ತುಮಕೂರು: ಶಾಸಕ ಗೌರಿಶಂಕರ್ ವಿರುದ್ಧ ಮತ್ತೆ ಹರಿಹಾಯ್ದು ನಾನು ಮಾತನಾಡಿದ್ದೇನೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಟ್ಟಿರುವ ಆಡಿಯೊ ರೆಕಾರ್ಡ್ ನಕಲಿ ರಾಜನ ಮತ್ತೊಂದು ನಕಲಿಯಾಗಿದೆ ಎಂದು ಮಾಜಿ ಶಾಸಕ ಬಿ.ಸುರೇಶಗೌಡ ಪರೋಕ್ಷವಾಗಿ ಶಾಸಕ ಗೌರಿಶಂಕರ್ ಅವರನ್ನು ಗೇಲಿ ಮಾಡಿದ್ದಾರೆ.
ನನ್ನ ದ್ವನಿಯನ್ನು ಮಿಮಿಕ್ರಿ ಮಾಡಿಸಿ ಆಡಿಯೊ ಹರಿಯ ಬಿಡಲಾಗಿದೆ. ಆ ಆಡಿಯೊಗೂ ನನಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಮಹಿಳೆಯರ ಬಗ್ಗೆ ನನಗೆ ಗೌರವವಿದೆ. ಮಹಿಳಾ ಮತದಾರರಿಗೆ ನನ್ನ ಬಗ್ಗೆ ವಿಶೇಷ ಪ್ರೀತಿ ಇದೆ. ಇದನ್ನು ಸಹಿಸದೇ ನನ್ನ ಹೆಸರು ಕೆಡಿಸಲು ಈ ಆಡಿಯೊ ಮಿಮಿಕ್ರಿ ಮಾಡಿಸಲಾಗಿದೆ. ಈ ಬಗ್ಗೆಯೂ ದೂರು ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಗೌರಿಶಂಕರ್ ವಿರುದ್ಧ ನಕಲಿ ಆಡಿಯೊ ಆರೋಪ
Get real time updates directly on you device, subscribe now.
Prev Post
Next Post
Comments are closed.