2023ಕ್ಕೆ ತುಮಕೂರು ಎಂಎಲ್ಎ ನಾನೇ!

ಚುನಾವಣೆಗೆ ಸ್ಪರ್ಧಿಸುವುದು ಖಚಿತ: ಬೊಮ್ಮನಹಳ್ಳಿ ಬಾಬು

196

Get real time updates directly on you device, subscribe now.

ತುಮಕೂರು:ತುಮಕೂರು ವಿಧಾನಸಭಾ ಕ್ಷೇತ್ರದಲ್ಲಿ ನಾನ್ ಸ್ಪರ್ಧಿಸೋದು ಖಚಿತ.. 2023ಕ್ಕೆ ತುಮಕೂರು ಎಂಎಲ್ಎ ನಾನೇ!. ಹೀಗೆ ಹೇಳಿದವರೂ ಬೇರೆ ಯಾರೂ ಅಲ್ಲ.. ಅಟ್ಟಿಕಾ ಗೋಲ್ಡ್ ಕಂಪನಿಯ ಬೊಮ್ಮನಹಳ್ಳಿ ಬಾಬು
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮದು ಕುಮಾರಣ್ಣನ ಪಕ್ಷ, ನಾನು ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಬಯಸಿದ್ದೇನೆ. 2023ಕ್ಕೆ ತುಮಕೂರಿನಲ್ಲಿ ಎಂಎಲ್ಎ ಆಗುವುದು ನಾನೇ ಎಂದು ಹೇಳುವ ಮೂಲಕ ಜೆಡಿಎಸ್ ಅಭ್ಯರ್ಥಿ ಗೋವಿಂರಾಜುಗೆ ಬೊಮ್ಮನಹಳ್ಳಿ ಬಾಬು ಮತ್ತೊಮ್ಮೆ ಟಾಂಗ್ ಕೊಟ್ಟಿದ್ದಾರೆ.

ತುಮಕೂರು ನಗರದಲ್ಲಿ ನಡೆದ ಪಂಚರತ್ನ ರಥಯಾತ್ರೆಯ ಸಂಪೂರ್ಣ ಖರ್ಚು ಭರಿಸಿದ್ದು ನಾನೇ, ಆದರೆ ಅಂದು ನಾನು ನನ್ನ ಕುಟುಂಬ ಸಮೇತ ಪ್ರವಾಸ ಹೋಗಿದ್ದ ಕಾರಣ ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ ಎಂದರು.
ಕಳ್ಳರಿಂದ ಚಿನ್ನ ಖರೀದಿಸಿದ್ದಾರೆ ಎಂದು ಅಟ್ಟಿಕಾ ಬಾಬು ಅವರನ್ನು ಆಂಧ್ರ ಪೊಲೀಸರು ಬಂಧಿಸಿದ್ದಾರೆ ಎಂದು ಕೆಲವು ಮಾಧ್ಯಮಗಳು ತಪ್ಪು ವರದಿ ಮಾಡಿವೆ. ಎರಡನೆ ಹೆಂಡತಿ ದೂರು ನೀಡಿದ್ದು, ಆ ಸಂಬಂಧ ಬಂಧನವಾಗಿದೆ ಎಂದು ಸುದ್ದಿ ಬಂತು, ಈ ಎಲ್ಲಾ ಸುದ್ದಿ ಸುಳ್ಳು, ನನ್ನ ಸಾಕು ಮಗನ ಮದುವೆ ವಿಚಾರದಲ್ಲಿ ವ್ಯತ್ಯಾಸವಾಗಿ ಮಗನ ಹೆಂಡತಿ ಕಡೆಯವರು ನನ್ನ ಮೇಲೆ ಕಂಪ್ಲೆಟ್ ಕೊಟ್ಟಿದ್ದರು. ಆ ಸಂಬಂಧ ಆಂಧ್ರ ಪೊಲೀಸರು ನನ್ನನ್ನು ವಿಚಾರಣೆಗೆ ಕರೆದಿದ್ರು, ವಿಚಾರಣೆಗೆ ಹೋಗಿ ಪ್ರಕರಣ ಬಗೆಹರಿಸಿಕೊಳ್ಳಲಾಗಿದೆ ಎಂದಿದ್ದಾರೆ.

2013 ರಲ್ಲಿ ಅಟ್ಟಿಕಾ ಗೋಲ್ಡ್ ಕಂಪನಿ ತೆರೆದು 2015 ರಲ್ಲಿ ಅದನ್ನು ಪ್ರೈವೇಟ್ ಕಂಪನಿ ಮಾಡುತ್ತೇನೆ. ನಮ್ಮ ಸಂಸ್ಥೆ ಕಳ್ಳರಿಂದ ಬಂಗಾರ ಖರೀದಿ ಮಾಡಲ್ಲ, ನಾವು ಪಾರದರ್ಶಕವಾಗಿ ಚಿನ್ನ ಖರೀದಿ ಮಾಡ್ತೇವೆ. ಈ ಸಂಬಂಧ ಹಿಂದೆ ನನ್ನ ಮೇಲೆ 33 ಕೇಸ್ ಇದ್ದವು, ನಾನು ಹೈಕೋರ್ಟ್ನಲ್ಲಿ ಹೋರಾಡಿದ್ದ ಕ್ಕೆ 31 ಕೇಸ್ ಕ್ವಾಶ್ ಆಗಿವೆ. ವರ್ಷಕ್ಕೆ ಸಾವಿರಾರು ಕೋಟಿ ವ್ಯವಹಾರ ಮಾಡುವ ನಮ್ಮ ಕಂಪನಿ ಕಾನೂನು ರೀತಿಯೇ ನಡೆಯುತ್ತಿದೆ. ಸರ್ಕಾರಕ್ಕೆ ಸಾಕಷ್ಟು ತೆರಿಗೆ ಕಟ್ಟಲಾಗುತ್ತಿದೆ ಎಂದಿದ್ದಾರೆ.

ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕರು ನನ್ನ ಮೇಲೆ ಮಾಡಿರುವ ಆರೋಪ ಸಂಬಂಧ ಮಾನನಷ್ಟ ಕೇಸ್ ನೋಟಿಸ್ ಕಳಿಸಿದ್ದೇನೆ. ಅವರು ಕ್ಷಮೆ ಕೇಳಿದರೆ ಕೇಸ್ ಕೈ ಬಿಡುವೆ, ಇಲ್ಲವಾದರೆ ಹೋರಾಟ ಮುಂದುವರೆಸುವೆ ಎಂದು ಬೊಮ್ಮನಹಳ್ಳಿ ಬಾಬು ಹೇಳಿದ್ದಾರೆ.

Get real time updates directly on you device, subscribe now.

Comments are closed.

error: Content is protected !!