ಡಿಜಿಟಲ್ ವ್ಯವಹಾರ ಉತ್ತೇಜಿಸಲು ಪಿಎಂ ಅರಿವು ಪತ್ರ

ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ

78

Get real time updates directly on you device, subscribe now.


ಕುಣಿಗಲ್: ಪ್ರಧಾನಮಂತ್ರಿಗಳ ಸಹಿ ಇರುವ ಪಿಎಂ ಸ್ವನಿಧಿ ಯೋಜನೆಯ ಹಾಗೂ ಡಿಜಿಟಲ್ ವ್ಯವಹಾರ ಉತ್ತೇಜಿಸಲು ಬೀದಿಬದಿ ವ್ಯಾಪಾರಿಗಳಿಗೆ ಪ್ರಧಾನಮಂತ್ರಿಗಳ ಸಂದೇಶ ಇರುವ ಅರಿವು ಮೂಡಿಸುವ ಪತ್ರ ಪುರಸಭೆಯಲ್ಲಿ ಕೊಳೆಯುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಮುಖಂಡರು, ಮುಖ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

ಬುಧವಾರ ಪುರಸಭೆ ಕಾರ್ಯಾಲಯಕ್ಕೆ ಆಗಮಿಸಿದ ಮುಖಂಡರಾದ ದೇವರಾಜ್, ಸುರೇಶ್, ಬಜರಂಗ ದಳದ ಗಿರೀಶ್, ಪುರಸಭೆಯಲ್ಲಿ ಪಿಎಂ ಸ್ವನಿಧಿ ಯೋಜನೆ, ಡಿಜಿಟಲ್ ಪಾವತಿ ಉತ್ತೇಜಿಸಲು ಪ್ರಧಾನ ಮಂತ್ರಿಗಳ ಕಾರ್ಯಾಲಯದ ಸಂದೇಶ ಇರುವ ಪತ್ರಗಳ ಬಂಡಲ್ ಇರುವುದನ್ನು ಗಮನಿಸಿ ಅಸಮಧಾನ ವ್ಯಕ್ತಪಡಿಸಿದರು. ಬಂಡಲ್ನಲ್ಲಿರುವ ಪ್ರಧಾನ ಮಂತ್ರಿಗಳ ಸಹಿ ಇರುವ ಅರಿವು ಪತ್ರದ ಲಕೋಟೆಗಳನ್ನು ಮುಖ್ಯಾಧಿಕಾರಿ ರಮೇಶ್ ಅವರ ಬಳಿ ಪ್ರಸ್ತಾಪಿಸಿದರು. ಪ್ರಧಾನ ಮಂತ್ರಿಗಳು ಬೀದಿ ಬದಿ ವ್ಯಾಪಾರಿಗಳಿಗೆ ಕೊವಿಡ್ ನಂತರದ ದಿನಗಳಲ್ಲಿ ಬಡ ಜನತೆಗೆ ನೆರವಾಗಲು ಹತ್ತು ಸಾವಿರ ಸಾಲ ವಿತರಣೆಗೆ ಕ್ರಮ ಕೈಗೊಂಡು ಇದೀಗ ಇದರ ಮೊತ್ತ ಐವತ್ತು ಸಾವಿರ ರೂ. ಮೊತ್ತದ ವರೆಗೂ ಏರಿಕೆ ಪ್ರಸ್ತಾಪಿಸಿರುವ ಜೊತೆಯಲ್ಲಿ ಬೀದಿಬದಿ ವ್ಯಾಪಾರಿಗಳು ಡಿಜಿಟಲ್ ವಹಿವಾಟಿಗೆ ಒತ್ತು ನೀಡುವಂತೆ ಮನವಿ, ದೇಶದಲ್ಲಿ ಕೊವಿಡ್ ಲಸಿಕೆ ಅಭಿಯಾನ ಯಶಸ್ವಿಗೊಳಿಸಲು ಸಹಕಾರ ನೀಡಿದ್ದಕ್ಕೆ ವ್ಯಾಪಾರಿಗಳಿಗೆ ಅಭನಂದಿಸಿ ಎರಡು ಪತ್ರಗಳ ಪತ್ರ ಮಾಡಿ ಪ್ರಧಾನ ಮಂತ್ರಿಗಳ ಸಹಿ ಕೂಡ ಇದೆ, ಹೀಗಿದ್ದರೂ ಕಳೆದ ಕೆಲವಾರು ವಾರಗಳಿಂದ ಪುರಸಭೆ ಕಾರ್ಯಾಲಯದಲ್ಲಿ ಅರಿವು ಮೂಡಿಸುವ ಪತ್ರಗಳ ವಿತರಣೆ ಮಾಡದೆ ಹಾಗೆ ಇಟ್ಟುಕೊಂಡಿರುವ ಉದ್ದೇಶವಾದರೂ ಏನು, ಪ್ರಧಾನಮಂತ್ರಿಗಳ ಯೋಜನೆ ಮೂಲಕ ಪುರಸಭೆಯ ವತಿಯಿಂದ ಬಡ ಜನತೆಗೆ ಸಾಲವಿತರಣೆ ಮಾಡಲಾಗುತ್ತಿದೆ. ಹೀಗಿರುವಾಗ ಅವರು ನೀಡಿರುವ ಸಂದೇಶ ಪತ್ರಗಳು ವ್ಯಾಪಾರಿಗಳಲ್ಲಿ ಅರಿವು ಮೂಡಿಸಲು ಸಹಕಾರವಾಗಲಿದೆ. ಆದರೆ ಪತ್ರ ವಿತರಣೆ ಮಾಡದೆ ಇಟ್ಟುಕೊಂಡಿರುವುದು ಹಲವು ಅನುಮಾನಕ್ಕೆ ಕಾರಣವಾಗುತ್ತಿದ್ದು, ಪುರಸಭೆ ಮೋದಿಜಿ ಅವರ ಸಹಿ ಇದೆ ಎಂದು ವಿತರಿಸಿಲ್ಲವೆ ಎಂದು ಖಾರವಾಗಿ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿ ಮುಖ್ಯಾಧಿಕಾರಿ ರಮೇಶ್, ತಾವು ಪುರಸಭೆಗೆ ಹೊಸದಾಗಿ ಬಂದಿದ್ದು ಸಂಬಂಧಪಟ್ಟ ಸಿಬ್ಬಂದಿಯೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಇದಕ್ಕೆ ಉತ್ತರಿಸಿದ ಮುಖಂಡರು ಕೂಡಲೆ ವಿತರಣೆಗೆ ಕ್ರಮಕೈಗೊಳ್ಳಿ, ಇಲ್ಲವಾದರೆ ನಮಗೆ ವಿಳಾಸ ನೀಡಿ ನಾವೆ ವಿತರಣೆ ಮಾಡುತ್ತೇವೆ ಎಂದು ಹೇಳಿ ಗಡುವು ನೀಡಿ ಹೊರ ಬಂದರು.

Get real time updates directly on you device, subscribe now.

Comments are closed.

error: Content is protected !!