ತುಮಕೂರು: ನಗರದ ಕ್ಯಾತ್ಸಂದ್ರದಿಂದ ಗುಬ್ಬಿಗೇಟ್ ವರಗೆ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಿರ್ಮಾಣ ಗೊಂಡಿರುವ ರಿಂಗ್ ರಸ್ತೆಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಹೆಸರಿಡಬೇಕು ಎಂದು ನಗರಪಾಲಿಕೆ ಆಯುಕ್ತರು ಹಾಗೂ ಮೇಯರ್ ಅವರಿಗೆ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎನ್.ಗೋವಿಂದರಾಜು ಮನವಿ ಸಲ್ಲಿಸಿದರು.
ತುಮಕೂರು ಜಿಲ್ಲೆ ಸೇರಿದಂತೆ ರಾಜ್ಯಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕೊಡುಗೆ ಅಪಾರ. ಇಂದು ತುಮಕೂರು ಜಿಲ್ಲೆಯ 9 ತಾಲೂಕು ಜನ ಹೇಮಾವತಿ ನೀರು ಕುಡಿಯುತ್ತಿಿದ್ದರೆ ಅದಕ್ಕೆೆ ದೇವೇಗೌಡರ ದೂರದೃಷ್ಟಿಿಯೇ ಕಾರಣ, ಅಲ್ಲದೆ ಬಾಗೂರು- ನವಿಲೆ ಬಳಿ ಏಷ್ಯಾಾದಲ್ಲಿಯೇ ಅತಿದೊಡ್ಡ ಟನಾಲ್ ನಿರ್ಮಿಸಿ ತುಮಕೂರು ಜನರು ವರ್ಷವಿಡೀ ಹೇಮಾವತಿ ನದಿಯ ನೀರು ಕುಡಿಯುವಂತೆ ಮಾಡಿದ್ದಾರೆ. ಹಾಗಾಗಿ ಅವರ ಹೆಸರು ಶಾಶ್ವತವಾಗಿ ಜನಮಾನಸದಲ್ಲಿ ಉಳಿಸುವ ನಿಟ್ಟಿನಲ್ಲಿ ಅವರ ಹೆಸರನ್ನು ರಿಂಗ್ ರಸ್ತೆಗೆ ಇಡಬೇಕೆಂದು ನಮ್ಮೆಲ್ಲಾ ಪಾಲಿಕೆಯ ಕಾರ್ಫೊರೇಟರ್ಸ್ ಮತ್ತು ಜನತೆಯ ಒತ್ತಾಯವಾಗಿದೆ. ಈ ಹಿನ್ನೆಲೆಯಲ್ಲಿ ಮೇಯರ್ ಪ್ರಭಾವತಿ ಸುಧೀಶ್ವರ್ ಹಾಗೂ ಆಯುಕ್ತ ಯೋಗಾನಂದ ಅವರಿಗೆ ಮನವಿ ಸಲ್ಲಿಸಿದ್ದೇವೆ ಎಂದು ಎನ್.ಗೋವಿಂದರಾಜು ತಿಳಿಸಿದರು.
ಇದು ಚುನಾವಣಾ ಗಿಮಿಕ್ ಅಲ್ಲ. ನಮ್ಮೆಲ್ಲಾ ಜೆಡಿಎಸ್ ಕಾರ್ಯಕರ್ತರ ಆಶಯವಾಗಿದೆ. ನಮ್ಮ ಈ ಕೋರಿಕೆಯನ್ನು ಪಾಲಿಕೆಯ ಆಡಳಿತ ಮಂಡಳಿ ಮನ್ನಣೆ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಈ ವೇಳೆ ಪಾಲಿಕೆಯ ಜೆಡಿಎಸ್ ಸದಸ್ಯರಾದ ಧರಣೇಂದ್ರ ಕುಮಾರ್, ಜೆಡಿಎಸ್ ನಗರ ಅಧ್ಯಕ್ಷ ವಿಜಯಕುಮಾರ್, ಶ್ರೀನಿವಾಸ್, ಶ್ರೀಧರ್, ನರಸಿಂಹರಾಜು ಸೇರಿದಂತೆ ಹಲವಾರು ಜೆಡಿಎಸ್ ಕಾರ್ಯಕರ್ತರು ಹಾಜರಿದ್ದರು.
Comments are closed.