ವಾಹನಗಳಿಗೆ ಪರಿಸರ ಸ್ನೇಹಿ ಇಂಧನ ಬಳಸಿ: ಎಸ್ ಪಿಎಂ

248

Get real time updates directly on you device, subscribe now.


ಕುಣಿಗಲ್: ಪರಿಸರ ಕಡೆಗಣಿಸಿ ಆಗುವ ಅಭಿವೃದ್ಧಿ ಮಾನವ ಕುಲಕ್ಕೆ ಮಾರಕ, ಪರಿಸರ ಸ್ನೇಹಿ ಅಭಿವೃದ್ಧಿ ಮಾನವ ಕುಲಕ್ಕೆ ಪೂರಕ.

ಹೀಗಾಗಿ ಉತ್ತಮ ಪರಿಸರ ಸಂರಕ್ಷಣೆಗಾಗಿ ಎಲ್ಲರೂ ಪರಿಸರ ಸ್ನೇಹಿ ಇಂಧನ ಬಳಸುವುದು ಅತ್ಯಗತ್ಯ ಎಂದು ಮಾಜಿ ಸಂಸದ ಎಸ್.ಪಿ. ಮುದ್ದಹನುಮೇ ಗೌಡ ಹೇಳಿದರು.

ಮಂಗಳವಾರ ತಾಲೂಕಿನ ಅಂಚೆಪಾಳ್ಯ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ತಾಲೂಕಿನಲ್ಲೆ ಮೊದಲ ಬಾರಿಗೆ ಸಿಎನ್ಜಿ ಫ್ಯೂಯಲ್ ಸ್ಟೇಷನ್ ಉದ್ಘಾಟಿಸಿ ಮಾತನಾಡಿ, ಬದಲಾವಣೆ ಜಗದ ನಿಯಮ, ಬದಲಾವಣೆಗೆ ತಕ್ಕಂತೆ ಜೀವನ ರೂಢಿಸಿಕೊಳ್ಳಬೇಕಾದ್ದು ಅತ್ಯಗತ್ಯವಾಗಿದೆ.

ಇಂದಿನ ವೇಗದ ಜೀವನದಲ್ಲಿ ವಾಹನ ಬಳಕೆ ತೀರಾ ಅನಿವಾರ್ಯವಾಗಿದ್ದು ಹೆಚ್ಚು ಹೆಚ್ಚು ವಾಹನ ಬಳಕೆ ಹಾಗೂ ವಾಹನಗಳಲ್ಲಿ ಬಳಸುವ ಇಂಧನ ಪರಿಸರಕ್ಕೆ ಮಾರಕವಾಗುತ್ತಿರುವ ಹಿನ್ನೆಲೆಯಲ್ಲಿ ಪರಿಸರ ಸ್ನೇಹಿ ಇಂಧನ ಬಳಕೆಯ ಅಗತ್ಯತೆ ಹೆಚ್ಚಿದೆ. ಈಗಾಗಲೆ ದೆಹಲಿಯಲ್ಲಿ ವಾಹನಗಳ ದಟ್ಟಣೆಯಿಂದಾಗಿ ಸೇವಿಸುವ ಗಾಳಿ ಮಾನದಂಡಕ್ಕೆ ಮೀರಿ ಕಲುಷಿತಗೊಂಡಿದ್ದು, ಸರ್ವೋಚ್ಛ ನ್ಯಾಯಾಲಯವೂ ಸಹ ಪರಿಸರ ಸ್ನೇಹಿ ಇಂಧನ ಬಳಕೆಗೆ ಹೆಚ್ಚು ಒತ್ತು ನೀಡುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ಎಲ್ಲರೂ ಈ ನಿಟ್ಟಿನಲ್ಲಿ ಚಿಂತಿಸಬೇಕಿದೆ.

ನಮ್ಮ ಮುಂದಿನ ಪೀಳಿಗೆಯ ಉತ್ತಮ ಭವಿಷ್ಯಕ್ಕಾಗಿ ಎಲ್ಲರೂ ಪರಿಸರಸ್ನೇಹಿ ಇಂಧನ ಬಳಕೆ ಮಾಡುವ ಪರಿಸರ ಮಾಲಿನ್ಯ ತಡೆಗಟ್ಟಿ ತಮ್ಮ ಅಮೂಲ್ಯ ಕೊಡುಗೆ ನೀಡಬೇಕಿದೆ. ಈ ನಿಟ್ಟಿನಲ್ಲಿ ಇಂತಹ ಪರಿಸರಸ್ನೇಹಿ ಇಂಧನ ಪೂರೈಕೆಯ ತಾಣಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದರು.

ಫ್ಯೂಯಲ್ ಸ್ಟೇಷನ್ ಮಾಲೀಕ ಸುರೇಶ, ಮೆಘ ಸಿಎನ್ಜಿ ಕಂಪನಿಯ ಶ್ರೀನಿವಾಸ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!