ದೂರವಾಣಿ ಕೇಂದ್ರದಲ್ಲಿ ಅಗ್ನಿ ಅವಘಡ

196

Get real time updates directly on you device, subscribe now.


ಕುಣಿಗಲ್: ವಿದ್ಯುತ್ ಅವಘಡದಿಂದಾಗಿ ಪಟ್ಟಣದ ದೂರವಾಣಿ ಕೇಂದ್ರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಸಿಬ್ಬಂದಿ ಯಾರೂ ಇಲ್ಲದ ಕಾರಣ ಬೆಂಕಿ ಇಡೀ ಕಟ್ಟಡ ಆವರಿಸಿಕೊಂಡ ಧಾರುಣ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.

ಪಟ್ಟಣದ ಪುರಸಭೆ ಬಸ್ ನಿಲ್ದಾಣದ ಸಮೀಪ ಇರುವ ದೂರವಾಣಿ ಕೇಂದ್ರದಲ್ಲಿ ಶುಕ್ರವಾರ ಬೆಳಗ್ಗೆ ಏಳುವರೆ ಗಂಟೆ ಸಮಯದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಕಚೇರಿಯಲ್ಲಿ ಸಿಬ್ಬಂದಿ ಯಾರೂ ಇಲ್ಲದ ಕಾರಣ ಬೆಂಕಿ ಇಡೀ ಕಟ್ಟಡ ಆವರಿಸಿಕೊಂಡು ಮುಗಿಲೆತ್ತರಕ್ಕೆ ಹೊಗೆ ಹರಡಿತ್ತು.
ಇದನ್ನು ಕಂಡ ಸಾರ್ವಜನಿಕರು ಅಗ್ನಿಶಾಮಕ ಇಲಾಖೆ ಹಾಗೂ ಬೆಸ್ಕಾಂ ನವರಿಗೆ ಕರೆ ಮಾಡಿದರು. ಬೆಸ್ಕಾಂ ಸಿಬ್ಬಂದಿ ಸ್ಥಳಕ್ಕಾಗಮಿಸಿ ವಿದ್ಯುತ್ ಸರಬರಾಜು ಕಡಿತ ಮಾಡಿದರೆ, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಿಯಂತ್ರಿಸಿದರು. ಇಲಾಖೆ ನಷ್ಟದಲ್ಲಿರುವ ಕಾರಣ ರಾತ್ರಿ ಪಾಳೆಯದ ಕಾವಲುಗಾರ ಮಾತ್ರ ಇದ್ದು ಬೆಳಗ್ಗೆ ಆರು ಗಂಟೆಗೆ ಆತ ಹೊರಟ ನಂತರ ಹತ್ತುವರೆಗೆ ಸಿಬ್ಬಂದಿ ಬರೋವರೆಗೂ ಯಾರು ಇರುವುದಿಲ್ಲ ಎಂದು ಸ್ಥಳೀಯರು ಹೇಳಿದರು.

ಘಟನೆಯಲ್ಲಿ ಅಂದಾಜು 50 ಲಕ್ಷರೂ. ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ. ತುಮಕೂರು ದೂರವಾಣಿ ವೃತ್ತದ ಡಿಜಿಎಂ ಮೂಡಲಗಿರಿಗೌಡ ಮತ್ತು ಇಲಾಖೆಯ ಹಿರಿಯಾಧಿಕಾರಿಗಳು ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು ನಷ್ಟದ ಮೌಲ್ಯಮಾಪನ ಕಾರ್ಯ ನಡೆಸುತ್ತಿದ್ದು, ಮೌಲ್ಯಮಾಪನ ನಡೆದ ನಂತರ ನಷ್ಟದ ಪ್ರಮಾಣ ಖಚಿತವಾಗಿ ತಿಳಿಯಬಹುದೆಂದು ಹೇಳಲಾಗಿದೆ.

Get real time updates directly on you device, subscribe now.

Comments are closed.

error: Content is protected !!