ಕೊರಟಗೆರೆ: ಬಡ ಜನರ ತುರ್ತು ಸೇವೆಗಾಗಿ ಸರಕಾರ ನೀಡಿರುವ ತುರ್ತು ವಾಹನದ ನಿರ್ವಹಣೆ ವಿಫಲವಾಗಿದೆ. ಆರೋಗ್ಯ ಸಚಿವರು ತಕ್ಷಣ ತುರ್ತು ವಾಹನದ ಅವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಬೇಕಿದೆ. ರಾಜ್ಯ ಸರಕಾರ ಗ್ರಾಮೀಣ ಪ್ರದೇಶದ ಬಡಜನರ ಆರೋಗ್ಯಕ್ಕೆ ತಕ್ಷಣ ರಕ್ಷಣೆ ನೀಡಬೇಕಿದೆ ಎಂದು ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ಆಗ್ರಹ ಮಾಡಿದರು.
ಕೊರಟಗೆರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶನಿವಾರ ಚಿರತೆ ದಾಳಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ವಯೋವೃದ್ಧ ರೈತ ಮತ್ತು ಇಬ್ಬರು ಮಕ್ಕಳ ಆರೋಗ್ಯ ವಿಚಾರಿಸಿದ ನಂತರ ಆರೋಗ್ಯಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸಿ ಮಾತನಾಡಿ, ಕೊರಟಗೆರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ 3 ತುರ್ತು ವಾಹನ, ತೋವಿನಕೆರೆ ಮತ್ತು ಕೋಳಾಲದಲ್ಲಿ ತಲಾ ಒಂದು ತುರ್ತು ವಾಹನದ ಸೌಲಭ್ಯವಿದೆ. ತುರ್ತುವಾಹನ ಲಭ್ಯವಿದ್ದರೂ ಅಧಿಕಾರಿಗಳ ನಿರ್ವಹಣೆ ವಿಫಲತೆಯಿಂದ ಬಡ ಜನರಿಗೆ ಸಮಸ್ಯೆ ಸೃಷ್ಟಿಯಾಗಿದೆ. ಆರೋಗ್ಯ ಸಚಿವರು ತಕ್ಷಣ ತುರ್ತು ಸೇವೆಯ ಬಗ್ಗೆ ಮಾಹಿತಿ ಪಡೆದು ಕ್ರಮ ಕೈಗೊಳ್ಳಬೇಕಿದೆ ಎಂದು ಒತ್ತಾಯ ಮಾಡಿದರು.
ಅಪಘಾತ ಆದಾಗ ತುರ್ತು ವಾಹನ ಬರೋದಿಲ್ಲ. ಗರ್ಭಿಣಿಯರ ಹೆರಿಗೆ ವೇಳೆಯು ಸಹಾಯಕ್ಕೆ ತುರ್ತಾಗಿ ವಾಹನ ಸೀಗೋದಿಲ್ಲ. ಈಗ ಚಿರತೆ ದಾಳಿ ಆದಾಗಲೂ ತುರ್ತು ವಾಹನ ಸಿಗದೆ ಖಾಸಗಿ ವಾಹನದಲ್ಲಿ ರೈತರು ಮತ್ತು ಮಕ್ಕಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ರಾಜ್ಯ ಸರಕಾರ ಮತ್ತು ಆರೋಗ್ಯ ಇಲಾಖೆಯ ಮೌನ ಹತ್ತಾರು ಅನುಮಾನಗಳಿಗೆ ಕಾರಣವಾಗಿದೆ ಎಂದು ಆರೋಪ ಮಾಡಿದರು.
ಐ.ಕೆ.ಕಾಲೋನಿಯ ಬಳಿಯ ಬಸ್ನಿಲ್ದಾಣದ ಸಮೀಪ ಶ್ರೀನಿವಾಸ್(60), ರಾಜು (47) ಮೇಲೆ ಚಿರತೆ ದಾಳಿ ನಡೆಸಿದೆ. ನಂತರ ದನದ ಕೊಟ್ಟಿಗೆಯಲ್ಲಿ ಹಾಲು ಕರೆಯುತ್ತಿದ್ದ ಧನುಷ್(13), ಚೇತನ್ (15) ಎಂಬುವರ ಮೇಲೆಯೂ ಚಿರತೆ ದಾಳಿ ನಡೆಸಿದೆ. ಕಳೆದ ವಾರದಿಂದ ನಾಲ್ಕೆದು ಸಲ ಚಿರತೆ ಕಾಣಿಸಿಕೊಂಡು ರೈತರನ್ನು ಭಯಗೊಳಿಸಿದೆ.
ಸ್ಥಳಕ್ಕೆ ತಹಶೀಲ್ದಾರ್ ನಾಹಿದಾ, ಅರಣ್ಯಇಲಾಖೆಯ ಸುರೇಶ್, ಆರೋಗ್ಯಇಲಾಖೆಯ ಮುಖ್ಯಾಧಿಕಾರಿ ಪುಪ್ಪಲತಾ ಸೇರಿದಂತೆ ಇತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Comments are closed.