30 ರೈತರಿಗೆ ಸಾಗುವಳಿ ಚೀಟಿ ವಿತರಿಸಿದ ಪರಮೇಶ್ವರ್

187

Get real time updates directly on you device, subscribe now.


ಕೊರಟಗೆರೆ: ಗ್ರಾಮೀಣ ಪ್ರದೇಶದ 473 ಬಡ ಜನರಿಗೆ ಮಾಸಾಶನ ಮತ್ತು ರೈತರಿಗೆ ಸಾಗುವಳಿ ಚೀಟಿ ನೀಡಿದ್ದೇನೆ. ಸರಕಾರಿ ಗೋಮಾಳದ ಜಮೀನು ಕೊರಟಗೆರೆ ಕ್ಷೇತ್ರದ ರೈತರಿಗೆ ಮಾತ್ರ ಮೀಸಲು, ಬೆಂಗಳೂರಿನ ಉದ್ಯಮಿಗಳಿಗೆ ಕೊರಟಗೆರೆಯಲ್ಲಿ ಯಾವುದೇ ಕಾರಣಕ್ಕೂ ನೀಡುವುದಿಲ್ಲ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಖಡಕ್ ಎಚ್ಚರಿಕೆ ನೀಡಿದರು.
ಕೊರಟಗೆರೆ ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ಕಂದಾಯ ಇಲಾಖೆಯಿಂದ ಶುಕ್ರವಾರ ಏರ್ಪಡಿಸಲಾಗಿದ್ದ ಸಾಗುವಳಿ ಚೀಟಿ ಮತ್ತು ಮಾಸಾಶನ ಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 162 ಜನರಿಗೆ ಮಾಸಾಶನ, 30 ಜನರಿಗೆ ನೂತನವಾಗಿ ಸಾಗುವಳಿ ಚೀಟಿ, ಖಾತೆ, ಪಹಣಿ, 30 ಜನರಿಗೆ ಮುಟೇಶನ್ ಹಾಗೂ 121 ಜನರಿಗೆ ಹಳೆಯ ಖಾತೆ, ಪಹಣಿ, 130 ಜನರಿಗೆ ಮುಟೇಶನ್ ಪತ್ರ ವಿತರಣೆ ಮಾಡಿದ್ದೇನೆ, ಉಳಿದಂತಹ ಕೊರಟಗೆರೆ, ಮಧುಗಿರಿ ಮತ್ತು ತುಮಕೂರು ಗ್ರಾಮಾಂತರ ತಾಲೂಕಿನಲ್ಲಿನ ರೈತರಿಗೆ ತ್ವರಿತವಾಗಿ ಸಾಗುವಳಿ ಚೀಟಿ ನೀಡುತ್ತೇನೆ ಎಂದು ಹೇಳಿದರು.
ನಮ್ಮೂರಿನ ಕೃಷಿ ಜಮೀನು ಸೈಟ್ಗಳಾಗಿ ದಿನೇ ದಿನೆ ಕಾಣೆ ಆಗುತ್ತಿವೆ. ದೇಶದಲ್ಲಿ ಕೃಷಿಕರ ಸಂಖ್ಯೆಯು ಗಣನೀಯವಾಗಿ ಇಳಿಮುಖ ಆಗುತ್ತಿವೆ. ರೈತರಿಗೆ ಲಾಭದಾಯಕ ಆಗಿರುವ ಹೈನುಗಾರಿಕೆ ಮತ್ತು ರೇಷ್ಮೆ ಬೆಳೆಗೆ ಸರಕಾರ ಉತ್ತೇಜನ ನೀಡಬೇಕಿದೆ. ನೆಪ ಮಾತ್ರಕ್ಕೆ ಯೋಜನೆ ರೂಪಿಸದೆ ರೈತರ ಹಿತ ಕಾಯುವ ಕೆಲಸವನ್ನು ಸರಕಾರ ಮಾಡಬೇಕಿದೆ ಎಂದು ಒತ್ತಾಯ ಮಾಡಿದರು.
ರೇಷ್ಮೆ ಗೂಡು ಮಾರಿದ ತಕ್ಷಣವೇ ಮಾರುಕಟ್ಟೆಯಲ್ಲಿ ರೈತರಿಗೆ ಹಣ ನೀಡ್ತಾರೆ. ಅದೇ ಮಾದರಿಯಲ್ಲಿ ಕೃಷಿ ಬೆಳೆಗೆ ಬೆಂಬಲ ಬೆಲೆಯ ಜೊತೆ ತಕ್ಷಣ ವಹಿವಾಟಿನ ಹಣ ನೀಡ್ಬೇಕು. ಕಾಟಚಾರಕ್ಕೆ ಸರಕಾರ ಯೋಜನೆ ರೂಪಿಸದೆ ರೈತರಿಗೆ ಅನುಕೂಲ ಕಲ್ಪಿಸಬೇಕಿದೆ. ನಾನು 200 ಚೀಲ ರಾಗಿ ಮಾರಿದ್ದೇನೆ. ನನಗೆ 6 ತಿಂಗಳಾದ್ರು ಹಣವೇ ಬಂದಿಲ್ಲ. ಇದೇ ರೀತಿ ಆದ್ರೆ ರೈತರ ಪಾಡೇನು ಎಂದು ಶಾಸಕ ಡಾ.ಜಿ.ಪರಮೇಶ್ವರ್ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಭಾರತ ದೇಶದ ರೈತರ ರಕ್ಷಣೆ ಮತ್ತು ಹಸಿರು ಕ್ರಾಂತಿಗಾಗಿ ಪ್ರತಿ ರೈತನಿಗೆ 4 ಎಕರೆ 32 ಗುಂಟೆ ಜಮೀನು ಮಂಜೂರಿನ ಆದೇಶ ಮಾಡಿದೆ. ಜಮೀನು ಮಂಜೂರಿಗೆ ಶಾಸಕರ ಅಧ್ಯಕ್ಷತೆಯಲ್ಲಿ ಬಹುರ್ ಹುಕ್ಕುಂ ಕಮಿಟಿ ರಚನೆಯಾಗಿದೆ. ಕಾನೂನಿನ ಪ್ರಕಾರ 25 ವರ್ಷ ಜಮೀನು ಪರಬಾರೆ ಮಾಡುವಂತಿಲ್ಲ. ರೈತಾಪಿ ವರ್ಗ ಹೈನುಗಾರಿಕೆ ಮತ್ತು ರೇಷ್ಮೆ ಬೆಳೆಗೆ ಹೆಚ್ಚಿನ ಮಹತ್ವ ನೀಡಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ನಾಹೀದಾ, ಕೃಷಿ ಇಲಾಖೆಯ ನಾಗರಾಜು, ಜಿಪಂ ಎಇಇ ರವಿಕುಮಾರ್, ಬಹುರ್ ಹುಕ್ಕುಂ ಕಮಿಟಿಯ ಸದಸ್ಯರಾದ ಹನುಮಂತರಾಜು, ದೇವರಾಜು, ಹೇಮಾಲತಾ, ಕಂದಾಯ ಇಲಾಖೆಯ ನರಸಿಂಹಮೂರ್ತಿ, ಜಯಪ್ರಕಾಶ್, ಅರುಣಕುಮಾರ್, ಪ್ರತಾಪ್ಕುಮಾರ್, ಮಹೇಶ್, ಅಮ್ಜದ್, ಮಧುಚಂದ್ರ, ರಂಗನಾಥ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!