇಕೆಗಳು ವಿಲವಿಲ ಒದ್ದಾಡಿ, ಪ್ರಾಣ ಬಿಡುತ್ತಿದ್ದು, ಘಟನೆಯಿಂದ ಗಾಬರಿಗೊಂಡ ಶಿವಣ್ಣ ಹಾಗೂ ಗ್ರಾಮಸ್ಥರು, ಪಶು ವೈದ್ಯಾಧಿಕಾರಿಗಳಿಗೆ ಕರೆ ಮಾಡಿದರೂ, ಸಂಬಂಧಪಟ್ಟ ಇಲಾಖೆಯವರು ತಡವಾಗಿ ಆಗಮಿಸಿದ ಕಾರಣ ಮತ್ತಷ್ಟು ಮೇಕೆಗಳು ಪ್ರಾಣ ಕಳೆದುಕೊಂಡಿದೆ.
ಘಟನೆಗೆ ಆಹಾರದಲ್ಲಿ ವಿಷ ಬೆರೆತಿದೆ ಎಂದು ಮೇಲ್ನೋಟಕ್ಕೆ ಹೇಳಲಾಗುತ್ತಿದ್ದರೂ ಸಕಾಲದಲ್ಲಿ ಪಶು ವೈದ್ಯರು ಆಗಮಿಸಿದ್ದಲ್ಲಿ ಮೇಕೆಗಳ ಪ್ರಾಣ ಹಾನಿ ತಪ್ಪಿಸಬಹುದಿತ್ತು ಎಂದು ಗ್ರಾಮಸ್ಥರು ಹೇಳಿದ್ದಾರೆ, ಘಟನೆಗೆ ಸಂಬಂಧಿಸಿದಂತೆ ಮುಖಂಡ ದೇವರಾಜು ಮಾತನಾಡಿ ಇಪ್ಪಾಡಿ ಗ್ರಾಮ ಬಹುದೊಡ್ಡ ಗ್ರಾಮವಾಗಿದ್ದು ಇಲ್ಲಿ ಸಾಕಷ್ಟು ಜಾನುವಾರುಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕಾರಣ ಪಶು ವೈದ್ಯರ ನಿಯೋಜನೆ ಅತ್ಯಗತ್ಯವಾಗಿದೆ. ಆದರೆ ಈ ನಿಟ್ಟಿನಲ್ಲಿ ಶಾಸಕರು ಸೇರಿದಂತೆ ಯಾರೊಬ್ಬರೂ ಸಮರ್ಪಕ ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ಈ ಭಾಗದಲ್ಲಿ ಹಲವಾರು ರಾಸುಗಳು ಹಾಗೂ ಮೇಕೆ, ಕುರಿಗಳು ಮೃತಪಡುತ್ತಿವೆ. ಇನ್ನಾದರೂ ಸಂಬಂಧ ಪಟ್ಟವರು ಎಚ್ಚೆತ್ತು ಪಶು ವೈದ್ಯರ ನಿಯೋಜನೆಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!