ಕುಣಿಗಲ್: ಪಟ್ಟಣದ ಅಗ್ರಹಾರ ವಾಸಿ ವಿಜೇತ್ ಎಂಬ ಯುವಕ, ವಧು ವರರ ಅನ್ವೇಷಣೆಯ ಮ್ಯಾಟ್ರಿಮೋನಿ ಆಪ್ ಮೂಲಕ ಶಿವಮೊಗ್ಗ ಯುವತಿಯೋರ್ವಳನ್ನು ವಂಚಿಸಿ ಆಕೆಯಿಂದ ಸುಮಾರು ಹದಿಮೂರುವರೆ ಲಕ್ಷ ಪಡೆದು ಮೋಸ ಮಾಡಿದ್ದು, ಶಿವಮೊಗ್ಗ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಅಲ್ಲಿನ ಪೊಲೀಸರು ಬಂಧಿಸಿದ್ದರು.
ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಬಂದ ಆತ ಅನೇಕಲ್ನಲ್ಲಿ ವ್ಯಕ್ತಿಯೊಬ್ಬರಿಗೆ ಸಿಮೆಂಟ್ ಫ್ಯಾಕ್ಟರಿ ಕೊಡಿಸುವುದಾಗಿ ಹೇಳಿ ಸುಮಾರು ತೊಂಭತ್ತು ಲಕ್ಷ ರೂ. ವಂಚನೆ ಮಾಡಿದ್ದು ಘಟನೆಗೆ ಸಂಬಂಧಿಸಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಆರೋಪಿಯನ್ನು ಪಟ್ಟಣದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಈತನ ಬಗ್ಗೆ ಸಾರ್ವಜನಿಕರು, ಹೆಣ್ಣು ಮಕ್ಕಳು ಎಚ್ಚರದಿಂದ ಇರುವಂತೆ ಪೊಲೀಸರು ಮನವಿ ಮಾಡಿದ್ದಾರೆ.
Comments are closed.