ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ನೋಂದಾಯಿಸಿ ಮಾರಾಟ

244

Get real time updates directly on you device, subscribe now.


ತುಮಕೂರು: ಒಬ್ಬರ ಐಡಿಯಲ್ಲಿ ಅಕ್ರಮವಾಗಿ ಹಲವು ಬಾರಿ ಗ್ಯಾಸ್ ಏಜೆನ್ಸಿಯಿಂದ ಗ್ಯಾಸ್ ಸಿಲಿಂಡರ್ ನೋಂದಣಿ ಮಾಡಿ ಬೇರೆಯವರಿಗೆ ಮಾರಾಟ ಮಾಡಿರುವ ಘಟನೆ ತುಮಕೂರಿನಲ್ಲಿ ನಡೆಸಿದೆ.
ಕೆಆರ್ ಎಸ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಜ್ಞಾನಸಿಂಧುಸ್ವಾಮಿ ಅವರ ಐಡಿ‌ ಸಂ.CX10227659 ಯಿಂದ ನವೆಂಬರ್ ತಿಂಗಳಿನಲ್ಲಿ ಮೂರು ಬಾರಿ ಗ್ಯಾಸ್ ಸಿಲೆಂಡರ್ ಬುಕ್ ಮಾಡಿಕೊಂಡು ಅದನ್ನು ಮಾರಾಟ ಮಾಡಲಾಗಿದೆ. ಈ ಬಗ್ಗೆ ಜ್ಞಾನ ಸಿಂಧು ಸ್ವಾಮಿ ಅವರು ಅಗತ್ಯ ದಾಖಲೆಗಳೊಂದಿಗೆ ಶ್ರೀರಂಗ ಗ್ಯಾಸ್ ಏಜೆನ್ಸಿ ಮಾಲೀಕರಿಗೆ ದೂರು ನೀಡಿದ್ದಾರೆ.
ಜ್ಞಾನ ಸಿಂಧು ಮಾತನಾಡಿ, ನವೆಂಬರ್ 10ರಂದು ಗ್ಯಾಸ್ ಸಿಲಿಂಡರ್ ನೋಂದಣಿ ಮಾಡಿಕೊಂಡು ಪಡೆದಿದ್ದೇನೆ. ನಂತರ ನವೆಂಬರ್11,18,19 ಮೂರು ಬಾರಿ ಅಕ್ರಮವಾಗಿ 3 ಸಿಲಿಂಡರ್ ಅನ್ನು ಬುಕ್ ಮಾಡಿ ಮಾರಾಟ ಮಾಡಲಾಗಿದೆ. ನನ್ನ ಹೆಸರಲ್ಲಿ ಅಕ್ರಮ ಗ್ಯಾಸ್ ಮಾರಾಟ ಆಗುತ್ತಿರುವ ಬಗ್ಗೆ ನನ್ನ ಮೊಬೈಲ್ ಗೆ ಬಂದ ಮೆಸೆಜ್ ಮಾಹಿತಿ ಆಧರಿಸಿ ಅಕ್ರಮವಾಗಿ ಮಾರಾಟ ಮಾಡಿದ ಬಗ್ಗೆ ಸ್ವತಃ ಗ್ಯಾಸ್ ಏಜೆನ್ಸ್ಇ ಬಳಿ ವಿಚಾರಿಸಿ, ದಾಖಲೆ ಪರಿಶೀಲಿಸಿದಾಗ ಅಕ್ರಮವು ಸಾಬೀತಾಗಿದೆ. ಈ ಅಕ್ರಮದಲ್ಲಿ ವಿತರಣೆಯಾಗಿರುವ ಸಿಲಿಂಡರ್ ಯಾರಿಗೆ ಮಾರಾಟ ಮಾಡಲಾಗಿದೆ ಎಂಬುದರ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಇಲ್ಲದೆ ಹೋದರೆ ನನ್ನ ಹೆಸರಲ್ಲಿ ಅಕ್ರಮ ನಡೆದಿರುವ ಬಗ್ಗೆ ಆಹಾರ ಇಲಾಖೆ, ತಹಸೀಲ್ದಾರ್ ಹಾಗೂ ಠಾಣೆಯಲ್ಲಿ ದೂರು ದಾಖಲಿಸಿ ನನ್ನ ಹೆಸರಲ್ಲಿ‌ಅಕ್ರಮ ನಡೆದಿರುವ ಬಗ್ಗೆ ಹೋರಾಟ ನಡೆಸುತ್ತೇನೆ ಎಂದು ತಿಳಿಸಿದರು.
ಇದೇ ರೀತಿ ಹಲವು ಗ್ರಾಹಕರಿಗೆ ಮೋಸವಾಗುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!