ಸ್ಕೇಟಿಂಗ್ನಲ್ಲಿ ಉತ್ತಮ ಪ್ರತಿಭೆಗಳು ಹೊರ ಹೊಮ್ಮಲಿ

150

Get real time updates directly on you device, subscribe now.


ತುಮಕೂರು: ತುಮಕೂರು ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ವತಿಯಿಂದ ದೇವರಾಯನ ದುರ್ಗದ ನಾಮದ ಚಿಲುಮೆ ಕ್ರಾಸ್ನಲ್ಲಿ 60ನೇ ರಾಷ್ಟ್ರಮಟ್ಟದ ಸ್ಕೇಟಿಂಗ್ ಸ್ಪರ್ಧೆ ಆಯೋಜಿಸಲಾಗಿತ್ತು.
ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ನ ಸಹಯೋಗಲ್ಲಿ ಹಮ್ಮಿಕೊಂಡಿದ್ದ ಈ ರಾಷ್ಟ್ರಮಟ್ಟದ ಸ್ಪರ್ಧೆಯನ್ನು ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿ, ಇದು ಅತ್ಯಂತ ಕಠಿಣ ಸ್ಪರ್ಧೆ, ನಿರಂತರ ಅಭ್ಯಾಸದಲ್ಲಿ ತೊಡಗಿದ್ದವರು ಮಾತ್ರ ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸಬಹುದಾಗಿದೆ. ಇಲ್ಲಿ ಭಾಗವಹಿಸುವ ಎಲ್ಲಾ ಸ್ಪರ್ಧಿಗಳು ಶುಭ ಕೋರುತ್ತೇನೆ. ಉತ್ತಮ ಪ್ರತಿಭೆಗಳು ಹೊರ ಹೊಮ್ಮಲಿ ಎಂದು ಹಾರೈಸಿದರು.

ತುಮಕೂರು ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಕಾರ್ಯದರ್ಶಿ ಹಾಗೂ ರಾಜ್ಯ ಸಮಿತಿಯ ಖಜಾಂಚಿ ಲೋಕೇಶ್ವರಯ್ಯ ಮಾತನಾಡಿ, ಬೆಂಗಳೂರಿನಲ್ಲಿ 2023ರ ಜನವರಿ 11 ರಿಂದ 16ವರೆಗೆ ನಡೆಯುವ 60ನೇ ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್- 2023ರ ಭಾಗವಾಗಿ ತುಮಕೂರು ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ನವತಿಂದ ಡೌನ್ ಹಿಲ್ ಮತ್ತು ಅಲ್ಪೇನ್ ಎಂಬ ಎರಡು ವಿಭಾಗಗಳ ಸ್ಪರ್ಧೆ ಆಯೋಜಿಸಿದ್ದು, 26 ರಾಜ್ಯಗಳ 150ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದಾರೆ. ನಾಮದ ಚಿಲುಮೆಯ ಪ್ರಕೃತಿಯಲ್ಲಿ ಸ್ಪರ್ಧೆ ಅಯೋಜಿಸಿದ್ದೇವೆ. 7 ವರ್ಷ ಮೇಲ್ಪಟ್ಟ, 11 ವರ್ಷ ಮೇಲ್ಪಟ್ಟ ಹಾಗೂ 14 ವರ್ಷ ಮೇಲ್ಪಟ್ಟು ಹೀಗೆ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ ಎಂದರು.

ಸ್ಪೂರ್ತಿ ಡೆವಲಪರ್ಸ್ನ ಎಸ್.ಪಿ.ಚಿದಾನಂದ ಮಾತನಾಡಿ, ದೇವರಾಯನ ದುರ್ಗ ಒಂದು ಒಳ್ಳೆಯ ಪರಿಸರವಿರುವ ಜಾಗ, ಸ್ಕೇಟಿಂಗ್ ಅದರಲ್ಲಿಯೂ ಡೌನ್ಹಿಲ್ ವಿಭಾಗಕ್ಕೆ ಹೇಳಿ ಮಾಡಿಸಿದಂತಿದೆ, ಇಲ್ಲಿ ಸ್ಪರ್ಧಿಸಿ, ಅಂತಿಮ ಗೆರೆ ದಾಟುವ ಪ್ರತಿಯೊಬ್ಬ ಸ್ಪರ್ಧಿಯೂ ದೇಶದ ಯಾವುದೇ ಗುಡ್ಡಗಾಡು ಪ್ರದೇಶದಲ್ಲಿ ಸ್ಪರ್ಧೆ ನಡೆದರು ಭಾಗವಹಿಸಬಹುದಾದ ಧೈರ್ಯ ಮತ್ತು ಮನೋಸ್ಥೈರ್ಯ ಬೆಳೆಸಿಕೊಳ್ಳುತ್ತಾನೆ. ಎಲ್ಲರೂ ಕ್ರೀಡಾ ಮನೋಭಾವದಿಂದ ಸ್ಪರ್ಧೆ ನಡೆಸಲಿ ಎಂದು ಶುಭ ಹಾರೈಸಿದರು.
ಈ ವೇಳೆ ಆಯೋಜಕ ಸ್ವಾಮಿ, ಡೌನ್ ಹಿಲ್ನ ತೀರ್ಪುಗಾರ ನಾಗಕುಮಾರ್ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!