ಅಡಿಕೆ, ಕೊಬ್ಬರಿ ದರ ಹೆಚ್ಚಳಕ್ಕೆ ರೈತರ ಆಗ್ರಹ

84

Get real time updates directly on you device, subscribe now.


ಗುಬ್ಬಿ: ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ರೈತ ಸಂಘದಿಂದ ಅಡಿಕೆ ಹಾಗೂ ಕೊಬ್ಬರಿ ದರ ಹೆಚ್ಚು ಮಾಡುವಂತೆ ಆಗ್ರಹಿಸಿ ಬಸ್ ನಿಲ್ದಾಣದಿಂದ ಮೆರವಣಿಗೆಯಲ್ಲಿ ಆಗಮಿಸಿ ತಹಶೀಲ್ದಾರ್ ಬಿ.ಆರತಿ ಅವರಿಗೆ ಮನವಿ ಸಲ್ಲಿಸಿದರು.

ತಾಲ್ಲೂಕು ರೈತ ಸಂಘದ ಅಧ್ಯಕ್ಷ ವೆಂಕಟೇಗೌಡ ಮಾತನಾಡಿ, ಅಡಿಕೆಗೆ ಕನಿಷ್ಠ 70,000 ಹಾಗೂ ಕೊಬ್ಬರಿಗೆ ಕನಿಷ್ಠ 20,000 ದರ ನಿಗದಿ ಮಾಡಲೇಬೇಕು. ಅಡಿಕೆ ಹಾಗೂ ಕೊಬ್ಬರಿ ದರವು ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದ್ದು, ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಗುಬ್ಬಿ ತಾಲ್ಲೂಕಿನಲ್ಲಿ ಮೂರು ಮಂದಿ ರೈತರು ಈಗಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದು ಸರಕಾರ ದರ ನಿಗದಿ ಮಾಡದೆ ಹೋದರೆ ಮುಂದಿನ ದಿನದಲ್ಲಿ ಇನ್ನೂ ಹೆಚ್ಚಿನ ಸಾವು ನೋಡಬೇಕಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಸಿ.ಶಂಕರಪ್ಪ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ದೇಶದ ಒಟ್ಟಾರೆ ಅಡಿಕೆ ತೆಂಗು ಉತ್ಪಾದನೆ ಶೇಕಡ 50 ಭಾಗ ಜಿಲ್ಲೆಯಿಂದಲೇ ಬೆಳೆಯಲಾಗುತ್ತಿದೆ.

ಪ್ರತಿ ವರ್ಷ ಜಿಲ್ಲೆಯಲ್ಲಿ ಸುಮಾರು 30,000 ಕೋಟಿ ವಹಿವಾಟು ನಡೆಯುತ್ತಿದೆ. ಕಳೆದ ಕೆಲವು ದಿನಗಳಿಂದ ಅಡಿಕೆಗೆ 15,000, ತೆಂಗು ಬೆಳೆಗೆ 6,000 ಕುಸಿತ ಕಂಡಿದೆ. ಗುಬ್ಬಿ ತಾಲ್ಲೂಕಿನಲ್ಲಿ 20,000 ಹೆಕ್ಟೇರ್ನಲ್ಲಿ ಅಡಿಕೆ, 37 ಸಾವಿರ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ. ಬೆಲೆ ಕುಸಿತದಿಂದ ಹೆಚ್ಚು ರೈತರು ನಷ್ಟ ಅನುಭವಿಸಿದ್ದು ಸಾವಿನ ದವಡೆಗೆ ಸಿಲುಕುತ್ತಿದ್ದಾರೆ. ಸರಕಾರ ರೈತರ ಪರವಾಗಿ ಕ್ರಮ ಕೈಗೊಳ್ಳದೆ ಹೋದರೆ ದೊಡ್ಡ ಮಟ್ಟದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಯುವ ಘಟಕದ ಅಧ್ಯಕ್ಷ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಸಿ.ಲೋಕೇಶ್, ರೈತ ಮುಖಂಡರಾದ ಗಂಗೆಗೌಡ, ನರಸಿಂಹ ಮೂರ್ತಿ, ಜಗದೀಶ್, ಕಾಳೇಗೌಡ, ಗುರು ಚನ್ನಬಸವಣ್ಣ, ಹುಚ್ಚೇಗೌಡ, ಸಿ.ಟಿ.ಕುಮಾರ್, ಅಸ್ಲಾಂ ಪಾಷಾ, ಕಿಟ್ಟಿ ಇತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!