ಆಲದಮರದ ಹಟ್ಟಿಯಲ್ಲಿ ಹಾಲು ಹುಯ್ಯುವ ಹಬ್ಬ

137

Get real time updates directly on you device, subscribe now.


ಪಾವಗಡ: ತಾಲ್ಲೂಕಿನ ಗೊಲ್ಲ ಸಮುದಾಯದ ಆಲದಮರದ ಹಟ್ಟಿಯಲ್ಲಿ ಶ್ರೀಸ್ವಾಮಿ ಚಿತ್ರಲಿಂಗೇಶ್ವರನಿಗೆ ಭಕ್ತಿ ಸಮರ್ಪಿಸುವ ಸಂಕೇತವಾಗಿ ಹಾಲು ಹುಯ್ಯುವ ಹಬ್ಬ ಆಚರಿಸಿದರು.
ನೂರಾರು ಭಕ್ತರು ಆಲದಮರದ ಹಟ್ಟಿ, ಕೃಷ್ಣಗಿರಿ, ಜೂಲಪ್ಪನಹಟ್ಟಿ, ವೀರ್ಲಗೊಂದಿ ಭಾಗದಿಂದ ಬಂದು ಸ್ವಾಮಿಯ ಜ್ಯೋತಿ ನಿಲುವಿನ ಧ್ವಜ ಕಂಡು ಪುಳಕಿತರಾದರು. ಜೊತೆಗೆ ಛಲವಾದಿಯವರು ಬಾರಿಸುವ ಉರುಮೆ ಶಬ್ದ ಈ ದೇವರಿಗೆ ಅಚ್ಚುಮೆಚ್ಚು. ನೋಡೋಕೆ ಒಂಥರಾ ರೋಮಾಂಚನ ಎನಿಸಿತು.
ಗೊಲ್ಲ ಸಮುದಾಯದಲ್ಲಿ ಇದೊಂದು ಬುಡಕಟ್ಟು ಆಚರಣೆಯಾಗಿದ್ದು, ಗೊಲ್ಲ ಸಮುದಾಯದ ಬಂಧುಗಳು ಹಾಲು ಹುಯ್ಯುವ ಹಬ್ಬ ಆಚರಿಸುವ ಪೂರ್ವ ತಯಾರಿ ತುಂಬಾ ಕಟ್ಟುನಿಟ್ಟಿನಿಂದ ನಡೆಸುತ್ತಾರೆ. ಹುಲ್ಲು ಹೊದಿಕೆಯ ಜೋಪಡಿ ರೂಪದ ದೇಗುಲದಲ್ಲಿ ನೆಲೆನಿಂತಿರುವ ಸ್ವಾಮಿಯನ್ನ ನಂಬಿದರೆ ಭಕ್ತರಿಗೆ ಸಂತಾನ ಭಾಗ್ಯ, ನೆಮ್ಮದಿ ಕರುಣಿಸುವ ಹೇಳಿಕೆ ಕೊಡುತ್ತಾನೆ. ಇದರಿಂದ ಒಳಿತಾಗುತ್ತಿದೆ ಎಂದು ಸ್ಥಳೀಯರು ಹಬ್ಬದ ಕುರಿತಾಗಿ ಸಿದ್ದಪ್ಪ ಮಾತನಾಡಿ, ಪೂರ್ವಜರ ಕಾಲದಿಂದಲೂ ತುಂಬಾ ಶ್ರದ್ಧೆಯಿಂದ ನಡೆಸಿಕೊಂಡು ಬರಲಾಗುತ್ತಿದೆ. ಸುಮಾರು ಮೂರು ದಿನಗಳ ಪೂರ್ವ ತಯಾರಿ ನಂತರ ಅಂತಿಮವಾಗಿ ದೇಗುಲದಲ್ಲಿ ದೀವಿಗೆ ಹೊರಡಿಸಲಾಗುತ್ತದೆ. ಅಂದು ಸಂಜೆ ಬೇಲಿ ಮೇಲೆ ಮನುಷ್ಯರು ನಡೆಯುವ ಮೂಲಕ ಅಚ್ಚರಿ ನಡೆಸುತ್ತಾರೆ ಎಂದು ತಿಳಿಸಿದರು.
ಗೌಡ ಕೃಷ್ಣಪ್ಪ ಮಾತನಾಡಿ ಶುದ್ಧ ಹಸುವಿನ ಹಾಲನ್ನ ಹೋಣಿಯಲ್ಲಿ ಬಿಡುವ ಮೂಲಕ ಹರಕೆ ಈಡೇರಿಸಿಕೊಳ್ಳುವ ಆಚರಣೆಯಾಗಿದೆ. ಕಂಕಣ ಫಲ, ನೆಮ್ಮದಿ ಸುಖ ಶಾಂತಿ ಪಡೆಯಲು ಬಂದ ಭಕ್ತರ ಭವ ಬಾಧೆಗಳ ಪರಿಹಾರಕ್ಕೆ ವ್ಯಕ್ತಿ ಮೇಲೆ ದೇವರ ಪ್ರವಹಿಸಿ ನುಡಿಯುತ್ತಾರೆ ಎಂದರು.
ಇವರ ಆಚರಣೆಯಲ್ಲಿ ನಂಬಿಕೆ, ಶ್ರದ್ಧಾ ಭಕ್ತಿ ಎದ್ದು ಕಾಣುತಿತ್ತು. ಪೂರ್ವಿಕರ ಕಾಲದಿಂದಲೂ ಈ ಪದ್ಧತಿ ರೂಢಿಗತವಾಗಿದೆ. ಕೆಲವರು ಇವರ ಆಚರಣೆಯಲ್ಲಿ ಕೆಲವೊಂದಷ್ಟು ಮೌಢ್ಯತೆಯಿಂದ ಕೂಡಿದೆ ಎಂಬುದಿದೆ. ಆದರೆ ಯಾರಿಗೂ ತೊಂದರೆಯಿಲ್ಲ ಒಳಿತಾಗುತ್ತಿದೆ ಎಂಬ ನಿದರ್ಶನವಿದ್ದಾಗ ಆಚರಣೆ ಮಾಡುವುದರಲ್ಲಿ ತಪ್ಪೇನಿದೆ ಎಂದು ಇನ್ನೊಂದಷ್ಟು ಮಂದಿ ಮಾತನಾಡಿಕೊಳ್ಳುತ್ತಿದ್ದರು. ಸರ್ಕಾರದ ಜನಪ್ರತಿನಿಧಿಗಳು ಈ ಗೊಲ್ಲ ಸಮುದಾಯದ ಮಂದಿ ಮನೆಗಿಂದ ದೇವರು, ಗುಡಿ ನಂಬಿಕೆ ಹೆಚ್ಚು ಪ್ರಾಶಸ್ತ್ಯ ಕೊಡುವ ಮಂದಿ. ಹಾಗಾಗಿ ಅವರಿಗೆ ಅವಶ್ಯ ಮೂಲಭೂತ ಸೌಕರ್ಯ ಒದಗಿಸುವ ಮೂಲಕ ವಿಶಾಲವಾಗಿ ದೇಗುಲ ನಿರ್ಮಿಸಿಕೊಳ್ಳಲು ಸಹಕರಿಸಬೇಕಾಗಿದೆ ಎಂದು ಹಟ್ಟಿ ಜನರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಬೋರಪ್ಪ, ಸಣ್ಣಪಾತಪ್ಪ, ಮಗ ಚಿತ್ತಪ್ಪ, ಚಿಕ್ಕಣ್ಣ, ಕರೆಕಲ್ಲಪ್ಪ, ಪಾತಣ್ಣ ಇನ್ನು ಹಲವರು ಇದ್ದರು.

Get real time updates directly on you device, subscribe now.

Comments are closed.

error: Content is protected !!