ಅಗ್ನಿ ಅವಘಡ: 2 ಎಮ್ಮೆ, 4 ಮೇಕೆ ಸಜೀವ ದಹನ

210

Get real time updates directly on you device, subscribe now.


ತುರುವೇಕೆರೆ: ತಾಲೂಕಿನ ಆನೆಮೆಳೆ ಗ್ರಾಮದ ಹೊರ ವಲಯದಲ್ಲಿದ್ದ ದನದ ಕೊಟ್ಟಿಗೆಗೆ ಸೋಮವಾರ ಮಧ್ಯರಾತ್ರಿ ಆಕಸ್ಮಿಕ ಬೆಂಕಿ ತಗುಲಿ ಸಾಕು ಪ್ರಾಣಿಗಳು ಸಜೀವ ದಹನವಾಗಿ, 15 ಸಾವಿರ ತೆಂಗಿನ ಕಾಯಿ ಸುಟ್ಟು ಬೂದಿಯಾಗಿವೆ.
ಮಾದಿಹಳ್ಳಿ ಗ್ರಾಪಂ ಆನೆಮೆಳೆ ಗ್ರಾಮದ ಶಿವಣ್ಣ ಎಂಬುವರು ಗ್ರಾಮದ ಹೊರ ವಲಯದ ತೋಟದಲ್ಲಿ ವಾಸವಿದ್ದರು, ಸೋಮವಾರ ರಾತ್ರಿ 10 ರ ಸಮಯದಲ್ಲಿ ಎಮ್ಮೆ ಹಾಗೂ ಮೇಕೆಗಳಿಗೆ ಮೇವು ಹಾಕಿದ ಶಿವಣ್ಣ ವಾಸದ ಮನೆಗೆ ಮರಳಿದ್ದರು. ಮಧ್ಯರಾತ್ರಿ ಇದ್ದಕ್ಕಿದ್ದಂತೆ ನಾಯಿಗಳು ಬೊಗಳುವುದನ್ನು ಕೇಳಿ ಎಚ್ಚರಗೊಂಡ ಶಿವಣ್ಣನವರು ದನದ ಕೊಟ್ಟಿಗೆಗೆ ಬೆಂಕಿ ತಗುಲಿರುವುದನ್ನು ಕಂಡಿದ್ದಾರೆ. ಗ್ರಾಮಸ್ಥರಿಗೆ ಹಾಗೂ ಅಗ್ನಿ ಶಾಮಕ ಸಿಬ್ಬಂದಿಗೆ ಫೋನ್ ಮಾಡಿ ಬೆಂಕಿ ಬಿದ್ದಿರುವ ವಿಷಯ ತಿಳಿಸಿದ್ದಾರೆ.

ಗ್ರಾಮಸ್ಥರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಆಗಮಿಸುವ ವೇಳೆಗೆ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ 2 ಎಮ್ಮೆ, 4 ಮೇಕೆ, 40 ಕೋಳಿ ಸಜೀವ ದಹನವಾಗಿವೆ. ದಾಸ್ತಾನು ಮಾಡಲಾಗಿದ್ದ 15 ಸಾವಿರ ತೆಂಗಿನ ಕಾಯಿ ಸಹ ಬೂದಿಯಾಗುವ ಮೂಲಕ ಲಕ್ಷಾಂತರ ನಷ್ಟ ಸಂಭವಿಸಿದೆ.

ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಗ್ರಾಪಂ ಸದಸ್ಯ ನಂಜುಂಡಪ್ಪ, ಬೆಂಕಿ ಆಕಸ್ಮಿಕದಲ್ಲಿ ಕೃಷಿಕ ಶಿವಣ್ಣ ಬದುಕಿಗೆ ಆಸರೆಯಾಗಿದ್ದ ತೆಂಗಿನ ಕಾಯಿ ಹಾಗೂ ಎಮ್ಮೆ, ಮೇಕೆ, ಕೋಳಿ ಕಳೆದುಕೊಂದು ಅತಂತ್ರರಾಗಿದ್ದಾರೆ. ಸರಕಾರ ಕೂಡಲೇ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.

ಘಟನಾ ಸ್ಥಳಕ್ಕೆ ಆರ್ಐ ಶಿವಕುಮಾರ್, ಗ್ರಾಮ ಲೆಕ್ಕಿಗ ಅಂಜನಪ್ಪ, ಪಶು ವೈದ್ಯ ಡಾ.ಮಹೇಶ್, ಗ್ರಾಪಂ ಸದಸ್ಯ ನಂಜುಂಡಪ್ಪ, ಕೀರ್ತಿ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!