ಕಾಂಗ್ರೆಸ್ನವರದ್ದು ರೌಡಿ ರಾಜಕಾರಣ

63

Get real time updates directly on you device, subscribe now.


ಕುಣಿಗಲ್: ಗುಜರಾತ್ ರಾಜ್ಯದಲ್ಲಿ ಈ ಬಾರಿಯೂ ಬಿಜೆಪಿ ಬಹುಮತ ಗಳಿಸಿ ಅಧಿಕಾರ ಹಿಡಿಯಲಿದೆ. ಇದರಲ್ಲಿ ಅನುಮಾನ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಹೇಳಿದರು.
ಸೋಮವಾರ ಪಟ್ಟಣದಲ್ಲಿ ಡಿಸೆಂಬರ್ ಏಳರಂದು ನಡೆಯಲಿರುವ ಜನಸಂಕಲ್ಪ ಯಾತ್ರೆ ಮನೆಮನೆ ಪ್ರಚಾರಕ್ಕೆ ಚಾಲನೆ ನೀಡಿ, ಕಾರ್ಯಕ್ರಮದ ಪೂರ್ವಸಿದ್ಧತೆ ಸ್ಥಳ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಗುಜರಾತ್ ಚುನಾವಣೆಯಲ್ಲಿ ಪಕ್ಷವು ಉತ್ತಮ ಸಾಧನೆ ಮಾಡಲಿದೆ. ಇದರ ಫಲಿತಾಂಶವೂ ರಾಜ್ಯದ ರಾಜಕಾರಣದ ಮೇಲೂ ಪರಿಣಾಮ ಬೀರಲಿದೆ. ಪ್ರಧಾನಿ ಮೋದಿಜಿ ನಡೆಸಿದ ಚುನಾವಣೆ ರೋಡ್ಶೋಗೆ ಜನಸಂದಣಿ ಹೆಚ್ಚಿದ್ದು ವಿಶ್ವ ದಾಖಲೆಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದವರು ವಿನಾಕಾರಣ ಬಿಜೆಪಿ ಪಕ್ಷವೂ ರೌಡಿಗಳ ಬೆಂಬಲಿಸುವ ಪಕ್ಷ ಎಂದು ತಮ್ಮ ಹಿನ್ನೆಲೆಯನ್ನು ಮರೆತು ಆರೋಪಿಸುತ್ತಿವೆ. ಆದರೆ ಕಾಂಗ್ರೆಸಿಗರು ಮರೆತಿದ್ದಾರೆ ಎಂದರು.

ಕಾಶ್ಮೀರದಲ್ಲಿ ಪಂಡಿತರ ಹತ್ಯೆ ಮಾಡಿದ ಉಗ್ರಗಾಮಿಗೆ ರಕ್ಷಣೆ ನೀಡಿದ್ದು ಯಾರು, ಬೆಂಗಳೂರಿನ ರೌಡಿ ರಾಜಕಾರಣಕ್ಕೆ ಮುನ್ನುಡಿ ಬರೆದು ಯಾರು ಯಾರ ಶಿಷ್ಯರಾಗಿದ್ದರು ಎಂಬುದು ಎಲ್ಲವು ಜನರಿಗೆ ಗೊತ್ತಿದೆ. ಜನತೆಗೆ ಮತ್ತಷ್ಟು ವಿವರವಾಗಿ ಹೇಳುವ ಕಾಲವೂ ಹತ್ತಿರ ಬರುತ್ತಿದ್ದು ರಾಜ್ಯದ ಜನತೆಗೆ ಕಾಂಗ್ರೆಸ್ನ ರೌಡಿ ರಾಜಕಾರಣದ ಇತಿಹಾಸ ತಿಳಿಸುತ್ತೇವೆ. ಜನಸಂಕಲ್ಪ ಯಾತ್ರೆ ಅಪಾರ ಜನಮನ್ನಣೆ ಗಳಿಸಿದ್ದು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಕೈಗೊಂಡ ಹಲವಾರು ಜನಪರ ಕಾರ್ಯಕ್ರಮ ಜನತೆಯ ಮುಂದಿಡುತ್ತಿದೆ. ಪಟ್ಟಣದಲ್ಲಿ ಬುಧವಾರ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸುಮಾರು 25 ಸಾವಿರ ಜನರು ಸೇರುವ ನಿರೀಕ್ಷೆ ಇದೆ. ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ಸೇರಿದಂತೆ ಹಲವು ಸಚಿವರು ಪಾಲ್ಗೊಳ್ಳಲಿದ್ದಾರೆ ಎಂದರು.
ಕೋಲಾರ ಜಿಲ್ಲೆಯಲ್ಲಿ ಭಾನುವಾರ ನಡೆದ ಅಪಘಾತ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿ, ಬೈಕ್ ಸವಾರನ ಅಚಾತುರ್ಯದಿಂದ ಅಪಘಾತ ಸಂಭವಿಸಿದ್ದು, ಆತನ ಉಪಚರಿಸಲು ಮುಂದಾದ ತಮ್ಮ ಮೇಲೆ ಕೆಲವರು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಘಟನೆಗೆ ಸಂಬಂಧಿಸಿದಂತೆ ಪೊಲೀಸರಿಗೆ ದೂರು ನೀಡಲು ಮುಂದಾದಾಗ ಬೈಯ್ದವರೆ ಬೇಡ ಸರ್ ಎಂದು ತಡೆದರು. ಬಹಶಃ ಅವರಿಗೆ ನನ್ನ ಮೇಲೆ ಪ್ರೀತಿ ಇರಬೇಕು ಎಂದರು.

ಪಿಎಲ್ಡಿ ಬ್ಯಾಂಕ್ ರಾಜ್ಯಾಧ್ಯಕ್ಷ, ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್ ಮಾತನಾಡಿ, ಎಂಎಲ್ಸಿ ರವಿಕುಮಾರ್ ಸೇರಿದಂತೆ ಸಿ.ಟಿ.ರವಿ ಅವರ ಅಪಘಾತ ಪ್ರಕರಣದಲ್ಲಿ ವಿರೋಧ ಪಕ್ಷಗಳು ಸಣ್ಣತನದ ರಾಜಕಾರಣ ಮಾಡಿದ್ದು ಸರಿಯಲ್ಲ. ಸಿ.ಟಿ.ರವಿ ಅವರ ವಾಹನ ಅಪಘಾತ ವಾದಾಗ ತಾವೇ ಖುದ್ದು ಸ್ಥಳಕ್ಕೆ ತೆರಳಿದಾಗ ಗಾಯಾಳುಗಳು ತಮ್ಮದೆ ತಪ್ಪೆಂದು ಹೇಳಿ ನಂತರ ಬೇರೆ ರೀತಿಯ ಚರ್ಚೆ ಆದವು. ಇದು ಖಂಡನೀಯ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್, ಪ್ರಧಾನ ಕಾರ್ಯದರ್ಶಿ ಭೈರಪ್ಪ, ಶ್ರೀಧರ್, ತಾಲೂಕು ಅಧ್ಯಕ್ಷ ಬಲರಾಮ್, ಪ್ರಮುಖರಾದ ಹರ್ಷವರ್ಧನ ಗೌಡ, ದೇವರಾಜ್, ಆನಂದಕುಮಾರ, ಕೃಷ್ಣ, ಗೋಪಿ, ತಿಮ್ಮೇಗೌಡ, ಸಂದೀಪ್, ಅಮರ್, ಸುರೇಶ, ಧನುಶ್, ಪಾಪಣ್ಣ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!