ಮದಕರಿ ನಾಯಕ ಎಲ್ಲರಿಗೂ ಆದರ್ಶವಾಗಲಿ

ಹೊಸ ಪೀಳಿಗೆಗೆ ಮದಕರಿ ನಾಯಕರ ಚರಿತ್ರೆ ಪರಿಚಯಿಸಿ: ಜಾರಕಿಹೊಳಿ

152

Get real time updates directly on you device, subscribe now.


ತುಮಕೂರು: ಚರಿತ್ರೆಯ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲುವ ಕಾರ್ಯಕ್ರಮ ಮಾಡಲಾಗಿದೆ, ಮದಕರಿ ನಾಯಕರ ಇತಿಹಾಸದ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಆಗಿದೆ. ಮದಕರಿ ನಾಯಕ ಎಲ್ಲರಿಗೂ ಆದರ್ಶವಾಗಬೇಕು. ಅವರ ಹೋರಾಟ, ತ್ಯಾಗ ಇಂದಿನ ಯುವಕರಿಗೆ ಮಾರ್ಗದರ್ಶಕನಾಗಬೇಕು ಎಂದು ಮಾಜಿ ಸಚಿವ ಹಾಗೂ ಶಾಸಕ ಸತೀಶ ಜಾರಕಿಹೊಳಿ ತಿಳಿಸಿದರು.
ನಗರದಲ್ಲಿ ಶನಿವಾರ ರಾಜ ವೀರ ಮದಕರಿ ನಾಯಕರ ಜಯಂತೋತ್ಸವ
ಸಮಿತಿಯಿಂದ ಹಮ್ಮಿಕೊಂಡಿದ್ದ ಮದಕರಿ ನಾಯಕರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಮದಕರಿ ನಾಯಕರ ಜೀವನದ ಬಗ್ಗೆ ಹೊಸ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡಬೇಕು. ಸಮುದಾಯ ಕಟ್ಟುವ ಪ್ರಯತ್ನ ನಡೆಯುತ್ತಿದೆ. ರಾಜನಹಳ್ಳಿ ಸ್ವಾಮೀಜಿ ಮೀಸಲಾತಿ ಹೆಚ್ಚಿಸುವ ಕೆಲಸ ಮಾಡಿದ್ದಾರೆ. ಅವರಿಗೆ ನಾವೆಲ್ಲ ಚಿರರುಣಿ. ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ ನೀಡಲಾಗಿದೆ. ಸಾಕಷ್ಟು ಜನ ಪ್ರಯತ್ನ ನಾಡಿದ್ದಾರೆ. ರಾಜ್ಯದ ತುಂಬ ಅವರ ಇತಿಹಾಸ ಹರಡಲಿ ಎಂದರು.

ಮಾಜಿ ಶಾಸಕ ಕೆ.ಎನ್.ರಾಜಣ್ಣ ಮಾತನಾಡಿ, ಜಿಲ್ಲೆಯ ಇತಿಹಾಸದಲ್ಲಿ ಮದಕರಿ ನಾಯಕರ ಜಯಂತಿ ಆಚರಣೆ ಮಾಡುವಂತಹ ಐತಿಹಾಸಿಕ ಸಂದರ್ಭ ಇದು, ಸಮಾಜದ ಎಲ್ಲರೊಂದಿಗೆ ನಾನೂ ಒಬ್ಬ. ನಮ್ಮ ಇತಿಹಾಸವನ್ನು ನಾವು ಅರಿತಾಗ ಮಾತ್ರ ನಮ್ಮ ಇತಿಸಹಾಸ ಸೃಷ್ಟಿ ಮಾಡಲು ಸಾಧ್ಯ. ಇತಿಹಾಸ ಸೃಷ್ಟಿಸುವ ಛಲವನ್ನು ಜೀವನದಲ್ಲಿ ಮಾಡಬೇಕು. ಒಂದು ಕಾಲದಲ್ಲಿ ಪಾಳೆಗಾರಿಕೆ ಎಂಬ ಪದವನ್ನು ದಬ್ಬಾಳಿಕೆ ರೀತಿ ಬಳಕೆ ಮಾಡುತ್ತಾರೆ. ಕೋಟೆ ಕಟ್ಟಿ ಸಾರ್ವಜನಿಕರ ರಕ್ಷಣೆ ಮಾಡಿದ್ದರು. ಯಾವತ್ತೂ ಕೂಡ ಬ್ರಿಟಿಷ್ ನವರ ಕಾಲದಲ್ಲಿ ಬುಡಕಟ್ಟು ಜನರು ಎಂದು ಬಳಸುತ್ತಿದ್ದರು. ಇಂದು ಪರಿಶಿಷ್ಟ ಪಂಗಡ ಎಂದು ಕರೆಸಿಕೊಳ್ಳುತ್ತೇವೆ. ಜನರಲ್ಲಿ ಒಗ್ಗಟ್ಟು ಇರಬೇಕು ಎಂದರು.
ಬೇರೆ ಯಾರನ್ನೂ ಕೂಡ ನಾಯಕ ಎಂದು ಒಪ್ಪಿಕೊಳ್ಳುವ ಪ್ರಶ್ನೆ ಬರಲ್ಲ, ಯಾಕೆಂದರೆ ನಾವೆಲ್ಲ ಹುಟ್ಟಿನಿಂದ ನಾಯಕರು. ಸಮಾಜದಲ್ಲಿ ಸ್ವಾಭಿಮಾನದ ಬದುಕು ಸಾಗಿಸಲು, ವಿದ್ಯೆ, ಆರ್ಥಿಕ ಸ್ವಾವಲಂಬನೆ ಮುಖ್ಯ. ವಿದ್ಯೆಗೆ ಎಲ್ಲವನ್ನು ದೊರಕಿಸಿಕೊಡುವ ಶಕ್ತಿಯಿದೆ. ವಿದ್ಯೆಗೆ ಹೆಚ್ಚಿನ ಒತ್ತು ನೀಡಬೇಕು. ಮಕ್ಕಳನ್ನು ಸಮಾಜಕ್ಕೆ ಆಸ್ತಿಯಾನ್ನಾಗಿ ಮಾಡಬೇಕು. ಮಕ್ಕಳನ್ನು ವಿದ್ಯಾವಂತರನ್ನಾಗಿ
ಮಾಡಬೇಕು ಎಂದು ಸಲಹೆ ಮಾಡಿದರು.

ಜನರ ಕಷ್ಟಗಳಿಗೆ ಸ್ಪಂದಿಸಿದರೆ ಜನರು ನಮ್ಮನ್ನು ಗುರುತಿಸುತ್ತಾರೆ, ನೋ ಕಾಸ್ಟ್,ನೋ ಕ್ಯಾಶ್, ಜಾತಿ, ಹಣ ಎರಡೂ ಇಲ್ಲದೆ ಬೆಳೆದಿರುವುದರಲ್ಲಿ ನಾನು ಒಬ್ಬನು, ಎಲ್ಲ ಜಾತಿಯಲ್ಲಿ ಇರುವ ಬಡವರ ಆಶೀರ್ವಾದದಿಂದ ಗೆದ್ದಿದ್ದೇನೆ. ರಾಜಕೀಯದ ಪ್ರಜ್ಞೆ ಬೆಳೆದಿದೆ, ಯಾರಿಗೆ ಬೆಂಬಲ ಕೊಡುತ್ತೋ ಅವರೇ ಗೆಲ್ಲೋದು. ಎಲ್ಲರ ಅಭ್ಯುದಯ, ಏಳಿಗೆ
ಬಯಸುತ್ತೇವೆ. ನಿರಂತರವಾಗಿ ನಡೆಯಬೇಕು, ಪೂರ್ವಜರ ಸಂಸ್ಕೃತಿಯನ್ನು ಮಕ್ಕಳಿಗೆ ತಿಳಿಸುವ ಕೆಲಸ ಮಾಡೋಣ ಎಂದರು.
ಸಂಜಯ್ ಕುಮಾರ್ ಸ್ವಾಮೀಜಿ ಮಾತನಾಡಿ, ಸರ್ಕಾರ ಮದಕರಿ ನಾಯಕರ ಜಯಂತಿ ಆಚರಣೆ ಮಾಡಬೇಕು. ಐತಿಹಾಸಿಕ ಚಿತ್ರದುರ್ಗದ ಕೋಟೆ ಅಭಿವೃದ್ಧಿ ಪಡಿಸಬೇಕು. ಕೇಂದ್ರ ಸರ್ಕಾರ ಆದಷ್ಟು ಬೇಗ ಮೀಸಲಾತಿ ಹೆಚ್ಚಳಕ್ಕೆ ಮುಂದಾಗಿ ಕಾರ್ಯರೂಪಕ್ಕೆ ತರಬೇಕು ಎಂದರು.

ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, ಸಮುದಾಯ ಸರ್ಕಾರದ ಎಲ್ಲಾ ಸೌಲಭ್ಯ ಪಡೆಯಬೇಕು. ಸಮಾಜದಲ್ಲಿ ಗೌರವ, ಉನ್ನತ ಸ್ಥಾನ ಸಿಕ್ಕಿದೆ. ಸರ್ಕಾರದಿಂದ ಮೀಸಲಾತಿಯೂ ಹೆಚ್ಚಿಸಲಾಗಿದೆ. ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಮಾಜಿ ಸಚಿವ ಟಿ.ಬಿ. ಜಯಚಂದ್ರ ಮಾತನಾಡಿ, ಇಂದು ಸಂವಿಧಾನಕ್ಕೆ ಚ್ಯುತಿ ಬರುವಂತಹ ವಾತಾವರಣ ನಿರ್ಮಾಣವಾಗಿದೆ. ನಮ್ಮೆಲ್ಲರಿಗೂ ಅಖಂಡತೆ ಮುಖ್ಯ. ಎಲ್ಲರಿಗೂ ನ್ಯಾಯಬದ್ಧವಾದ ಹಕ್ಕುಗಳನ್ನು ನೀಡಬೇಕು. ಆಳುವ ಪ್ರಭುಗಳು ಸಾರ್ವಜನಿಕರ ಹಕ್ಕುಗಳನ್ನು ರಕ್ಷಿಸುವ ಕೆಲಸ ಮಾಡಬೇಕು. ಆಡಳಿತ ಮಾಡುವವರಿಗೆ ಮದಕರಿ ನಾಯಕರ ತತ್ವಗಳು ಆದರ್ಶವಾಗಿ ಜನರ ಹಿತ ಕಾಯುವ ಕೆಲಸ ಮಾಡಬೇಕು. ಸಂವಿಧಾನದ ಹಿತ ಕಾಯಲು ಮದಕರಿ ನಾಯಕರ ವಿಚಾರ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಮಾಜಿ ಶಾಸಕ ಬಿ. ಸುರೇಶ್ಗೌಡ, ವಾಲ್ಮೀಕಿ ಸ್ವಾಭಿಮಾನಿ ಸಂಘದ ಅಧ್ಯಕ್ಷ ಚಳವಳಿ ರಾಜಣ್ಣ, ಶಾಂತಲಾ ರಾಜಣ್ಣ, ಪ್ರಸಾದ್ ಕಾವಲ್ಲಪ್ಪ, ಸಿಂಗಾಪುರ ವೆಂಕಟೇಶ್, ಅನಸೂಯ ಕೆಂಪನಹಳ್ಳಿ, ಪ್ರೊ.ಟಿ.ಟಿ. ಬಸವನಗೌಡ, ಶ್ರವಣ ಕುಮಾರ ಡಿ.ನಾಯಕ ಇನ್ನಿತರರು ಇದ್ದರು. ಇದೇ ವೇಳೆ ಸಮುದಾಯದ ಸಾಧಕನ್ನು ಸನ್ಮಾನಿಸಿ ಗೌರವಿಸಲಾಯಿತು.

Get real time updates directly on you device, subscribe now.

Comments are closed.

error: Content is protected !!