ಕುಣಿಗಲ್: ದೇಹಧಾರ್ಡ್ಯ ಕಲೆಗೆ ಜಾಗತಿಕ ಮನ್ನಣೆ ಇದೆ. ಕಲೆಯನ್ನು ಸಾಧಿಸಲು ಹಲವು ರೀತಿಯಲ್ಲಿ ತ್ಯಾಗ ಮಾಡಬೇಕಾಗುತ್ತದೆ. ಇದರ ಸಾಧನೆಗೆ ಮನಸು, ದೇಹ ಎರಡೂ ಸಮಚಿತ್ತದಿಂದ ಇರಬೇಕಾದ್ದು ಮುಖ್ಯ ಎಂದು ಮಾಜಿ ಸಂಸದ ಎಸ್.ಪಿ. ಮುದ್ದ ಹನುಮೇ ಗೌಡ ಹೇಳಿದರು.
ಪಟ್ಟಣದ ಬಯಲು ರಂಗ ಮಂದಿರದಲ್ಲಿ ನಡೆದ ಜಿಲ್ಲಾ ಮಟ್ಟದ ದೇಹ ಧಾರ್ಡ್ಯ ಸ್ಪರ್ಧೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕಳದೆ ಕೆಲ ದಶಕಗಳ ಹಿಂದೆ ಪೋಷಕರು ಮಕ್ಕಳಲ್ಲಿನ ಕ್ರೀಡಾ ಸಾಮರ್ಥ್ಯಕ್ಕೆ ಹೆಚ್ಚಿನ ಆಸಕ್ತಿ ತೋರುತ್ತಿರಲಿಲ್ಲ. ಆದರೆ ಇಂದು ಪೋಷಕರು ಮಕ್ಕಳ ಕ್ರೀಡಾ ಚಟುವಟಿಕೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಕ್ರೀಡಾ ಚಟುವಟಿಕೆಗಳು ಸಹ ವ್ಯಕ್ತಿಯ ಜೀವನ ರೂಪಿಸುತ್ತದೆ ಎಂಬುದು ಇಂದಿನ ಪೋಷಕರಿಗೂ ಮನನವಾಗಿದೆ. ಯುವ ಜನತೆ ಹಲವು ಕ್ರೀಡೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಉತ್ತಮ ಸಾಧನೆ ಮಾಡುವ ಮೂಲಕ ಜೀವನ ರೂಪಿಸಿಕೊಳ್ಳಬಹುದು. ಸಾಕಷ್ಟು ಕ್ರೀಡೆಗಳಿಗೆ ಜಾಗತಿಕವಾಗಿ ವೇದಿಕೆ ಇದೆ. ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಜೀವನ ಕಟ್ಟಿಕೊಳ್ಳಬಹುದು ಎಂದರು.
ಬಿಜೆಪಿ ಮುಖಂಡ ಹೆಚ್.ಡಿ. ರಾಜೇಶ್ಗೌಡ ಮಾತನಾಡಿ, ತಾಲೂಕು, ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿ ಹಲವು ಕ್ರೀಡಾ ಪ್ರತಿಭೆ ಇವೆ. ಇವುಗಳ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕಿದೆ. ಇಂತಹ ವೇದಿಕೆಗಳು ಸಿಕ್ಕಿದಾಗ ಹಲವು ಪ್ರತಿಭೆಗಳು ತಮ್ಮ ಪ್ರತಿಭೆ ಅನಾವರಣಕ್ಕೆ ಸಹಕಾರಿಯಾಗುತ್ತದೆ. ರಾಜಧಾನಿಗೆ ಹತ್ತಿರವಾಗಿರುವ ಕುಣಿಗಲ್ ಪಟ್ಟಣದಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸುಸಜ್ಜಿತ ಕ್ರೀಡಾಂಗಣ ಇಲ್ಲದೆ ಇರುವುದು ಖೇದಕರ. ಮುಂದಿನ ದಿನಗಳಲ್ಲಿ ಉತ್ತಮ ಕ್ರೀಡಾಂಗಣ ವ್ಯವಸ್ಥೆಗೆ ಶ್ರಮಿಸಬೇಕಿದೆ ಎಂದರು.
ಕುಣಿಗಲ್ ಪಟ್ಟಣದವರೆ ಆದ ರಾಷ್ಟ್ರಮಟ್ಟದ ಆಟಗಾರರ ಶರತ್ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಜಿಲ್ಲೆಯ ವಿವಿಧೆಡೆಯಿಂದ ಅರವತ್ತಕ್ಕೂ ಹೆಚ್ಚು ಕ್ರೀಡಾಳುಗಳು ಆಗಮಿಸಿ ಪ್ರದರ್ಶನ ನೀಡಿದರು.
ಪ್ರಮುಖರಾದ ಹೇಮಂತ್, ಅರುಣ, ಲೋಕಿ, ಚೇತನ್, ಶ್ರೀನಿವಾಸ್, ಚೆಲುವರಾಜ, ವಿನಯ್ ಇತರರು ಇದ್ದರು.
Comments are closed.