ಗುಬ್ಬಿ: ಪಟ್ಟಣ ಪಂಚಾಯತಿಯಲ್ಲಿ ಶಾಸಕರ ಹಾಗೂ ಪಟ್ಟಣ ಪಂಚಾಯಿತಿ ಅಧ್ಯಕ್ಷರ ಉಪಸ್ಥಿತಿಯಲ್ಲಿ ಅಧಿಕಾರಿಗಳ ಮತ್ತು ಸದಸ್ಯರ ಸಭೆ ನಡೆಯಿತು.
ಪಟ್ಟಣದ ವ್ಯಾಪ್ತಿಯಲ್ಲಿ ಸ್ವಚ್ಛತೆ ಎಂಬುದು ಕಣ್ಮರೆಯಾಗಿದೆ. ಇಲ್ಲಿನ ಅಧಿಕಾರಿಗಳು ಕೆಲಸ ನಿರ್ವಹಣೆ ಮಾಡದೆ ಇರುವ ಪರಿಣಾಮ ಇಡಿ ಪಟ್ಟಣದಲ್ಲಿ ಕಸ ತುಂಬಿ ತುಳುಕುತ್ತಿದೆ ಎಂದು ಸದಸ್ಯರು ಕಾರ್ಯ ನಿರ್ವಹಣಾ ಅಧಿಕಾರಿಯ ಮೇಲೆ ಗರಂ ಆದರು.
ಇನ್ನು ಸಾಕಷ್ಟು ಗೋಲ್ ಮಾಲ್ ಪಟ್ಟಣ ಪಂಚಾಯಿತಿಯಲ್ಲಿ ನಡೆಯುತ್ತಿದ್ದು, ಕೇವಲ ನಲ್ಲಿ ಪೈಪುಗಳು ಎಲೆಕ್ಟ್ರಿಕ್ ವಿಚಾರಗಳಿಗೆ ಲಕ್ಷಾಂತರ ರೂಪಾಯಿ ಬಿಲ್ ಮಾಡಲಾಗಿದೆ. ಹಲವು ಭಾಗದಲ್ಲಿ ಸ್ಯಾನಿಟೈಸರ್ ಮಾಡದೆ ಹಣ ಗುಳುಂ ಮಾಡಿದ್ದಾರೆ. ಇದರ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯ ಮಾಡಿದರು.
ಪರಿಸರ ಯೋಜನಾ ಅಧಿಕಾರಿ ಮೂರು ತಿಂಗಳ ಹಿಂದೆಯೇ ಇಲ್ಲಿಗೆ ಕೆಲಸಕ್ಕೆ ಬಂದರು ಸಹ ಇದುವರೆಗೂ ಗುಬ್ಬಿ ಪಟ್ಟಣ ಪಂಚಾಯತಿಗೆ ಬಂದಿಲ್ಲ. ಅಧಿಕಾರಿಗಳ ಬೇಜವಾಬ್ದಾರಿಯಿಂದ ಸದಸ್ಯರು ತಲೆ ಎತ್ತಿ ಓಡಾಡುವ ಸ್ಥಿತಿ ಇಲ್ಲ.
ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿ ಒಬ್ಬರಿಗೊಂದು ಮತ್ತೊಬ್ಬರಿಗೊಂದು ಮಾಡುತ್ತಿದ್ದಾರೆ. ನಗರೋತ್ಥಾದಲ್ಲಿ ರಸ್ತೆ ಕಾಮಗಾರಿಗಳಿಗೆ ಅನುದಾನ ಹಾಕಿದ್ದರೂ ಸಹ ಸದಸ್ಯರಿಗೆ ಮಾಹಿತಿ ನೀಡುತ್ತಿಲ್ಲ ಎಂದು ದೂರಿದರು.
ಶಾಸಕ ಶ್ರೀನಿವಾಸ್ ಮಾತನಾಡಿ, ಎಲ್ಲರೂ ಒಟ್ಟಿಗೆ ಕೆಲಸ ಮಾಡಿದಾಗ ಪಟ್ಟಣದಲ್ಲಿ ಅಭಿವೃದ್ಧಿ ಮಾಡಬೇಕಾದ ಕರ್ತವ್ಯ ತಮ್ಮೆಲ್ಲರದು. ಅದನ್ನು ಬಿಟ್ಟು ನೀವು ನಿಮ್ಮ ಕಾಲುಗಳನ್ನು ಎಳೆದುಕೊಂಡರೆ ಪಟ್ಟಣ ಪಂಚಾಯಿತಿ ಅಭಿವೃದ್ಧಿ ಮಾಡಲು ಸಾಧ್ಯವಾಗುವುದಿಲ್ಲ. ಮತದಾರರು ನಿಮಗೆ ಮತ ಕೊಟ್ಟಿರುವುದು ಅಭಿವೃದ್ಧಿ ಮಾಡುವುದಕ್ಕೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಮುಖ್ಯಧಿಕಾರಿ ಮಂಜುಳಾ, ಅಧ್ಯಕ್ಷ ಅಣ್ಣಪ್ಪ ಸ್ವಾಮಿ ಸೇರಿದಂತೆ ಎಲ್ಲಾ ಸದಸ್ಯರು, ಅಧಿಕಾರಿಗಳು ಹಾಜರಿದ್ದರು.
Comments are closed.