ಸರ್ಕಾರಿ ನೌಕರರ ಹೋರಾಟಕ್ಕೆ ಬೆಂಬಲ ಇದೆ: ಕೆಎನ್ಆರ್

116

Get real time updates directly on you device, subscribe now.


ಮಧುಗಿರಿ: ನಿಶ್ಚಿತ ಠೇವಣಿ ಯೋಜನೆ ಬದಲಾವಣೆ ಸರ್ಕಾರಿ ನೌಕರರ ವರ್ಗಕ್ಕೆ ಮಾರಕವಾಗಿದ್ದು, ಮುಂಬರುವ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಎನ್ಪಿಎಸ್ ನೌಕರರ ಬೇಡಿಕೆ ಸೇರಿಸಲು ಪ್ರಯತ್ನಿಸಲಾಗುವುದು ಎಂದು ಮಾಜಿ ಶಾಸಕ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್ ರಾಜಣ್ಣ ಭರವಸೆ ನೀಡಿದರು.

ಸೋಮವಾರ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಪ್ರತಿಭಟನಾ ಸಮಾವೇಶಕ್ಕೆ ತೆರಳುತ್ತಿದ್ದ ನೌಕರರನ್ನು ಪಟ್ಟಣದ ರಾಜೀವ್ ಗಾಂಧೀ ಕ್ರೀಡಾಂಗಣದಲ್ಲಿ ಭೇಟಿ ಮಾಡಿ ಮಾತನಾಡಿ, ನೌಕರರ ನ್ಯಾಯಯುತ ಹೋರಾಟಕ್ಕೆ ಬೆಂಬಲ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ನಿಮ್ಮ ನ್ಯಾಯಯುತ ಬೇಡಿಕೆಗೆ ಒಗ್ಗಟು ಮುಖ್ಯ. ನಿಮ್ಮ ಬೇಡಿಕೆಗೆ ನಮ್ಮ ಸಹಕಾರವಿದೆ. ನಿಮ್ಮ ಹೋರಾಟಕ್ಕೆ ಎಲ್ಲಾ ರೀತಿಯ ಬೆಂಬಲ ನೀಡಲು ಬದ್ಧ ಎಂದರು.

ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎನ್.ಮಹಾಲಿಂಗೇಶ್ ಮಾತನಾಡಿ, ಎನ್ಪಿಎಸ್ ನೌಕರರಿಗೆ ಇದು ಕರಾಳ ದಿನವಾಗಿದ್ದು, ನೌಕರರಿಗೆ ಪಿಂಚಣಿ ಇಲ್ಲದಿದ್ದರೆ ವೃದ್ಧಾಶ್ರಮ ಸೇರುವ ಪರಿಸ್ಥಿತಿ ಬರುತ್ತದೆ. ಮುಂದಿನ ದಿನಗಳಲ್ಲಿ ದೆಹಲಿ ಚಲೋ ಹೋರಾಟ ಮಾಡಬೇಕೆಂದು ತಿಳಿಸಿ ಈ ನೌಕರರ ಸಮಸ್ಯೆಯನ್ನು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಸೇರಿಸುವಂತೆ ಕೆ.ಎನ್.ರಾಜಣ್ಣ ಅವರಲ್ಲಿ ಒತ್ತಾಯಿಸಿದರು.

ಎನ್ಪಿಎಸ್ ನೌಕರರ ಸಂಘದ ಅಧ್ಯಕ್ಷ ರಂಗನಾಥ್ ಮಾತನಾಡಿ, ಎನ್ಪಿಎಸ್ ನೌಕರರ ಮರಣ ಶಾಸನ ರದ್ದುಪಡಿಸಬೇಕು ಎಂದು ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ 33 ಇಲಾಖೆಗಳ 5 ಲಕ್ಷಕ್ಕೂ ಹೆಚ್ಚು ಮಂದಿ ನೌಕರರು ಪ್ರತಿಭಟನಾ ಸಮಾವೇಶದಲ್ಲಿ ಸೇರಲಿದ್ದಾರೆ. ಇದು ನಮಗೆ ಭಿಕ್ಷೆಯಲ್ಲ, ನಮ್ಮ ಸಂವಿಧಾನದ ಹಕ್ಕು. ನಮ್ಮ ಹಕ್ಕನ್ನು ನಮಗೆ ನೀಡಿ ಎಂದು ಒತ್ತಾಯಿಸಿದ ಅವರು ಎನ್ಪಿಎಸ್ ಹೋರಾಟ ವೆಂದರೆ ಸರ್ಕಾರಿ ನೌಕರರ ಹೋರಾಟ ಎಂದೇ ಅರ್ಥ. ಅಂತಹ ಹೋರಾಟಕ್ಕೆ ಬೆಂಬಲ ಸೂಚಿಸಿದ ಕೆ.ಎನ್.ರಾಜಣ್ಣ ಅವರಿಗೆ ರಾಜ್ಯದ ನೌಕರರ ಪರವಾಗಿ ಧನ್ಯವಾದ ತಿಳಿಸುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಎನ್ಪಿಎಸ್ ನೌಕರರ ಗೌರವಾಧ್ಯಕ್ಷ ಡಾ.ನವೀನ್, ಪ್ರಧಾನ ಕಾರ್ಯದರ್ಶಿ ಸುಬ್ಬರಾಯ, ಖಜಾಂಚಿ ಪ್ರೇಮ್ ಕುಮಾರ್, ಉಪಾಧ್ಯಕ್ಷ ಉಮೇಶ್ ಗೌಡ, ಹರೀಶ್, ನೇತ್ರಾವತಿ, ಸಂಧ್ಯಾ ರಾಣಿ, ಲತಾಮಣಿ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಸಂಜಯ್, ಪುರಸಭಾ ಮಾಜಿ ಅಧ್ಯಕ್ಷ ಎನ್.ಗಂಗಣ್ಣ ಮುಖಂಡ ಶಂಕರ್ ನಾರಾಯಣ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!