ಬಿಲ್ ಬಾಕಿ – ಗ್ರಾಪಂ ಕರೆಂಟ್ ಕಟ್

239

Get real time updates directly on you device, subscribe now.


ಕುಣಿಗಲ್: ವಿದ್ಯುತ್ ಬಿಲ್ ಕಟ್ಟದ ಗ್ರಾಮ ಪಂಚಾಯಿತಿಯ ವಿದ್ಯುತ್ ಸರಬರಾಜು ಕಡಿತ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಬಿಲ್ ಕಟ್ಟದ ಗ್ರಾಮ ಪಂಚಾಯಿತಿ ಕಾರ್ಯವೈಖರಿಯನ್ನು ಸಾರ್ವಜನಿಕರು ಖಂಡಿಸಿದ್ದಾರೆ. ತಾಲೂಕಿನ ಬಿಳೆದೇವಾಲಯ ಗ್ರಾಮ ಪಂಚಾಯಿತಿ ಕಾರ್ಯಾಲಯದ ವಿದ್ಯುತ್ ಬಿಲ್ ಕಟ್ಟಿಲ್ಲ ಎಂದು ಬೆಸ್ಕಾಂ ಸಿಬ್ಬಂದಿ, ಪ್ರಭಾರ ಎಇಇ ವೀರಭದ್ರಾಚಾರ್ ನೇತೃತ್ವದಲ್ಲಿ ಸಂಪರ್ಕ ಕಡಿತ ಮಾಡುವ ವೀಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಲಾಗಿದೆ. ಮೂಲಗಳ ಪ್ರಕಾರ ಗ್ರಾಮ ಪಂಚಾಯಿತಿ ಕಳೆದ ಮೂರು ತಿಂಗಳ ಒಟ್ಟಾರೆ ಸುಮಾರು ಎರಡುವರೆ ಸಾವಿರ ಬಿಲ್ ಬಾಕಿ ಉಳಿಸಿಕೊಂಡಿದೆ ಎಂದು ಹೇಳಲಾಗಿದೆ. ಗ್ರಾಮ ಪಂಚಾಯಿತಿ ಲೈಟ್ ಬಿಲ್ ಕಟ್ಟದಷ್ಟು ಬಡವಾಯಿತೆ ಎಂದು ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಾರ್ಯ ವೈಖರಿಯನ್ನು ಟೀಕಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!