ಮೀಸಲಾತಿಗಾಗಿ ಬಲಿಜ ಸಂಘದಿಂದ ಪ್ರತಿಭಟನೆ

211

Get real time updates directly on you device, subscribe now.


ಶಿರಾ: ಬಲಿಜಿಗರು ಮತ್ತೆ ಪೂರ್ಣ ಪ್ರಮಾಣದ 2ಎ ಮೀಸಲಾತಿ ಮರಳಿ ಪಡೆಯುವುದಕ್ಕಾಗಿ ಶಿರಾದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಶಿರಾ ತಾಲೂಕ್ ಶ್ರೀಯೋಗಿ ನಾರೇಯಣ ಬಲಿಜ ಸಂಘ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.

ಹಲವಾರು ಆಯೋಗಗಳಲ್ಲಿ ಹಿಂದುಳಿದ ಬಲಿಜಗರಿಗೆ ಮೀಸಲಾತಿ ನೀಡಬೇಕೆಂದು ಸರ್ಕಾರಗಳಿಗೆ ಶಿಫಾರಸ್ಸು ಮಾಡಿದ್ದರೂ ಅವುಗಳನ್ನೆಲ್ಲ ಕಡೆಗಣಿಸಿ ಬಲಿಷ್ಠ ಜನಾಂಗಗಳ ನಡುವೆ ನಮ್ಮನ್ನು ತುಳಿತಕ್ಕೆ ಒಳಗಾಗುವಂತೆ ಮಾಡಿದ್ದಾರೆ. 63 ವಿಧಾನಸಭಾ ಕ್ಷೇತ್ರಗಳಲ್ಲಿ ಬಲಜಿಗರು ನಿರ್ಣಾಯಕವಾಗಿರುವುದರಿಂದ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪಿಸಬೇಕು ಎಂದು ಶಿರಾ ತಾಲೂಕ್ ಯೋಗಿ ನಾರೇಯಣ ಬಲಿಜ ಸಂಘದ ಅಧ್ಯಕ್ಷ ಡಾ.ಬಿ.ಗೋವಿಂದಪ್ಪ ಒತ್ತಾಯಿಸಿದರು.

ಪ್ರತಿಭಟನೆ ಮೆರವಣಿಗೆ ಶಿರಾ ನಗರದ ಪ್ರವಾಸಿ ಮಂದಿರದ ವೃತ್ತದಿಂದ ಮುಖ್ಯರಸ್ತೆ, ಕೈವಾರ ತಾತಯ್ಯ ವೃತ್ತ, ಖಾಸಗಿ ಬಸ್ ನಿಲ್ದಾಣದ ವರೆಗೂ ಮತ್ತು ಬುಕ್ಕಾಪಟ್ಟಣ ವೃತ್ತದ ಮಾರ್ಗವಾಗಿ ಮಿನಿ ವಿಧಾನ ಸೌಧದ ವರೆಗೆ ತೆರಳಿ ತಾಲೂಕು ದಂಡಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ತುಳಸಿರಾಮ್, ಉಪಾಧ್ಯಕ್ಷ ವಿರೂಪಾಕ್ಷ, ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನಮ್ಮ, ಯುವ ಘಟಕದ ಅಧ್ಯಕ್ಷ ಸಿಂಚುನಾರಾಯಣ್, ಮಾಜಿ ನಗರ ಸಭಾ ಸದಸ್ಯ ನಟರಾಜ್, ಪುಷ್ಪಲತಾ, ಡೈರಿ ಕುಮಾರ್, ಸುರೇಶ್ ಬಾಬು, ಎಸ್.ಎನ್.ಜೈಪಾಲ್, ಮಧುಸೂದನ್, ಹೇಮಂತ್, ದಯಾನಂದ, ಮಂಜುನಾಥ್, ಶ್ರೀಧರ್ ಬಾಬು, ರತ್ನಸಂದ್ರ ನಾಗರಾಜು, ರಮೇಶ್, ಶಿವಣ್ಣ, ಸಿದ್ದರಾಮೇಶ್ವರ, ಗಿರಿಧರ್, ಲಕ್ಷ್ಮಿ, ಕೋಟೆ ವಿಜಯಮ್ಮ, ಶಕುಂತಲಾ, ಶೋಭಾ, ಪುಟ್ಟ ತಾಯಮ್ಮ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!