ತುಮಕೂರು: ಭಾಷಾವಾರು ಪ್ರಾಂತ್ಯ ರಚನೆ ಸದುದ್ದೇಶದಿಂದ ಅನೇಕ ಮಹನೀಯರ ಹೋರಾಟದಿಂದ ಆದರೂ ಸಹ ಕರ್ನಾಟಕಕ್ಕೆ ನೆರೆ ರಾಜ್ಯಗಳಿಂದ ಗಡಿ ಸಮಸ್ಯೆ ಇನ್ನೂ ಜೀವಂತವಿರುವುದು ವಿಷಾದನೀಯ ಎಂದು ವರದಕ್ಷಣೆ ವಿರೋಧಿ ವೇದಿಕೆಯ ಅಧ್ಯಕ್ಷೆ ಹಾಗೂ ಅನನ್ಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷೆ ಎಂ.ಸಿ. ಲಲಿತಾ ಹೇಳಿದರು.
ಕುವೆಂಪು ನಗರದಲ್ಲಿ ಬಸವ ಸ್ಫೂರ್ತಿ ಕಲ್ಚರಲ್ ಅಕಾಡೆಮಿ ಹಾಗೂ ಅನನ್ಯ ಸಾಂಸ್ಕೃತಿಕ ವೇದಿಕೆಯ ಸಹಯೋಗದಲ್ಲಿ ಏರ್ಪಡಿಸಿದ್ದ ಕನ್ನಡ ಗೀತಗಾಯನ ಸ್ಪರ್ಧೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಚ್ಚ ಕನ್ನಡ ಪ್ರದೇಶಗಳಾದ ಮಡಕಶಿರ, ರಾಯದುರ್ಗ, ಕಾಸರಗೋಡು, ಕೃಷ್ಣಗಿರಿ, ಹೊಸೂರು ಹೀಗೆ ಕೆಲವು ಪ್ರದೇಶಗಳು ಬೇರೆ ರಾಜ್ಯಗಳಿಗೆ ಸೇರಿಹೋಗಿ ಗಡಿ ಸಮಸ್ಯೆಗೆ ಕಾರಣವಾಗಿದೆ. ಕೇರಳದ ಕಾಸರಗೂಡು ಕರ್ನಾಟಕಕ್ಕೆ ಸೇರುತ್ತದೆ ಎಂಬ ಮಹದಾಸೆ ಇಟ್ಟುಕೊಂಡಿದ್ದ ಕೈಯಾರ ಕಿಞ್ಞಣ್ಣರೈ ಅವರ ಆಸೆ ನೆರವೇರಲೇಯಿಲ್ಲ ಎಂದು ಹೇಳುತ್ತಾ ಕರ್ನಾಟಕ ಏಕೀಕರಣಕ್ಕೆ ಹೋರಾಡಿದ ಆಲೂರು ವೆಂಕಟರಾಯರು, ಅನಕೃ, ರಾಮಮೂರ್ತಿ ಇನ್ನು ಮುಂತಾದ ಮಹನೀಯರ ಹೋರಾಟ ಸ್ಮರಿಸಿಕೊಂಡರು.
ಸಮಾರಂಭದಲ್ಲಿ ಸ್ಪರ್ಧಾ ವಿಜೇತರಾದ ಆದ್ಯ, ಶ್ರೇಷ್ಠ, ಶ್ರೇಯ, ಅಹನ, ಕೃಷ್ಣಮೂರ್ತಿ, ದೇವರಾಜು, ನಾಗರಾಜ ಶೆಟ್ಟಿ ಅವರಿಗೆ ಪ್ರಥಮ ಹಾಗೂ ದ್ವಿತೀಯ ಬಹುಮಾನ ವಿತರಿಸಿ ತೀರ್ಪುಗಾರರಾಗಿದ್ದ ವಿ. ಸುದರ್ಶನ್ ಮತ್ತು ಭವಾನಿ ಜಿಂಗಾಡೆ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಎಂ.ಸುರೇಶ್, ಶಾಂತಮೂರ್ತಿ ಇತರರು ಇದ್ದರು.
ಗಡಿ ಸಮಸ್ಯೆ ಜೀವಂತವಿರುವುದು ವಿಷಾದನೀಯ
Get real time updates directly on you device, subscribe now.
Next Post
Comments are closed.