ರಕ್ತದಾನದ ಅರಿವು ಪ್ರತಿಯೊಬ್ಬರಲ್ಲಿಯೂ ಮೂಡಬೇಕು: ಯೋಗಾನಂದ್

228

Get real time updates directly on you device, subscribe now.


ತುಮಕೂರು: ರಕ್ತದಾನದ ಅರಿವೂ ಪ್ರತಿಯೊಬ್ಬರಲ್ಲಿಯೂ ಮೂಡಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತ ಯೋಗಾನಂದ್ ಕರೆ ನೀಡಿದರು.
ನಗರದ ಎಚ್.ಡಿ.ಎಫ್.ಸಿ ಮುಖ್ಯ ಶಾಖೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ರಕ್ತದಾನದ ಬಗ್ಗೆ ತಪ್ಪು ಮಾಹಿತಿ ನೀಡಬಾರದು. ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಿ ಇನ್ನೊಬ್ಬರ ಜೀವ ಉಳಿಸಬಹುದು ಎಂದರು. 2007ರಿಂದ ಬ್ಯಾಂಕಿನಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ. ರಕ್ತದಾನ, ನೇತ್ರದಾನ, ದೇಹದಾನದಂತಹ ಉತ್ತಮ ಕಾರ್ಯಗಳು ಹೆಚ್ಚಾಗಿ ನಡೆಯಲಿ ಎಂದು ತಿಳಿಸಿದರು.

ಎಚ್.ಡಿ.ಎಫ್.ಸಿ ಬ್ಯಾಂಕ್ ಕ್ಲಸ್ಟರ್ ಹೆಡ್ ವಿಶ್ವನಾಥ್ ಹತ್ತಾರ್ ಮಾತನಾಡಿ, ಪ್ರತಿವರ್ಷ ಹಮ್ಮಿಕೊಳ್ಳುವ ರಕ್ತದಾನ ಶಿಬಿರದಲ್ಲಿ ಬ್ಯಾಂಕಿನ ಸಿಬ್ಬಂದಿಗಳು ರಕ್ತದಾನ ಮಾಡಿ ಪ್ರೇರಣೆಯಾಗಿದ್ದಾರೆ ಎಂದರು. ಜಿಲ್ಲಾ ವರದಿಗಾರ ರಂಗನಾಥ ಕೆ.ಮರಡಿ ಮಾತನಾಡಿ, ರಕ್ತವನ್ನು ಕೃತಕವಾಗಿ ಉತ್ಪಾದಿಸುವ ಯಾವುದೇ ಕಾರ್ಖಾನೆ ಪ್ರಪಂಚದಲ್ಲಿ ಇಲ್ಲ. ಸ್ವಾಭಾವಿಕವಾಗಿ ರಕ್ತ ಉತ್ಪಾದನೆ ಆಗುತ್ತದೆ. ಸಂಕಷ್ಟದಲ್ಲಿದ್ದವರಿಗೆ ರಕ್ತದಾನ ಮಾಡಿ ಜೀವಕ್ಕೆ ಆಸರೆಯಾಬೇಕು ಎಂದರು.

ಇದೇ ವೇಳೆ ಬ್ಯಾಂಕ್ ಸಿಬ್ಬಂದಿಗಳಾದ ನಿರಂಜನ್ ಕಶ್ಯಪ್, ವಿನುಪಮ, ಹರ್ಷ, ಕಿರಣ್ ಕುಮಾರ್, ಶಶಿಕುಮಾರ್, ನಟೇಶ್, ಮೋಹನ್ ಕುಮಾರ್ ಸೇರಿದಂತೆ 30 ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದರು. ಇವರುಗಳಿಗೆ ಪ್ರಶಂಸನಾ ಪತ್ರ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಎಚ್.ಡಿ.ಎಫ್.ಸಿ ಬ್ಯಾಂಕ್ ಏರಿಯಾ ಹೆಡ್ ಪಿ.ಗೋಪಾಲ್, ಮ್ಯಾನೇಜರ್ ವಿಜಯ್ ಕುಮಾರ್, ಬ್ರಾಂಚ್ ಮ್ಯಾನೇಜರ್ ವಸಂತ್, ಮಂಜುನಾಥ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!